ಅಹಮದಾಬಾದ್: ಪತಿ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ ನ ಮೋಡಸಾದಲ್ಲಿ ನಡೆದಿದೆ.
ಮೊಬೈಲ್ ಕೊಡಿಸಿಲ್ಲ ಎಂಬು ಸಣ್ಣವಿಚಾರವೇ ಇರಬಹುದು. ಆದರೆ ಹಲವು ಬಾರಿ ಕೇಳಿದರೂ ಪತಿ ಮೊಬೈಲ್ ಕೊಡಿಸಿಲ್ಲ ಎಂಬುದು ಪತ್ನಿಯ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಇದರಿಂದ ಮನನೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಊರ್ಮಿಳಾ ಆತ್ಮಹತ್ಯೆಗೆ ಶರಣಾದ ಪತ್ನಿ.
ನೇಪಾಳಿ ಮೂಲದ ದಂಪತಿ ಮೋಡಸಾದಲ್ಲಿ ಕೆಲಸಕ್ಕಾಗಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಪತ್ನಿ, ಪತಿಗೆ ತನಗೆ ಮೊಬೈಲ್ ಕೊಡಿಸುವಂತೆ ಕೇಳಿದ್ದಾಳೆ. ಆದರೆ ಆರ್ಥಿಕ ಸಮಸ್ಯೆ ನೆಪ ಹೇಳಿ ಪತಿ ಮಹಾಶಯ ಜಾರಿಕೊಂಡಿದ್ದಾನೆ. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದೆ.
ಇದರಿಂದ ಮನನೊಂದ ಪತ್ನಿ ಊರ್ಮಿಳಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

