HomeLatest NewsBIG NEWS: ಜನಾರ್ಧನ ರೆಡ್ಡಿಗೆ ಬಿಗ್ ರಿಲೀಫ್: ಶಾಸಕತ್ವ ಅಮಾನತು ಆದೇಶ ವಾಪಸ್!

BIG NEWS: ಜನಾರ್ಧನ ರೆಡ್ಡಿಗೆ ಬಿಗ್ ರಿಲೀಫ್: ಶಾಸಕತ್ವ ಅಮಾನತು ಆದೇಶ ವಾಪಸ್!

ಬೆಂಗಳೂರು: ಗಾಲಿ ಜನಾರ್ಧನ ರೆಡ್ಡಿ ಅವರ ಶಾಸಕತ್ವ ಅಮಾನತು ಆದೇಶವನ್ನು ವಿಧಾನಸಭೆ ಹಿಂಪಡೆದಿದೆ.

ತೆಲಂಗಾಣ ಹೈಕೋರ್ಟ್ ಜನಾರ್ಧನ ರೆಡ್ಡಿ ಮೇಲಿನ ಶಿಕ್ಷೆಗೆ ತಡೆ ನೀಡಿರುವ ಬೆನ್ನಲ್ಲೇ ವಿಧಾನಸಭೆ ಜನಾರ್ಧನ ರೆಡ್ದಿ ಅವರ ಶಾಸಕತ್ವ ಅಮಾನತು ಆದೇಶ ವಾಪಸ್ ಪಡೆದಿದೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಅವರಿಗೆ ಶಿಕ್ಷೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅವರ ಶಾಸಕತ್ವ ಅಮಾನತುಗೊಳಿಸಲಾಗಿತ್ತು. ಶಿಕ್ಷೆಗೆ ತಡೆ ನೀಡಿದರೆ ಅಥವಾ ಶಿಕ್ಷೆ ರದ್ದಾದರೆ ಅಮಾನತು ಆದೇಶ ಹಿಂಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular