HomeLatest NewsBIG NEWS: ಬಸ್ ನಿಲ್ಲಿಸಿಲ್ಲ ಎಂದು ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ ಮಹಿಳೆ

BIG NEWS: ಬಸ್ ನಿಲ್ಲಿಸಿಲ್ಲ ಎಂದು ಚಾಲಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ ಮಹಿಳೆ

ಬೆಂಗಳೂರು: ಬಸ್ ಚಾಲಕ ತನ್ನ ಆಫೀಸ್ ಬಳಿ ಬಸ್ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಚಪ್ಪಲಿಯಿಂದ ಬಸ್ ಡ್ರೈವರ್ ನನ್ನು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಬಸ್ ತೆರಳುತ್ತಿತ್ತು. ಬಸ್ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿ ಬಳಿ ತಲುಪಿದಾಗ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಅಮಡುತ್ತಿದ್ದ ಮಹಿಳಾ ಪ್ರಯಾಣಕಿ ಕಾವ್ಯಾ, ಬಸ್ ನಿಲುಗಡೆ ಇಲ್ಲದಿದ್ದರೂ ತನ್ನ ಕಚೇರಿ ಬಳಿ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಟ್ರಾಫಿಕ್ ನಿಂದಾಗಿ ಬಸ್ ಚಾಲಕ ಅಲ್ಲಿ ಬಸ್ ನಿಲ್ಲಿಸದೇ ಮುಂದೆ ಹೋಗಿದ್ದಾರೆ. ಇಷ್ಟಕ್ಕೆ ಕಿರುಚಾಡಿ, ಗಲಾಟೆ ಮಾಡಿದ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ತನ್ನ ಚಪ್ಪಲಿ ತೆಗೆದು ಚಾಲಕನಿಗೆ ಬಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಜೂನ್ 11ರಂದು ಬೆಳಿಗ್ಗೆ ನಡೆದಿದ್ದು, ತಡವಗೈ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಚಾಲಕ ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ವಿರುದ್ಧ ಸೆಕ್ಷನ್ 121, 131, 132, 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular