HomeIndiaಅವಲಕ್ಕಿ ಬೇಡ ಎಂದ ಪತಿ; ತಿಂಡಿ ವಿಚಾರವಾಗಿ ಶುರುವಾದ ಜಗಳ: ಮನನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಅವಲಕ್ಕಿ ಬೇಡ ಎಂದ ಪತಿ; ತಿಂಡಿ ವಿಚಾರವಾಗಿ ಶುರುವಾದ ಜಗಳ: ಮನನೊಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಗ್ವಾಲಿಯರ್: ತಿಂಡಿಗೆ ಅವಲಕ್ಕಿ ಬೇಡ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಬಾಲಕಿಶನ್ ಹಾಗೂ ಕವಿತಾ ಕೆಲ ದಿನಗಳ ಹಿಂದಷ್ಟೇ ವಿವಾಹವಾಗಿದ್ದರು. ಬೆಳಗಿನ ತಿಂಡಿಗೆ ಕವಿತಾ ಪೋಹಾ (ಅವಲಕ್ಕಿ) ಮಾಡಲು ಸಿದ್ಧತೆ ನಡೆಸಿದ್ದಳು. ಅವಲಕ್ಕಿ ಬೇಡ ಎಂದು ಪತಿ ಕ್ಯಾತೆ ತೆಗೆದಿದ್ದ. ಆದರೂ ಪತ್ನಿ ಅವಲಕ್ಕಿ ಮಾಡುವುದಾಗಿ ಹೇಳಿದ್ದಳು.

ಅವಲಕ್ಕಿ ಬದಲು ಮನೆಯಲ್ಲಿರುವ ಡ್ರೈ ಫ್ರೂಟ್ಸ್ ತಿನ್ನಬಹುದು ಎಂದು ಪತಿ ಬಾಲಕಿಶನ್ ಹೇಳಿದ್ದಾನೆ. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ ಶುರುವಾಗಿದೆ. ಬೇಸರಗೊಂಡ ಕವಿತಾ ರೂಮಿಗೆ ಹೋಗಿ ನೇಣಿಗೆ ಶರಣಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ಮುನಿಸಿಕೊಂಡು ರೂಮು ಸೇರಿದ್ದಾಳೆ ಎಂದು ಕಿಶನ್ ಸುಮ್ಮನಿದ್ದ. ಕೆಲ ಸಮಯದ ಬಳಿಕ ಪತ್ನಿಯನ್ನು ಕರೆದಿದ್ದಾನೆ. ರೂಮಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎಷ್ಟು ಹೊತ್ತಾದರೂ ಬಾಗಿಲು ತೆರೆದಿಲ್ಲ. ಆತಂಕಗೊಂಡು ಬಾಗಿಲು ಒಡೆದು ನೋಡಿದರೆ ಕವಿತಾ ನೆಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಶನ್ ಹೇಳಿಕೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular