HomeInternationalದುಬೈನಲ್ಲಿ ಪ್ರಿಯಕರನ ಕೊಲೆ ಆರೋಪ: ಬ್ರಿಟಿಷ್ ಟಿಕ್‌ಟಾಕ್ ಸ್ಟಾರ್ ಬ್ರೂಕ್ ಜಾರ್ಜ್‌ಗೆ ಮರಣದಂಡನೆ ಭೀತಿ?

ದುಬೈನಲ್ಲಿ ಪ್ರಿಯಕರನ ಕೊಲೆ ಆರೋಪ: ಬ್ರಿಟಿಷ್ ಟಿಕ್‌ಟಾಕ್ ಸ್ಟಾರ್ ಬ್ರೂಕ್ ಜಾರ್ಜ್‌ಗೆ ಮರಣದಂಡನೆ ಭೀತಿ?

ಯುಎಇಯ ದುಬೈನಲ್ಲಿ ಬ್ರಿಟಿಷ್ ಮೂಲದ ಪ್ರಸಿದ್ಧ ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ ಬ್ರೂಕ್ ಜಾರ್ಜ್ ತನ್ನ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಂದಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಸದ್ಯ ದುಬೈ ಪೊಲೀಸರ ವಶದಲ್ಲಿರುವ 23 ವರ್ಷದ ಬ್ರೂಕ್ ಜಾರ್ಜ್ ವಿರುದ್ಧ ಪೂರ್ವಯೋಜಿತ ಕೊಲೆ ಪ್ರಕರಣ ದಾಖಲಾಗಿದ್ದು, ಯುಎಇ ಕಾನೂನಿನ ಪ್ರಕಾರ ಈ ಅಪರಾಧಕ್ಕೆ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬ್ರಿಟನ್‌ನ ಕೆಂಟ್ ಮೂಲದವರಾದ ಬ್ರೂಕ್ ಜಾರ್ಜ್, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗುವ ಮುನ್ನ ಜಾನ್ ಲೂಯಿಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ದುಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೂನ್ 22 ರ ಮುಂಜಾನೆ ಈ ಘಟನೆ ನಡೆದಿದೆ. ಆನ್‌ಲೈನ್ ಮೂಲಕ ಪರಿಚಯವಾಗಿದ್ದ ಯುವಕನೊಂದಿಗೆ ಬ್ರೂಕ್ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಇಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಆತ್ಮರಕ್ಷಣೆಗಾಗಿ ಮಾಡಿದ್ದಾಗಿ ಯುವತಿಯ ವಾದ ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ತಾನು ಪ್ರಾಣಭಯದಿಂದ ಆತ್ಮರಕ್ಷಣೆಗಾಗಿ ಈ ಕೃತ್ಯ ಎಸಗಿರುವುದಾಗಿ ಬ್ರೂಕ್ ಜಾರ್ಜ್ ಹೇಳಿಕೊಂಡಿದ್ದಾರೆ. ಬ್ರೂಕ್ ಪರವಾಗಿ ಕಾನೂನು ನೆರವು ನೀಡುತ್ತಿರುವ ‘ಡಿಟೈನ್ಡ್ ಇನ್ ದುಬೈ’ ಸಂಸ್ಥೆಯ ಪ್ರಕಾರ, ಅಪಾರ್ಟ್‌ಮೆಂಟ್‌ನಲ್ಲಿ ಗೆಳೆಯ ಆಕೆಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ. ಈ ವೇಳೆ ಆಕೆ ತನ್ನ ಜೀವ ಉಳಿಸಿಕೊಳ್ಳಲು ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಿವಿದಿದ್ದಾಳೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಸ್ಥೆಯ ಮುಖ್ಯಸ್ಥೆ ರಾಧಾ ಸ್ಟಿರ್ಲಿಂಗ್ ಮಾತನಾಡಿ, ಮೊದಲ ಬಾರಿ ದುಬೈಗೆ ಬಂದಾಗ ಬ್ರೂಕ್ ಅತ್ಯಂತ ಸಂತೋಷವಾಗಿದ್ದಳು. ಆದರೆ ಎರಡನೇ ಭೇಟಿಯ ವೇಳೆ ಆಕೆಯ ಗೆಳೆಯ ಅತಿಯಾದ ನಿಯಂತ್ರಣ ಸಾಧಿಸಲು ಯತ್ನಿಸಿದ್ದಲ್ಲದೆ, ದೈಹಿಕ ದೌರ್ಜನ್ಯ ಎಸಗುತ್ತಿದ್ದ. ಆಕೆಯ ಪಾಸ್‌ಪೋರ್ಟ್ ಕಿತ್ತುಕೊಂಡು ದೇಶ ಬಿಟ್ಟು ಹೋಗದಂತೆ ತಡೆದಿದ್ದ. ಘಟನೆಯ ದಿನ ಆತ ಪ್ರಾಣಹಾನಿ ಮಾಡುವಂತೆ ವರ್ತಿಸಿದಾಗ ಬ್ರೂಕ್ ಅನಿವಾರ್ಯವಾಗಿ ಚಾಕು ಕೈಗೆತ್ತಿಕೊಂಡಿದ್ದಳು ಎಂದು ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ದುರ್ವರ್ತನೆ ಆರೋಪ ಬಹ್ರ್ ದುಬೈ ಪೊಲೀಸ್ ಠಾಣೆಯಲ್ಲಿ ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಬ್ರೂಕ್ ಜಾರ್ಜ್ ಗಂಭೀರ ಆರೋಪ ಮಾಡಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಇಲ್ಲದ ಸಮಯದಲ್ಲಿ, ಪುರುಷ ಪೊಲೀಸರ ಸಮ್ಮುಖದಲ್ಲೇ ತನ್ನ ಬಟ್ಟೆ ಬಿಚ್ಚಿಸಿ ತಪಾಸಣೆ ನಡೆಸುವ ಮೂಲಕ ತೀವ್ರ ಅವಮಾನ ಮಾಡಲಾಗಿದೆ ಎಂದು ಆಕೆ ದೂರಿದ್ದಾಳೆ. ಆದರೆ ಈ ಆರೋಪಗಳ ಬಗ್ಗೆ ದುಬೈ ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಮಗಳ ಪರಿಸ್ಥಿತಿ ನೋಡಿ ತಾಯಿ ಕಣ್ಣೀರು ಬ್ರೂಕ್ ಜಾರ್ಜ್ ತಾಯಿ ಥೆರೇಸಾ ಮಾತನಾಡಿ, ಘಟನೆ ನಡೆಯುವ ಹಿಂದಿನ ದಿನವೇ ಮಗಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಎಂದಿನಂತೆ ನಗುತ್ತಿರದ ಆಕೆ ತುಂಬಾ ಶಾಂತವಾಗಿದ್ದಳು. ಘಟನೆಯ ನಂತರ ಮಗಳೊಂದಿಗೆ ಮಾತನಾಡಿದಾಗ ಆಕೆ ತೀವ್ರವಾಗಿ ಭಯಭೀತರಾಗಿದ್ದಳು ಮತ್ತು ನಿರಂತರವಾಗಿ ಅಳುತ್ತಿದ್ದಳು. ಆಕೆಯ ಒಂದು ಕಣ್ಣು ಸಂಪೂರ್ಣವಾಗಿ ಊದಿಕೊಂಡಿತ್ತು. ಆಕೆ ಆತನಿಂದ ತಪ್ಪಿಸಿಕೊಂಡು ಮನೆಗೆ ಬರಲು ಹರಸಾಹಸ ಪಡುತ್ತಿದ್ದಳು ಎಂಬುದು ನನಗೆ ಖಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹೈಪ್ರೊಫೈಲ್ ಪ್ರಕರಣ ಈಗ ಬ್ರಿಟನ್ ಮತ್ತು ಯುಎಇ ನಡುವೆ ತೀವ್ರ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular