HomeIndiaSHOCKING: ಮಕ್ಕಳ ಮುಂದೆಯೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಪತಿ: ಮಗಳನ್ನೂ ಬೆಂಕಿಗೆ...

SHOCKING: ಮಕ್ಕಳ ಮುಂದೆಯೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಪತಿ: ಮಗಳನ್ನೂ ಬೆಂಕಿಗೆ ತಳ್ಳಿ ಕ್ರೌರ್ಯ

ಹೈದರಾಬಾದ್: ಮಕ್ಕಳ ಮುಂದೆಯೇ ಪತ್ನಿಯನ್ನು ಬೆಂಕಿ ಹಚ್ಚಿ ಹತ್ಯೆಗೈದ ಪತಿ ಮಹಾಶಯ, ಬಳಿಕ ಅದೇ ಬೆಕಿಗೆ ಮಗಳನ್ನೂ ತಳ್ಳಿ ಕ್ರೌರ್ಯ ಮೆರೆದಿದ್ದಾರೆ. ಈ ಘಟನೆ ಹೈದರಾಬಾದ್ ನ ನಲ್ಲಕುಂಟಾ ಪ್ರದೇಶದಲ್ಲಿ ನಡೆದಿದೆ.

ವೆಂಕಟೇಶ್, ಪತಿಯನ್ನೇ ಬೆಂಕಿ ಹಚ್ಚಿ ಕೊಂದ ಪತಿ. ತ್ರಿವೇಣಿ ಹತ್ಯೆಯಾದ ಪತ್ನಿ. ವೆಂಕಟೇಶ್ ಗೆ ಪತ್ನಿ ತ್ರಿವೇಣಿ ಮೇಲೆ ಸಂಶಯ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದಿಂದ ಮಕ್ಕಳ ಮುಂದೆಯೇ ಪತ್ನಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ಮೇಲೆ ಪೆಟ್ರೋಲ್ ಸುರುದು ಬೆಂಕಿ ಹಚ್ಚಿದ್ದಾನೆ. ಮಗಳು ತನ್ನ ತಾಯಿಯನ್ನು ರಕ್ಷಿಸಲು ಯತ್ನಿಸಿದ್ದಾಳೆ. ಈ ವೇಳೆ ಆಕೆಯನ್ನೂ ಬೆಂಕಿಗೆ ತಳ್ಳಿದ್ದಾನೆ ಪಾಪಿ.

ತಾಯಿ ಮಗಳು ಬೆಂಕಿಯ ಉರಿಗೆ ಕಿರುಚಾಡಿ ರಕ್ಷಿಸುವಂತೆ ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ದೌಡಾಯಿಸಿದ್ದಾರೆ. ಕೃತ್ಯದ ಬಳಿಕ ವೆಂಕಟೇಶ್ ಪರಾರಿಯಾಗಿದ್ದಾನೆ. ಬೆಂಕಿಯ ಧಗೆಯಲ್ಲಿ ಬೆಂದು ಹೋಗಿರುವ ತ್ರಿವೇಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಗಳಿಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೀತಿಸಿ ವಿವಾಹವಾಗಿದ್ದ ವೆಂಕಟೇಶ್ ಹಾಗೂ ತ್ರಿವೇಣಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಅನಗತ್ಯವಾಗಿ ಪತ್ನಿ ಮೇಲೆ ಅನುಮಾನಗೊಂಡು ಹಿಂಸಿಸುತ್ತಿದ್ದ. ಪತಿಯ ಹಿಂಸೆಗೆ ಬೇಸತ್ತು ತ್ರಿವೇಣಿ ತವರು ಮನೆ ಸೇರಿದ್ದಳು. ತಾನು ಬದಲಾಗುತ್ತೇನೆ. ತಪ್ಪು ತಿದ್ದಿಕೊಳ್ತೀನಿ. ಒಂದು ಅವಕಾಶ ನೀಡುವಂತೆ ಗೋಗರೆದು ಪತ್ನಿಯನ್ನು ಮತ್ತೆ ವಾಪಸ್ ಕರೆತಂದಿದ್ದ. ಪತ್ನಿ ಮನೆಗೆ ಬಂದ ಕೆಲ ದಿಬಗಳಲ್ಲೇ ಮತ್ತೆ ಹಳೇ ಚಾಳಿ, ವಿಕೃತಿ ಮುಂದುವರೆಸಿದ್ದ ಎಂದು ತಿಳಿದುಬಂದಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ವೆಂಕಟೇಶ್ ಗಾಗಿ ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular