HomeEntertainment‘ಆಲ್ಫಾ’ ಟೀಸರ್‌ನಲ್ಲಿ ಶರ್ವರಿ ಕಾಣಿಸದ್ದಕ್ಕೆ ನೆಟ್ಟಿಗರ ಪ್ರಶ್ನೆ: ಇನ್‌ಸ್ಟಾಗ್ರಾಮ್‌ನಲ್ಲೇ ಖಡಕ್ ಟಾಂಗ್ ಕೊಟ್ಟ ಅಲಿಯಾ ಭಟ್!

‘ಆಲ್ಫಾ’ ಟೀಸರ್‌ನಲ್ಲಿ ಶರ್ವರಿ ಕಾಣಿಸದ್ದಕ್ಕೆ ನೆಟ್ಟಿಗರ ಪ್ರಶ್ನೆ: ಇನ್‌ಸ್ಟಾಗ್ರಾಮ್‌ನಲ್ಲೇ ಖಡಕ್ ಟಾಂಗ್ ಕೊಟ್ಟ ಅಲಿಯಾ ಭಟ್!

ಬಾಲಿವುಡ್‌ನ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ‘ಆಲ್ಫಾ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸೌಂಡ್ ಮಾಡುತ್ತಿದೆ. ಅಲಿಯಾ ಭಟ್ ಮತ್ತು ಶರ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ಟೀಸರ್ ಜೂನ್ 10 ರಂದು ಪ್ರೇಕ್ಷಕರ ಮುಂದೆ ಬಂದಿತ್ತು. ಆದರೆ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಪ್ರೇಮಿಗಳು ಒಂದು ಮುಖ್ಯವಾದ ಪ್ರಶ್ನೆಯನ್ನು ಎತ್ತಿದ್ದರು. ಇಡೀ ಟೀಸರ್‌ನಲ್ಲಿ ಕೇವಲ ಅಲಿಯಾ ಭಟ್ ಮಾತ್ರ ಕಾಣಿಸಿಕೊಂಡಿದ್ದು, ಚಿತ್ರದ ಮತ್ತೊಬ್ಬ ಪ್ರಮುಖ ನಾಯಕಿ ಶರ್ವರಿ ಅವರ ಒಂದು ಝಲಕ್ ಕೂಡ ಇಲ್ಲದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಟೀಸರ್‌ನಲ್ಲಿ ಶರ್ವರಿ ಅವರ ಗೈರುಹಾಜರಿ ಬಗ್ಗೆ ನೆಟ್ಟಿಗರು ಕೇಳುತ್ತಿದ್ದ ಸರಣಿ ಪ್ರಶ್ನೆಗಳಿಗೆ ಚಿತ್ರತಂಡವಾಗಲಿ ಅಥವಾ ನಟಿಯರಾಗಲಿ ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ನಟಿ ಅಲಿಯಾ ಭಟ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಟ್ರೋಲರ್‌ಗಳಿಗೆ ಮತ್ತು ಪ್ರಶ್ನೆ ಕೇಳುತ್ತಿದ್ದವರಿಗೆ ಮಜಾವಾಗಿ ತಿರುಗೇಟು ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸೈಲೆಂಟ್ ಟಾಂಗ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟಿ ಅಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶರ್ವರಿ ಜೊತೆಗಿನ ಶೂಟಿಂಗ್ ಸೆಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಬಿಳಿ ಬಣ್ಣದ ‘ಆಲ್ಫಾ’ ಎಂದು ಬರೆದಿರುವ ಟಿ-ಶರ್ಟ್ ಧರಿಸಿ, ತರಲೆ ಪೋಸ್‌ಗಳನ್ನು ಕೊಡುತ್ತಾ ನಗುತ್ತಿರುವ ಸುಂದರ ಕ್ಷಣಗಳು ಈ ಫೋಟೋಗಳಲ್ಲಿವೆ. ಆದರೆ ಈ ಫೋಟೋಗಳಿಗಿಂತ ಹೆಚ್ಚಾಗಿ ಅಲಿಯಾ ಹಾಕಿರುವ ಅಡಿಬರಹ ಎಲ್ಲರ ಗಮನ ಸೆಳೆದಿದೆ. ನೆಟ್ಟಿಗರ ಪ್ರಶ್ನೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಅಲಿಯಾ, “ಶರ್ವರಿ ಎಲ್ಲಿದ್ದಾರೆ?” ಎಂದು ಬರೆದು ತಮಾಷೆಯಾಗಿ ಕಾಲೆಳೆದಿದ್ದಾರೆ.

ಅಲಿಯಾ ಭಟ್ ಅವರ ಈ ಪೋಸ್ಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ನಟಿ ಶರ್ವರಿ, ಕಾಮೆಂಟ್ ಸೆಕ್ಷನ್‌ನಲ್ಲಿ “ಪ್ರೆಸೆಂಟ್‌ ಮೇಡಂ!!!” ಎಂದು ಶಾಲಾ ಮಕ್ಕಳ ಶೈಲಿಯಲ್ಲಿ ಉತ್ತರಿಸುವ ಮೂಲಕ ಇಬ್ಬರ ನಡುವಿನ ಉತ್ತಮ ಬಾಂಧವ್ಯವನ್ನು ತೋರ್ಪಡಿಸಿದ್ದಾರೆ.

ನೆಟ್ಟಿಗರ ಮೆಚ್ಚುಗೆ ಮತ್ತು ಚಿತ್ರದ ಬಿಡುಗಡೆ

ಅಭಿಮಾನಿಗಳ ಗಾಸಿಪ್ ಮತ್ತು ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಇಷ್ಟು ತಮಾಷೆಯಾಗಿ ಹ್ಯಾಂಡಲ್ ಮಾಡಿದ ಅಲಿಯಾ ಭಟ್ ಅವರ ಸಮಯಪ್ರಜ್ಞೆ ಮತ್ತು ಹಾಸ್ಯ ಪ್ರಜ್ಞೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಬ್ಬರು ಬಲಿಷ್ಠ ನಟಿಯರನ್ನು ಒಟ್ಟಿಗೆ ಬೆಳ್ಳಿಪರದೆ ಮೇಲೆ ನೋಡಲು ಕಾಯುತ್ತಿದ್ದೇವೆ ಎಂದು ಸಿನಿಪ್ರೇಮಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಶಿವ್ ರಾವೈಲ್ ನಿರ್ದೇಶನದ ‘ಆಲ್ಫಾ’ ಚಿತ್ರವು ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನಲ್ಲಿ ಮೂಡಿಬರುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಹಲವು ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಾ ಬಂದಿದ್ದ ಈ ಚಿತ್ರವು ಅಂತಿಮವಾಗಿ ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲು ಸಜ್ಜಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular