HomeLatest Newsಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಗಂಟು ಬೀಳುವುದ್ಯಾಕೆ......? ಇದರ ಹಿಂದಿದೆ ಈ ಕಾರಣ....!

ಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಗಂಟು ಬೀಳುವುದ್ಯಾಕೆ……? ಇದರ ಹಿಂದಿದೆ ಈ ಕಾರಣ….!

ಸಾಮಾನ್ಯವಾಗಿ ಎಲ್ಲರ ಬಳಿಯೂ ಈಗ ಇಯರ್‌ ಫೋನ್‌ ಇದ್ದೇ ಇರುತ್ತದೆ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಏನೇ ಬಳಸುವುದಾದ್ರೂ ಇಯರ್‌ ಫೋನ್‌ ಕೂಡ ಜೊತೆಗಿಟ್ಟುಕೊಳ್ತಾರೆ. ಈ ಇಯರ್‌ಫೋನ್‌ಗಳ ಸಾಮಾನ್ಯ ಸಮಸ್ಯೆ ಅಂದರೆ ಇದನ್ನು ಜೇಬಿನಲ್ಲಿಡಿ ಅಥವಾ ಬ್ಯಾಗ್‌ನಲ್ಲಿ ಇರಿಸಿ, ಇದರ ವೈರ್‌ಗಳು ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುತ್ತವೆ.

ಅದನ್ನು ಬೇರ್ಪಡಿಸುವುದು ಬಹುದೊಡ್ಡ ಸವಾಲು, ತಲೆನೋವಿನ ಕೆಲಸ. ಇಯರ್‌ಫೋನ್‌ಗಳು ಈ ರೀತಿ ಒಂದಕ್ಕೊಂದು ಸಿಕ್ಕಿಹಾಕಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಇಯರ್‌ಫೋನ್‌ಗಳ ವೈರ್‌ಗಳಲ್ಲಿನ ಗೊಂದಲದ ಬಗ್ಗೆ ಆಸಕ್ತಿದಾಯಕ ಸಂಶೋಧನೆ ನಡೆಸಿದ್ದಾರೆ. ಅದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.

2012 ರಲ್ಲಿ ಇಬ್ಬರೂ ಸಂಶೋಧಕರು ಗಂಟು ಸಿದ್ಧಾಂತವನ್ನು ಅಧ್ಯಯನ ಮಾಡಿದರು. ಇದಕ್ಕೆ ವೈಜ್ಞಾನಿಕ ಕಾರಣವಿದೆ ಅನ್ನೋದನ್ನು ಕಂಡುಕೊಂಡರು. ವಿವಿಧ ಗಾತ್ರದ ಹಲವು ತಂತಿಗಳ ಮೋಜಿನ ಪ್ರಯೋಗ ಮಾಡಿ, ತಂತಿಗಳು ಸಿಕ್ಕಿಹಾಕಿಕೊಳ್ಳಲು ಕೇವಲ 10 ಸೆಕೆಂಡ್ ಬೇಕು ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಿದ್ಧಾಂತವನ್ನು ಗಂಟು ಸಿದ್ಧಾಂತ ಎಂದೂ ಕರೆಯುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧ್ಯಯನದ ಸಂದರ್ಭದಲ್ಲಿ ಸಂಶೋಧಕರು ತಂತಿಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ತಿರುಗಿಸಲು ಪ್ರಾರಂಭಿಸಿದರು. ಬಾಕ್ಸ್ ಅನ್ನು 5-10 ಬಾರಿ ತಿರುಗಿಸಿದ ನಂತರ, 10 ಸೆಕೆಂಡುಗಳಲ್ಲಿ ಇಯರ್‌ಫೋನ್‌ಗಳು ಪರಸ್ಪರ ಸಿಕ್ಕಿಹಾಕಿಕೊಂಡಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ವೈರ್‌ಗಳ ಉದ್ದ ಮತ್ತು ದಪ್ಪ ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸವನ್ನುಂಟುಮಾಡುತ್ತದೆ. ಉದ್ದವಾದ ಮತ್ತು ಮೃದುವಾದ ವೈರ್‌ಗಳು ಈ ರೀತಿ ಗಂಟು ಬೀಳುವ, ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚು.

For Latest News Updates, Join Our Whatsapp Community🚩
RELATED ARTICLES

Most Popular