HomeInternationalದುಬೈನಲ್ಲಿ ಲ್ಯಾಂಡ್ ಆಗಬೇಕಿದ್ದ ಅಮೀಶಾ ಪಟೇಲ್ ವಿಮಾನ ಮಸ್ಕತ್‌ಗೆ ಶಿಫ್ಟ್: ಯುದ್ಧದ ಭೀತಿಯಲ್ಲಿ ನಟಿ ಹೇಳಿದ್ದೇನು?

ದುಬೈನಲ್ಲಿ ಲ್ಯಾಂಡ್ ಆಗಬೇಕಿದ್ದ ಅಮೀಶಾ ಪಟೇಲ್ ವಿಮಾನ ಮಸ್ಕತ್‌ಗೆ ಶಿಫ್ಟ್: ಯುದ್ಧದ ಭೀತಿಯಲ್ಲಿ ನಟಿ ಹೇಳಿದ್ದೇನು?

ಮುಂಬೈ: ನ್ಯೂಯಾರ್ಕ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರಿಗೆ ಆಘಾತಕಾರಿ ಅನುಭವವೊಂದು ಎದುರಾಗಿದೆ. ಇರಾನ್ ಮತ್ತು ಯುಎಇ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಯುಎಇ ವಾಯುಪ್ರದೇಶದಲ್ಲಿ ಕ್ಷಿಪಣಿ ದಾಳಿಗಳು ನಡೆದ ಹಿನ್ನೆಲೆಯಲ್ಲಿ ಅಮೀಶಾ ಪ್ರಯಾಣಿಸುತ್ತಿದ್ದ ಎಮಿರೇಟ್ಸ್ ವಿಮಾನವನ್ನು ತುರ್ತಾಗಿ ಮಸ್ಕತ್‌ಗೆ ವರ್ಗಾಯಿಸಲಾಗಿದೆ.

ಅಮೀಶಾ ಪಟೇಲ್ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಮಾನವು ದುಬೈನಲ್ಲಿ ಇಳಿಯಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಹಠಾತ್ತನೆ ಯುಎಇ ವಾಯುಪ್ರದೇಶವನ್ನು ಮುಚ್ಚಲಾಯಿತು. ಇದರಿಂದಾಗಿ ವಿಮಾನವನ್ನು ಮಸ್ಕತ್‌ಗೆ ಕಳುಹಿಸಲಾಗಿದ್ದು, ಪ್ರಯಾಣಿಕರು ಮುಂದಿನ ಅಪ್‌ಡೇಟ್‌ಗಾಗಿ ಕಾಯುವಂತಾಯಿತು. ಈ ಪರಿಸ್ಥಿತಿಯಿಂದ ಕಂಗೆಟ್ಟ ನಟಿ “ಈ ಯುದ್ಧ ಯಾವಾಗ ಕೊನೆಗೊಳ್ಳುತ್ತದೆ? ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಸೋಮವಾರ ರಾತ್ರಿ ಇರಾನ್ ಯುಎಇ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ ಎಂಬ ವರದಿಗಳು ಬಂದಿವೆ. ಏಪ್ರಿಲ್ 8 ರಂದು ಘೋಷಿಸಲಾಗಿದ್ದ ಕದನ ವಿರಾಮದ ನಂತರ ನಡೆದ ಮೊದಲ ಪ್ರಮುಖ ದಾಳಿ ಇದಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭದ್ರತಾ ದೃಷ್ಟಿಯಿಂದ ಯುಎಇ ಸರ್ಕಾರ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರಿಂದ ದುಬೈ ಮತ್ತು ಶಾರ್ಜಾಗೆ ಬರಬೇಕಿದ್ದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟಿ ಅಮೀಶಾ ಪಟೇಲ್ ಅವರೊಂದಿಗೆ ಡಿಜೆ ಚೇತಸ್ ಮತ್ತು ಕುನಾಲ್ ಗೂಮರ್ ಕೂಡ ಪ್ರಯಾಣಿಸುತ್ತಿದ್ದರು. ನ್ಯೂಯಾರ್ಕ್ ಬಿಟ್ಟು 24 ಗಂಟೆ ಕಳೆದರೂ ಇನ್ನೂ ಮುಂಬೈ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕುನಾಲ್ ಗೂಮರ್ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾರೆ. ಕಳೆದ ವರ್ಷ ‘ಗದರ್ 2’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಅಮೀಶಾ ಪಟೇಲ್ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಅವರ ‘ತೌಬಾ ತೇರಾ ಜಲ್ವಾ’ ಸಿನಿಮಾ ಬಿಡುಗಡೆಯಾಗಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular