ಇಂದಿನ ಯುಗದಲ್ಲಿ ಚಿಕ್ಕಮಕ್ಕಳು ಕೂಡ ಮೊಬೈಲ್ ಇಲ್ಲದೇ ಇರೋದಿಲ್ಲ. ಮೊಬೈಲ್ ಇಲ್ಲದೇ ಮಕ್ಕಳು ಊಟ ಕೂಡ ಮಾಡಲ್ಲ. ಶಾಲಾ ಮಕ್ಕಳಿಗಂತೂ ಮೊಬೈಲ್ ಫೋನ್ ಬೇಕೇ ಬೇಕು. ಅದೆಷ್ಟೇ ಕಷ್ಟ ಆದರೂ ಪೋಷಕರು ಮಕ್ಕಳಿಗೆ ದುಬಾರಿ ಬೆಲೆಯ ಮೊಬೈಲ್ ಫೋನ್ ಕೊಡಿಸುತ್ತಾರೆ.
ಸಾಮಾನ್ಯ ಜನರ ಮನೆಗಳಲ್ಲಿ ಪರಿಸ್ಥಿತಿ ಹೀಗಿದ್ದರೆ ನಾವು ಸೆಲೆಬ್ರಿಟಿಗಳ ಬಗ್ಗೆ ಮಾತನಾಡಬೇಕಾಗಿಲ್ಲ. ಅವರು ಐಫೋನ್ಗಳು ಮತ್ತು ಟ್ಯಾಬ್ಗಳಂತಹ ಐಷಾರಾಮಿ ಗ್ಯಾಜೆಟ್ಗಳೊಂದಿಗೆ ತಮ್ಮ ಸಮಯವನ್ನು ಕಳೆಯುತ್ತಾರೆ. ಆದರೆ, ಬಾಲಿವುಡ್ ಸ್ಟಾರ್ ದಂಪತಿಗಳಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಮಗಳು ಆರಾಧ್ಯ ವಿಷಯದಲ್ಲಿ ತುಂಬಾ ವಿಭಿನ್ನವಾಗಿ ವರ್ತಿಸುತ್ತಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ ತಮ್ಮ ಮಗಳ ಮೊಬೈಲ್ ಫೋನ್ ಬಳಕೆಯ ಬಗ್ಗೆ ಮಾಡಿದ ಕಾಮೆಂಟ್ಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
ಐಶ್ ಪುತ್ರಿ ಯಾಕೆ ಮಗಳಿಗೆ ‘ಮೊಬೈಲ್’ ಕೊಡಿಸಿಲ್ಲ..?
ಆರಾಧ್ಯಗೆ ಈಗ 14 ವರ್ಷ ವಯಸ್ಸಾಗಿದ್ದರೂ ಅವಳ ಬಳಿ ಇನ್ನೂ ಸ್ವಂತ ಮೊಬೈಲ್ ಫೋನ್ ಇಲ್ಲ ಎಂದು ಅವರು ಬಹಿರಂಗಪಡಿಸಿದರು. ಚಿಕ್ಕ ಮಕ್ಕಳೇ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ಈ ಕಾಲದಲ್ಲಿ, ಆರಾಧ್ಯ ಸ್ಟಾರ್ ಕಿಡ್ ಆಗಿದ್ದರೂ ಅವರ ಬಳಿ ಫೋನ್ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಈ ನಿಯಮದ ಹಿಂದಿನ ಕಾರಣವನ್ನು ವಿವರಿಸಿದ ಅಭಿಷೇಕ್, ಇದು ಬಹಳ ಹಿಂದೆಯೇ ಅವರು ತೆಗೆದುಕೊಂಡ ನಿರ್ಧಾರ ಎಂದು ಹೇಳಿದರು. ಆರಾಧ್ಯ ಅವರ ಸ್ನೇಹಿತರಲ್ಲಿ ಯಾರಾದರೂ ಅವರೊಂದಿಗೆ ಮಾತನಾಡಲು ಬಯಸಿದರೆ, ಅವರು ನೇರವಾಗಿ ಅವರ ತಾಯಿ (ಐಶ್ವರ್ಯ ರೈ) ಅವರಿಗೆ ಕರೆ ಮಾಡಬೇಕು. ಐಶ್ವರ್ಯ ತಮ್ಮ ಮಕ್ಕಳನ್ನು ಡಿಜಿಟಲ್ ಪ್ರಪಂಚದಿಂದ ದೂರವಿಟ್ಟು ಶಿಸ್ತಿನಿಂದ ಬೆಳೆಸುವ ಉದ್ದೇಶದಿಂದ ಈ ಕಠಿಣ ನಿಯಮಗಳನ್ನು ರೂಪಿಸಿದ್ದಾರೆಂದು ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.
ಸ್ಟಾರ್ ಸೆಲೆಬ್ರಿಟಿಗಳಾದರೂ ಅವರು ಸಾಮಾನ್ಯ ಮಗುವಿನಂತೆ ಬೆಳೆಸುತ್ತಿರುವ ರೀತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಒಟ್ಟಾರೆಯಾಗಿ, ಬಚ್ಚನ್ ಕುಟುಂಬ ತೆಗೆದುಕೊಂಡ ಈ ನಿರ್ಧಾರವು ಈಗ ಆನ್ ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

