HomeKarnatakaನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಿದ ಯುವಕರು

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಿದ ಯುವಕರು

ಕೊಡಗು: ನದಿ ಮಧ್ಯೆ ಕಲ್ಲು ಬಂಡೆ ಮೇಲೆ ಕುಳಿತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳೆಯನ್ನು ಯುವಕರ ಗುಂಪು ರಕ್ಷಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗಿನ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊನ್ನಂಪೇಟೆಯ ಎಂ.ಜಿ.ನಗರದ ನಿವಾಸಿ ನಿರ್ಮಲಾ (48) ಎಂಬ ಮಹಿಳೆ ನದಿಯ ಮಧ್ಯೆ ಇದ್ದ ಬಂಡೆಯ ಮೇಲೆ ಕುಳಿತಿದ್ದರು. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನಿರ್ಮಲಾ ಅವರನ್ನು ಸ್ಥಳೀಯ ಯುವಕರು ರಕ್ಷಿಸಿದ್ದಾರೆ.

ನಿರ್ಮಲಾ ಅವರ ಪುತ್ರಿ ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮಗಳ ಅಗಲಿಕೆ ಬಳಿಕ ನಿರ್ಮಲಾ ಖಿನ್ನತೆಯಿಂದ ಬಳಲುತ್ತಿದ್ದಿರು. ಮಗಳ ಕಳೆದುಕೊಂಡ ನೋವಿನಲ್ಲೇ ದಿಕ್ಕೇ ತೋಚದೇ ನಿರ್ಮಲಾ ಅತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ನಿರ್ಮಲಾ ಅವರನ್ನು ಅಶ್ರಫ್, ಯೂನಸ್ ಹಾಗೂ ಷರೀಫ್ ಎಂಬ ಮೂವರು ಯುವಕರು ರಕ್ಷಣೆ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular