HomeLatest Newsರಾಜ್ಯದ ಜನತೆಗೆ ಗುಡ್ ನ್ಯೂಸ್: ಹೊಸ ವರ್ಷ ಜನವರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ಕನ್ನಡದ ಓಟಿಟಿ

ರಾಜ್ಯದ ಜನತೆಗೆ ಗುಡ್ ನ್ಯೂಸ್: ಹೊಸ ವರ್ಷ ಜನವರಿಗೆ ಕೈಗೆಟುಕುವ ಅಗ್ಗದ ದರದಲ್ಲಿ ಕನ್ನಡದ ಓಟಿಟಿ

ಕನ್ನಡದ ಸಿನೆಮಾ, ಕಿರುತೆರೆ ಧಾರವಾಹಿ, ಪ್ರಾದೇಶಿಕ ವಿಭಿನ್ನ ಜಾನಪದ, ಕಲೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣ ಮಾಡಲು ಹೊಸವರ್ಷಕ್ಕೆ ಜನರ ಕೈಗೆಟುಕುವ ದರದಲ್ಲಿ ಕನ್ನಡದ ಓಟಿಟಿ (ಓವರ್ ದಿ ಟಾಪ್) ಪ್ಲಾಟ್‌ಫಾರ್ಮ್ ಸೃಜಿಸಲಾಗುವುದು ಎಂದು ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ ಪಾಷ ತಿಳಿಸಿದರು.

ದಾವಣಗೆರೆ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾದೇಶಿಕತೆಗೆ ತಕ್ಕಂತೆ ಗ್ರಾಮೀಣ ಸೊಗಡಿನ ಕಲೆ, ಪ್ರತಿಭೆಗಳನ್ನು ಹೊಂದಿದೆ. ಇಂತಹ ಕಲೆ, ಪ್ರತಿಭೆಗಳನ್ನು ದೇಶ, ವಿಶ್ವವ್ಯಾಪಿ ಪರಿಚಯಿಸಲು ಆನ್‌ಲೈನ್ ಓಟಿಟಿ ವೇದಿಕೆ ಸಹಕಾರಿಯಾಗಲಿದೆ. ಈ ಯೋಜನೆ ಕುರಿತು ಪ್ರಸಕ್ತ ವರ್ಷದ ಬಜೆಟ್ ನಲ್ಲಿ ಘೋಷಣೆಯಾಗಿ ಸಿದ್ಧತೆಗೆ ಹಲವು ಉನ್ನತ ಮಟ್ಟದ ಸಭೆಗೂ ನಡೆದಿದ್ದು, ಈಗಾಗಲೇ ಅಗತ್ಯ ತಾಂತ್ರಿಕ ಸಿದ್ದತಾ ಕ್ರಮಗಳೂ ಸಹ ನಡೆಯುತ್ತಿವೆ. ಈ ವೇದಿಕೆ ನಿರ್ಮಾಣದ ಮೂಲಕ ಕನ್ನಡ ಭಾಷೆ, ನೆಲ-ಜಲ ಪ್ರಾಮುಖ್ಯತೆ ತಿಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಅಲ್ಲದೇ ಗುರುತರವಾದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಸಿದಂತಾಗುತ್ತದೆ. ಜತೆಗೆ ಹೆಚ್ಚಿನ ಅವಕಾಶ ಸಿಗಲಿವೆ. ಓಟಿಟಿಯೂ ಪ್ರಸ್ತುತ ಹೆಚ್ಚಿನ ಪ್ರಚಲಿತದಲ್ಲಿದ್ದು, ಗುಣಮಟ್ಟದಲ್ಲಿ ಜನರ ಕೈಗೆಟುಕುವ ದರದಲ್ಲಿ ಸೃಜಿಸಲಾಗುವುದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಸಿನೆಮಾ, ಕಿರುತೆರೆ ಸಿನೆಮಾ, ಧಾರವಾಹಿ, ಭೌಗೋಳಿಕ ಭಿನ್ನತೆ ಇರುವ ಜಾನಪದ ಕಲೆಯ ದೃಶ್ಯಗಳನ್ನು ಕುಳಿತಲ್ಲಿಯೇ ವೀಕ್ಷಿಸಬಹುದಾಗಿದೆ. ಆದರೆ ಕನ್ನಡದ ಓಟಿಟಿ ಮೂಲಕ ಸಿನೆಮಾ ನೋಡ ಬಯಸುವವರು ನಿಗದಿತ ಹಣ ಸಂದಾಯ ಮಾಡುವ ಮುಖೇನ ಚಂದಾರರಾಗಬೇಕಿದೆ ಎಂದರು.

ಇಂತಹ ವೇದಿಕೆ ನಿರ್ಮಾಣ ಮಾಡುವುದುರಿಂದ ನವ-ನವೀನ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಲಿದ್ದು, ನಿರ್ಮಾಪಕ, ನಿರ್ದೇಶಕರಿಗೆ ಹಾಗೂ ಯುವ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ಈ ಹಿಂದೆ ರಾಜ್ಯದಲ್ಲಿ ೪ ಸಾವಿರ ಚಿತ್ರಮಂದಿರಗಳಿದ್ದವು. ಆದರೆ, ಚಿತ್ರಮಂದಿರಗಳಿಗೆ ತೆರೆಳಿ ಸಿನೆಮಾ ನೋಡುಗರಿಲ್ಲದೇ ಇಂದು 300 ರಿಂದ 400 ಕ್ಕೆ ಕುಸಿದಿವೆ. ಕಾರಣ ತೆರೆಯ ಮೇಲೆ ಬಿಡುಗಡೆಯಾಗಬೇಕಿದ್ದ 4 ಸಾವಿರ ಸಿನೆಮಾಗಳು ತೆರೆ ಕಂಡಿಲ್ಲ. ಓಟಿಟಿ ನಿರ್ಮಾಣದಿಂದ ಸಂಕಷ್ಟದಲ್ಲಿರುವ ನಿರ್ಮಾಕರಿಗೆ, ನಿರ್ದೇಶಕರಿಗೆ, ನಟರಿಗೆ ತುಂಬಾ ಉಪಯುಕ್ತವಾಗಲಿದೆ. ಆದ್ದರಿಂದ ಇದನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಸರ್ಕಾರವು ಸಹ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಕೇರಳ ಸರ್ಕಾರ, ಕೇಂದ್ರ ಸರ್ಕಾರ ಓಟಿಟಿ ವೇದಿಕೆ ಸೃಜಿಸಿದ್ದು, ಕನ್ನಡದ ಮೊದಲ ಓಟಿಟಿಯನ್ನು ನೆಟ್ ಪ್ಲೆಕ್ಸ್, ಅಮೇಜಾನ್ ಗಿಂತಲೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಲಾಗುತ್ತಿದೆ. ಕನ್ನಡಿಗರು ನಮ್ಮ ನಾಡಿನ ಓಟಿಟಿಗೆ ಹೆಚ್ಚಿನ ಚಂದಾದಾರರಾಗುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular