HomeCrimeಸಲುಗೆಯಿಂದಿದ್ದ ಮಹಿಳೆಯ ಪತಿ ಕೊಂದ ಸ್ನೇಹಿತ

ಸಲುಗೆಯಿಂದಿದ್ದ ಮಹಿಳೆಯ ಪತಿ ಕೊಂದ ಸ್ನೇಹಿತ

ಬೆಂಗಳೂರು: ಮಹಿಳೆಯ ಜೊತೆಗೆ ಸಲುಗೆಯಿಂದ ಇದ್ದ ವ್ಯಕ್ತಿ ಒಬ್ಬ ಆಕೆಯ ಪತಿಯನ್ನು ಚಾಕುವಿನಿಂದ ಇರಿದು ಬರಬರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉದಯಕುಮಾರ್(33) ಕೊಲೆಯಾದ ವ್ಯಕ್ತಿ. ಮಹದೇವಪುರದ ಉದಯನಗರದ ಎರಡನೇ ಕ್ರಾಸ್ ಶಿವ ದೇವಸ್ಥಾನದ ಬಳಿ ಗುರುವಾರ ರಾತ್ರಿ 8.30 ರಿಂದ 10 ಗಂಟೆ ನಡುವೆ ಉದಯಕುಮಾರ್ ಅವರನ್ನು ಕೊಲೆ ಮಾಡಲಾಗಿದ್ದು, ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿ ಅನ್ವರ್ ಖಾನ್(21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಉದಯಕುಮಾರ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದು, ಉದಯಕುಮಾರ್ ಬೈಕ್ ಮೆಕಾನಿಕ್ ಆಗಿದ್ದರು. ಮಮತಾ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೆಡಿಕಲ್ ಶಾಪ್ ಎದುರಿನ ಹೋಟೆಲ್ ನಲ್ಲಿ ಆರೋಪಿ ಅನ್ವರ್ ಖಾನ್ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಮಮತಾ ಮತ್ತು ಅನ್ವರ್ ನಡುವೆ ಸ್ನೇಹ ಬೆಳೆದು ಸಲುಗೆಯಿಂದ ಇದ್ದರು. ಈ ವಿಚಾರ ತಿಳಿದು ಉದಯಕುಮಾರ್ ಪತ್ನಿಗೆ ಬೈದಾಡಿದ್ದರಿಂದ ಕೌಟುಂಬಿಕ ಕಲಹ ಉಂಟಾಗಿ ಎರಡು ತಿಂಗಳ ಹಿಂದೆ ಮಮತಾ ತವರು ಮನೆಗೆ ಹೋಗಿದ್ದಳು.

ಉದಯ್ ಮನೆಯಲ್ಲಿ ಒಬ್ಬನೇ ಇದ್ದ ವೇಳೆ ಬಂದು ಜಗಳವಾಡಿದ ಅನ್ವರ್, ಮಮತಾ ಜೊತೆಗೆ ಜಗಳವಾಡಿ ತವರು ಮನೆಗೆ ಹೋಗಲು ನೀನೇ ಕಾರಣ ಎಂದು ಚಾಕುವಿನಿಂದ ಹತ್ತಾರು ಬಾರಿ ಇರಿದು ಪರಾರಿಯಾಗಿದ್ದಾನೆ. ಕೆಲ ಸಮಯದ ನಂತರ ಮಮತಾ ಉದಯ್ ಗೆ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಕಟ್ಟಡ ಮಾಲೀಕರಿಗೆ ಕರೆ ಮಾಡಿ ಹೇಳಿದ್ದಾರೆ. ನಂತರ ಮೈದುನನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆತ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಉದಯ್ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಾಥಮಿಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಮತಾ ತವರು ಮನೆ ಸೇರಿ ಎರಡು ತಿಂಗಳಾಗಿದ್ದು, ಆರೋಪಿ ಅನ್ವರ್ ಈಗ ಮನೆಗೆ ನುಗ್ಗಿ ಉದಯ್ ನನ್ನು ಕೊಲೆ ಮಾಡಿದ್ದಾನೆ. ಇದರ ಹಿಂದೆ ಮಮತಾ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಮಮತಾ ಮೇಲಿನ ಮೋಹಕ್ಕಾಗಿ ಅನ್ವರ್ ಕೊಲೆ ಮಾಡಿದ್ದಾನೆ ಎಂಬುದರ ಬಗ್ಗೆ ಹೆಚ್ಚಿನ ತನಕ್ಕೆ ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular