HomeKarnatakaಹೊಸ ಕಾರ್ ಖರೀದಿಸಿದ್ದ ಪತಿಗೆ ಬಿಗ್ ಶಾಕ್: ಬಯಲಾಯ್ತು ಪತ್ನಿಯ ಅಸಲಿಯತ್ತು

ಹೊಸ ಕಾರ್ ಖರೀದಿಸಿದ್ದ ಪತಿಗೆ ಬಿಗ್ ಶಾಕ್: ಬಯಲಾಯ್ತು ಪತ್ನಿಯ ಅಸಲಿಯತ್ತು

ಬೆಂಗಳೂರು: ಹೊಸ ಕಾರ್ ಖರೀದಿಸಿದ ವ್ಯಕ್ತಿಯೊಬ್ಬರಿಗೆ ಪತ್ನಿಯ ಅಕ್ರಮ ಸಂಬಂಧ ಗೊತ್ತಾಗಿದ್ದು, ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ.

ವೈದ್ಯರಾಗಿರುವ ವ್ಯಕ್ತಿ ಇತ್ತೀಚೆಗೆ ಹೊಸ ಕಾರ್ ಖರೀದಿಸಿದ್ದಾರೆ. ಅದರಲ್ಲಿ ಜಿಪಿಎಸ್ ವ್ಯವಸ್ಥೆ ಇದ್ದು, ಕಾರ್ ಎಲ್ಲಿಗೆ ಹೋಗುತ್ತದೆ ಎಂಬ ಮಾಹಿತಿ ಗೊತ್ತಾಗುತ್ತದೆ. ಇದರ ಬಗ್ಗೆ ತಿಳಿಯದ ಪತ್ನಿ ಹೊಸ ಕಾರ್ ತೆಗೆದುಕೊಂಡು ಹೊರಗೆ ಹೋಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಬಿಇಎಲ್ ಸರ್ಕಲ್ ಬಳಿ ಇರುವ ಲಾಡ್ಜ್ ಗೆ ತೆರಳಿದ್ದಾಳೆ. ಲಾಡ್ಜ್ ಬಳಿ ಬೆಳಗಿನ ಜಾವ ಐದು ಗಂಟೆಯವರೆಗೂ ಕಾರ್ ಪಾರ್ಕಿಂಗ್ ನಲ್ಲಿ ಇತ್ತು. ಇದೆಲ್ಲವನ್ನು ಜಿಪಿಎಸ್ ಮೂಲಕ ಮೊಬೈಲ್ ನಲ್ಲೇ ಪತಿ ತಿಳಿದುಕೊಂಡಿದ್ದಾರೆ. ನಂತರ ಲಾಡ್ಜ್ ನಲ್ಲಿ ವಿಚಾರಿಸಿದಾಗ ಪತ್ನಿ ಮತ್ತು ಆಕೆಯ ಪ್ರಿಯಕರ ವೋಟರ್ ಐಡಿ ನೀಡಿ ಒಂದೇ ರೂಮ್ ಬುಕ್ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಪತ್ನಿ ಜೀವಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ನೊಂದ ವೈದ್ಯ ತನ್ನ ಪತ್ನಿ ವಂಚಿಸಿರುವುದಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular