HomeLatest NewsBREAKING : ಬಾಕ್ಸ್ ಆಫೀಸ್' ನಲ್ಲಿ ಕಾಂತಾರ-1 ಅಬ್ಬರದ ಗಳಿಕೆ : 1 ವಾರಕ್ಕೆ ಬರೋಬ್ಬರಿ...

BREAKING : ಬಾಕ್ಸ್ ಆಫೀಸ್’ ನಲ್ಲಿ ಕಾಂತಾರ-1 ಅಬ್ಬರದ ಗಳಿಕೆ : 1 ವಾರಕ್ಕೆ ಬರೋಬ್ಬರಿ 509 ಕೋಟಿ ಕಲೆಕ್ಷನ್.!

ಬೆಂಗಳೂರು : ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಚಿತ್ರ ಧೂಳೆಬ್ಬಿಸಿದೆ.
ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದ ಕಾಂತಾರ-1 ಅಬ್ಬರದ ಗಳಿಕೆ ಮಾಡಿದ್ದು, 1 ವಾರಕ್ಕೆ ಬರೋಬ್ಬರಿ 509 ಕೋಟಿ ಕಲೆಕ್ಷನ್ ಮಾಡಿದೆ.

ರಿಲೀಸ್ ಆದ 2 ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿದ ಚಿತ್ರ 1 ವಾರಕ್ಕೆ 509.25 ಕೋಟಿ ಗಳಿಸಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.ದೇಶಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ, ದೇಶಾದ್ಯಂತ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಕಾಂತಾರ-1 ಪೌರಾಣಿಕ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾತ್ರವರ್ಗ

* ರಿಷಬ್ ಶೆಟ್ಟಿ – ಬೆರ್ಮೆ (ಕಥಾನಾಯಕ), ನಾಗ ಸಾಧು ಮತ್ತು ಯೋಧ

• ರುಕ್ಮಿಣಿ ವಸಂತ್ – ಕನಕವತಿ ರಾಜಕುಮಾರಿ
• ಗುಲ್ಶನ್ ದೇವಯ್ಯ – ಕುಲಶೇಖರ, ರಾಜವಂಶದ ಶಕ್ತಿಶಾಲಿ ನಾಯಕ
• ಜಯರಾಮ್ – ವಿಜಯೇಂದ್ರ ಮಹಾರಾಜ, ಕದಂಬ ವಂಶದ ರಾಜ
• ಅಚ್ಯುತ್ ಕುಮಾರ್ – ದೇವಾಲಯದ ಅರ್ಚಕ
• ಮಾನಸಿ ಸುಧೀರ್ – ಬೆರ್ಮೆನ ತಾಯಿ
• ಶೈನ್ ಶೆಟ್ಟಿ – ಬೆರ್ಮೆನ ಸಹೋದರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular