HomeLatest NewsBIG NEWS: ಮೊಬೈಲ್ ನಲ್ಲೇ ಕಾಲಕಳೆಯುತ್ತಾಳೆ ಎಂದು ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

BIG NEWS: ಮೊಬೈಲ್ ನಲ್ಲೇ ಕಾಲಕಳೆಯುತ್ತಾಳೆ ಎಂದು ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ಉಡುಪಿ: ಹೆಂಡತಿ ಯಾವಾಗಲೂ ಮೊಬೈಲ್ ನಲ್ಲಿ ಕಾಲಕಳೆಯುತ್ತಾಳೆ ಎಂದು ಕೋಪಗೊಂಡ ಪತಿ ಮಹಾಶಯ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕಿನ ಹುಲಿಯಾಣ ಗ್ರಾಮದ ಹೊಸಮಠ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೇಖಾ ಪತಿಯಿಂದಲೇ ಹತ್ಯೆಯಾದ ಮಹಿಳೆ. ಗಣೇಶ್ ಪೂಜಾರಿ ಪತ್ನಿಯನ್ನೇ ಕೊಂದ ಪತಿ.

ಪತ್ನಿ ರೇಖಾ ಸದಾಕಾಲ ಮೊಬೈಲ್ ನಲ್ಲಿಯೇ ಇರುತ್ತಿದ್ದಳು. ಇದರಿಂದ ಪತಿ-ಪತ್ನಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಇದೇ ವಿಚಾರವಾಗಿ ಕ್ಯಾತೆ ತೆಗೆದ ಗಂಡ ಈಗ ಪತ್ನಿಯನ್ನೇ ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಡಿತದ ಚಟವನ್ನೂ ಹೊಂದಿದ್ದ ಆರೋಪಿ, ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದನಂತೆ. ಈಗ ಪತ್ನಿ ಮೊಬೈಲ್ ನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಳು ಎಂದು ನೆಪ ಹೇಳಿ ಆಕೆಯನ್ನೇ ಹತ್ಯೆ ಮಾಡಿದ್ದಾನೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ ಪಿ ಹರಿಯಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular