ಮಾಜಿ ಪ್ರಿಯಕರನಿಗೆ ಗಾರ್ಬೇಜ್ ಬ್ಯಾಗ್ ಪಾರ್ಸೆಲ್ ಕಳಿಸಿ ಸೇಡು ತೀರಿಸಿಕೊಂಡ ಯುವತಿ…!

ಜೋಡಿಗಳು ಬ್ರೇಕಪ್ ಆದ ಬಳಿಕ ಅವರ ನಡುವಿನ ಕೋಪ ತಾರಕಕ್ಕೇರಿರುತ್ತೆ. ಪ್ರತೀಕಾರದ ಮನೋಭಾವ ಅವರ ನಡುವೆ ಬೆಳೆದಿರುತ್ತೆ. ಹಾಗೆ ಇಲ್ಲೊಬ್ಬಳು ಯುವತಿ ತನ್ನ ಮಾಜಿ ಗೆಳೆಯನಿಗೆ ವಿಶೇಷವಾದ ಪಾರ್ಸೆಲ್ ಒಂದನ್ನು ಕಳುಹಿಸುವ ಮೂಲಕ ಸೇಡನ್ನು ತೀರಿಸಿಕೊಂಡಿದ್ದಾಳೆ. ಇದು ಟ್ವಿಟ್ಟರ್‌ನಲ್ಲಿ ಸೆನ್ಸೇಶನ್ ಸೃಷ್ಟಿಸಿದೆ.

ನಮನ್ ಹೆಸರಿನ ಟ್ವಿಟ್ಟರ್ ಅಕೌಂಟ್ ಹೊಂದಿರುವ ವ್ಯಕ್ತಿ ತನ್ನ ರೂಮ್‌ಮೇಟ್ ಒಬ್ಬ ಆತನ ಮಾಜಿ ಗೆಳತಿಯಿಂದ ವಿಶೇಷ ಪಾರ್ಸೆಲ್ ಒಂದನ್ನು ಪಡೆದಿದ್ದಾನೆ ಎಂದು ಬರೆದಿದ್ದಾರೆ. ಜತೆಗೆ ಆಕೆ ತನ್ನ ರೂಮ್‌ಮೇಟ್‌ಗೆ ಕಳುಹಿಸಿದ ಮೇಸೆಜ್‌ನ ಸ್ಕ್ರೀನ್‌ಶಾಟ್ ಸಹ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಮಾರ್ಟ್‌ನಿಂದ ನಿಮಗೊಂದು ಉಡುಗೊರೆಯನ್ನು ಕಳುಹಿಸಿದ್ದೇನೆ. ಅದನ್ನು ಪ್ರೀತಿಯಿಂದ ಧರಿಸಿ. ಸೈಜ್ ಸರಿಯಾಗದಿದ್ದರೆ ನನಗೆ ತಿಳಿಸಿ. ನಾನು ನಿಮಗೆ ದೊಡ್ಡದನ್ನು ಕಳುಹಿಸುತ್ತೇನೆ ಎಂದು ಆ ಸಂದೇಶದಲ್ಲಿ ಬರೆಯಲಾಗಿದೆ.

ಪಾರ್ಸೆಲ್‌ನಲ್ಲಿ ಕಸ ತುಂಬಿಸುವ ಚೀಲಗಳ ಪ್ಯಾಕ್ ಇದ್ದು ಅದರ ಫೋಟೋವನ್ನು ಸಹ ಅಪ್ಲೋಡ್ ಮಾಡಲಾಗಿದೆ. ನನ್ನ ರೂಮ್‌ಮೇಟ್‌ಗಾಗಿ ಆತನ ಮಾಜಿ ಗೆಳತಿ ಇದನ್ನು ಕಳುಹಿಸಿದ್ದಾಳೆ. ಇದನ್ನು ನೋಡಿ ನನಗೆ ನಗು ತಡೆಯೋದಕ್ಕೆ ಸಾಧ್ಯವಾಗಿಲ್ಲ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಮಂಗಳವಾರ ಪೋಸ್ಟ್ ಮಾಡಿರುವ ಈ ಟ್ವೀಟ್ 6.48 ಲಕ್ಷ ವ್ಯೂವ್ಸ್ ಆಗಿದೆ. ಇದಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಪ್ರತಿಕ್ರಿಯೆ ನೀಡಿದ್ದು ನಿಮಗೆ ಬ್ಯಾಂಡೇಜ್ ಕೊಡಬೇಕು ಎಂದು ಅಂದುಕೊಂಡಿದ್ದೆವು. ಆದ್ರೆ ನಿಮಗಾಗಿರುವ ಗಾಯಕ್ಕೆ ಅದು ಸಹ ಕಡಿಮೆಯಾಗಬಹುದು ಎಂದು ಹೇಳಿದೆ.

ಈ ಗಾರ್ಬೆಜ್ ಬ್ಯಾಗ್‌ನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿ ಕೆಲವು ಜನರಿಗೆ ಕಳುಹಿಸಬೇಕೆಂದು ಟಿಟ್ಟರ್ ಯೂಸರ್ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಳಕೆದಾರರು ಪ್ರತಿಕ್ರಿಯಿಸಿದ್ದು ನಾನು ದೇವರ ಆಣೆಗೂ ನಗದಿರೋದಕ್ಕೆ ತುಂಬಾ ಪ್ರಯತ್ನಿಸಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದನ್ನು ವಿಷ್ ಲಿಸ್ಟ್‌ಗೆ ಹಾಕಿದ್ದು ಜೀವನದಲ್ಲಿ ಒಮ್ಮೆಯಾದರೂ ಈ ರೀತಿ ಮಾಡಬೇಕು ಎಂದು ಹೇಳಿದ್ದಾರೆ.

https://twitter.com/yourtwtbro/status/1681289988087123968?ref_src=twsrc%5Etfw%7Ctwcamp%5Etweetembed%7Ctwterm%5E1681289988087123968%7Ctwgr%5Ef6d9061e40049784f0a52e1cbc5158d0a642a239%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwomans-sweet-revenge-parcel-ex-boyfriend-8850302%2F

https://twitter.com/SwiggyInstamart/status/1681544016410689537?ref_src=twsrc%5Etfw%7Ctwcamp%5Etweetembed%7Ctwterm%5E1681544016410689537%7Ctwgr%5Ef6d9061e40049784f0a52e1cbc5158d0a642a239%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwomans-sweet-revenge-parcel-ex-boyfriend-8850302%2F

https://twitter.com/french_friiiess/status/1681514637089710081?ref_src=twsrc%5Etfw%7Ctwcamp%5Etweetembed%7Ctwterm%5E1681514637089710081%7Ctwgr%5Ef6d9061e40049784f0a52e1cbc5158d0a642a239%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwomans-sweet-revenge-parcel-ex-boyfriend-8850302%2F

https://twitter.com/Alishbamaryam91/status/1681345978861862925?ref_src=twsrc%5Etfw%7Ctwcamp%5Etweetembed%7Ctwterm%5E1681345978861862925%7Ctwgr%5Ef6d9061e40049784f0a52e1cbc5158d0a642a239%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fwomans-sweet-revenge-parcel-ex-boyfriend-8850302%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read