HomeEntertainmentರಾಮ್ ಚರಣ್ ಪೆದ್ದಿ ಎಫೆಕ್ಟ್: ಸಮಂತಾ ಅವರ ಮಾ ಇಂಟಿ ಬಂಗಾರಂ ಚಿತ್ರದ ರಿಲೀಸ್ ಡೇಟ್...

ರಾಮ್ ಚರಣ್ ಪೆದ್ದಿ ಎಫೆಕ್ಟ್: ಸಮಂತಾ ಅವರ ಮಾ ಇಂಟಿ ಬಂಗಾರಂ ಚಿತ್ರದ ರಿಲೀಸ್ ಡೇಟ್ ಶಿಫ್ಟ್!

ಹೈದರಾಬಾದ್: ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕಿ ನಂದಿನಿ ರೆಡ್ಡಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಮಾ ಇಂಟಿ ಬಂಗಾರಂ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗುವ ಸುದ್ದಿಯಿದೆ. ಈ ಹಿಂದೆ ಮೇ 15 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಈಗ ಜೂನ್ ತಿಂಗಳ ಮಧ್ಯಭಾಗಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಸದ್ಯ ಐಪಿಎಲ್ ಕ್ರಿಕೆಟ್ ಜ್ವರ ಇರುವುದರಿಂದ ಮೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಸಾಹಸಕ್ಕೆ ಚಿತ್ರತಂಡ ಮುಂದಾಗುತ್ತಿಲ್ಲ ಎನ್ನಲಾಗಿದೆ. ಅಲ್ಲದೆ, ಜೂನ್ 4 ರಂದು ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ದೊಡ್ಡ ಮಟ್ಟದ ಚಿತ್ರದೊಂದಿಗೆ ಪೈಪೋಟಿ ನಡೆಸುವ ಬದಲು, ಸಿನಿಮಾ ಬಿಡುಗಡೆಯನ್ನು ಸ್ವಲ್ಪ ದಿನ ಮುಂದೂಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ ಎನ್ನಲಾಗಿದೆ.

ವಿಶೇಷವೆಂದರೆ ಈ ಚಿತ್ರವನ್ನು ಸ್ವತಃ ಸಮಂತಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಗುಲ್ಶನ್ ದೇವಯ್ಯ, ಕನ್ನಡದ ನಟ ದಿಗಂತ್ ಮಂಚಾಲೆ, ಗೌತಮಿ ತಡಿಮಲ್ಲ, ಶ್ರೀಮುಖಿ, ಶ್ರೀಲಕ್ಷ್ಮಿ, ಅಂಜಲಿ ಮತ್ತು ಸತ್ಯರಾಜ್ ಅವರಂತಹ ಪ್ರಮುಖ ತಾರಾಗಣವಿದೆ. ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಚಿತ್ರದ ಯಾವುದೇ ಪ್ರಚಾರ ಕಾರ್ಯಗಳು ಅಧಿಕೃತವಾಗಿ ಆರಂಭವಾಗದಿರುವುದು ಸಿನಿಮಾ ವಿಳಂಬವಾಗಲಿದೆ ಎಂಬ ಮಾತಿಗೆ ಪುಷ್ಟಿ ನೀಡಿದೆ. ಸದ್ಯದಲ್ಲೇ ಚಿತ್ರತಂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular