HomeEntertainmentದಂಗಾಗಿಸುವಂತಿದೆ 'ಪುಷ್ಪಾ 2' ಚಿತ್ರದ ಐದು ದಿನದ ಕಲೆಕ್ಷನ್....!

ದಂಗಾಗಿಸುವಂತಿದೆ ‘ಪುಷ್ಪಾ 2’ ಚಿತ್ರದ ಐದು ದಿನದ ಕಲೆಕ್ಷನ್….!

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2’  ಒಂದರ ಮೇಲೊಂದು ದಾಖಲೆ ಬರೆಯುತ್ತಿದ್ದು,  ಭಾರತದಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದೆ. ಈ ಚಿತ್ರ ಇದೀಗ ಕೇವಲ ಐದು ದಿನಗಳಲ್ಲಿ  922 ಕೋಟಿ ರೂ. ಗಳಿಕೆ ಮಾಡುವ ಮೂಲಕ  ನಿಬ್ಬೆರಗಾಗುವಂತೆ ಮಾಡಿದೆ. ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಹತ್ತು ದಿನಗಳಲ್ಲಿ 1000 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದನ್ನು ಸರಿಗಟ್ಟುವ ಮೂಲಕ ‘ಪುಷ್ಪಾ 2’ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನವೀನ್ ಯೆರ್ನೇನಿ, ಲಮಂಚಿಲಿ ರವಿಶಂಕರ್ ನಿರ್ಮಾಣ ಮಾಡಿದ್ದು, ಅಲ್ಲು ಅರ್ಜುನ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ.

ಇನ್ನುಳಿದಂತೆ ಫಹಾದ್ ಫಾಸಿಲ್, ಜಗಪತಿ ಬಾಬು, ಸುನಿಲ್, ಅನಸೂಯಾ ಭಾರದ್ವಾಜ್, ರಾವ್ ರಮೇಶ್, ಸತ್ಯ, ಸೌರಭ್ ಸಚ್‌ದೇವ, ಆಂಚಲ್ ಮುಂಜಾಲ್, ಆದಿತ್ಯ ಮೆನನ್, ಬ್ರಹ್ಮಾಜಿ, ದಯಾನಂದ ರೆಡ್ಡಿ ಉಳಿದ  ಪಾತ್ರ ವರ್ಗದಲ್ಲಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದು, ನವೀನ್ ನೂಲಿ ಸಂಕಲನ ಹಾಗೂ ಮಿರೋಸ್ಲಾವ್ ಕುಬಾ ಬ್ರೋಜೆಕ್ ಛಾಯಾಗ್ರಾಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
RELATED ARTICLES

Most Popular