HomeLatest NewsBREAKING: ಸೊಸೆಯನ್ನೇ ವೇಶ್ಯಾವಾಟಿಕೆಗೆ ಒತ್ತಾಯಿಸಿದ ಅತ್ತೆ: ಮನನೊಂದ ಮಹಿಳೆ ಆತ್ಮಹತ್ಯೆ

BREAKING: ಸೊಸೆಯನ್ನೇ ವೇಶ್ಯಾವಾಟಿಕೆಗೆ ಒತ್ತಾಯಿಸಿದ ಅತ್ತೆ: ಮನನೊಂದ ಮಹಿಳೆ ಆತ್ಮಹತ್ಯೆ

ಬೀದರ್: ಇದೆಂತಹ ಅಮಾನುಷ ಘಟನೆ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಅತ್ತೆ ಬರಬರುತ್ತಾ ಸೊಸೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದು, ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ನ ಓಂ ಬಡಾವಣೆಯಲ್ಲಿ ಅತ್ತೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಜನಾಬಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.

2022ರಲ್ಲಿ ಅಂಜನಾಬಾಯಿ ಶೇಖರ್ ಎಂಬಾತನ ಜೊತೆ ವಿವಾಹವಾಗಿದ್ದರು. ಎರಡೂ ಕುಟುಂಬ ನೋಡಿಯೇ ಮಾಡಿದ್ದ ಮದುವೆ. ಮದುವೆ ಬಳಿಕ ಪತಿ ಹಾಗೂ ಅತ್ತೆ ಕಿರಿಕಿರಿ ಮಾಡುತ್ತಿದ್ದರು. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ನೋಡಲು ಸುಂದರವಾಗಿದ್ದೀಯಾ ವೇಶ್ಯಾವಾಟಿಕೆ ನಡೆಸುವಂತೆ ಅತ್ತೆ ಒತ್ತಾಯಿಸುತ್ತಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅತ್ತೆ, ಪತಿ ನೀಡುತ್ತಿದ್ದ ವರದಕ್ಷಿಣೆ ಕಾಟದ ಬಗ್ಗೆ ಗೊತ್ತಾಗಿ ಅಂಜನಾ ಪೋಷಕರು ಹಾಗೂ ಊರುನ ಹಿರಿಯರು ಸೇರಿ ರಾಜಿ ಪಂಚಾಯಿತಿ ಮಾಡಿದ್ದರು. ಸೊಸೆಗೆ ಕಿರುಕುಳ ನೀಡದಂತೆ ಅತ್ತೆಗೆ ಬುದ್ಧಿ ಹೇಳಿದ್ದರು. ಇದಾದ ಕೆಲ ದಿನ ಸುಮ್ಮನಿದ್ದ ಅತ್ತೆ ಮತ್ತೆ ತವರಿಂದ 1 ಲಕ್ಷ ಹಣ ತರುವಂತೆ ಪೀಡಿಸತೊಡಗಿದ್ದಳು. ಇಲ್ಲವೇ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿದ್ದಳು ಎಂಬ ಆರೋಪ ಕೇಳಿಬಂದಿದೆ.

ಅತ್ತೆಯ ಕಾಟ, ಹಿಂಸೆಗೆ ಬೇಸತ್ತ ಅಂಜನಾಬಾಯಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

For Latest News Updates, Join Our Whatsapp Community🚩
RELATED ARTICLES

Most Popular