HomeLatest NewsBREAKING: ವಿಂಜೋ ಗೇಮಿಂಗ್ ಕಚೇರಿಗಳ ಮೇಲೆ ED ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ: ತನಿಖೆ...

BREAKING: ವಿಂಜೋ ಗೇಮಿಂಗ್ ಕಚೇರಿಗಳ ಮೇಲೆ ED ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ: ತನಿಖೆ ವೇಳೆ ಸ್ಫೋಟಕ ಮಾಹಿತಿಗಳು ಬಹಿರಂಗ

ಬೆಂಗಳೂರು: ವಿಂಜೋ ಗೇಮಿಂಗ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಬಯಲಾಗಿವೆ. ವಿಂಚೋ ಗೇಮಿಂಗ್ ಕಚೇರಿ ಮೇಲೆ ದಾಳಿ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಜನರಿಗೆ ವಂಚನೆ ಮಾಡುವ ಉದ್ದೇಶದಿಂದಲೇ ವಿಂಜೋ ಆಪ್ ತಯಾರಿ ಮಾಡಲಾಗಿತ್ತು. ಸುಮಾರು 3,522 ಕೋಟಿ ಹಣ ಅಕ್ರಮ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಂಜೋ ಆಪ್ ವಂಚನೆ ಬಗ್ಗೆ ಬೆಂಗಳೂರು ಸೈಬರ್ ಕ್ರೈಂ ಠಾಣೆ ಹಾಗೂ ರಾಜಸ್ಥಾನ, ದೆಹಲಿ, ಗುರುಗ್ರಾಮ್ ನಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು 2025ರ ನವೆಂಬರ್ 18, ಡಿಸೆಂಬರ್ 30ರಂದು ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ವಿಂಜೋ ಆಪ್ ಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದ್ದರು. ಬ್ಯಾಂಕ್ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್ಸ್, ಸ್ಥಿರ ಠೇವಣಿ, ಕ್ರಿಪ್ಟೋ ಕರೆನ್ಸಿ, ವ್ಯಾಲೆಟ್ ಸೇರಿದಂತೆ ಸುಮಾರು 690 ಕೋಟಿ ಸೀಜ್ ಮಾಡಿದ್ದರು. ಇದೀಗ ಈ ಪ್ರಕರಣದ ಬಗ್ಗೆ ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular