HomeLatest NewsBREAKING: ಬೆಂಗಳೂರಿನಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವು: ಪತಿ ಪೊಲೀಸ್ ವಶಕ್ಕೆ

BREAKING: ಬೆಂಗಳೂರಿನಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವು: ಪತಿ ಪೊಲೀಸ್ ವಶಕ್ಕೆ

ಬೆಂಗಳೂರು: ಮಹಿಳೆಯೊಬ್ಬರು ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅಂಜನಾಪುರದಲ್ಲಿ ನಡೆದಿದೆ.

ನೇತ್ರಾವತಿ (30) ಮೃತ ಮಹಿಳೆ. ಪತಿ ಸೋಮಶೇಖರ್ ಹಾಗೂ ಅತ್ತೆ ವಿರುದ್ಧ ಮೃತ ಮಹಿಳೆಯ ಪೋಷಕರು ಆರೋಪ ಮಾಡಿದ್ದು, ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೇತ್ರಾವತಿ ಪತಿ ಸೋಮಶೇಖರ್ ನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ. ರಾತ್ರಿ ಅತ್ತೆ, ಸೊಸೆ, ಪತಿ ನಡುವೆ ಜಗಳವಾಗಿದೆ. ಪತಿ ಸೋಮಶೇಖರ್ ಮಗಳ ಕೆನ್ನೆಗೆ ಹೊಡೆದಿದ್ದಾರೆ. ಮಗಳು ನೇತ್ರಾವತಿ ಕೆನ್ನೆಗೆ ಹೊಡೆದಿರುವ ಗುರುತುಗಳಿವೆ. ಪತಿ ಸೋಮಶೇಖರ್ ಹಲ್ಲೆ ಮಾಡಿದ್ದಾರಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಪತಿ ಸೋಮಶೇಖರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular