HomeEntertainmentದಳಪತಿ ವಿಜಯ್ ಬಗ್ಗೆ ಅಚ್ಚರಿಯ ವಿಷಯ ಬಿಚ್ಚಿಟ್ಟ ನಟಿ ತ್ರಿಶಾ: ಶೂಟಿಂಗ್ ಸೆಟ್‌ನಲ್ಲಿ ವಿಜಯ್ ನಡೆ...

ದಳಪತಿ ವಿಜಯ್ ಬಗ್ಗೆ ಅಚ್ಚರಿಯ ವಿಷಯ ಬಿಚ್ಚಿಟ್ಟ ನಟಿ ತ್ರಿಶಾ: ಶೂಟಿಂಗ್ ಸೆಟ್‌ನಲ್ಲಿ ವಿಜಯ್ ನಡೆ ಹೇಗಿರುತ್ತಿತ್ತು ಗೊತ್ತಾ?

ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ಸ್ನೇಹದ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ಟಿವಿ ಕೆ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ, ತ್ರಿಶಾ ಅವರು ವಿಜಯ್ ಬಗ್ಗೆ ಈ ಹಿಂದೆ ಆಡಿದ್ದ ಮಾತುಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ.

ವಿಜಯ್ ಅವರ ಶಾಂತ ಸ್ವಭಾವದ ಬಗ್ಗೆ ಮಾತನಾಡಿರುವ ತ್ರಿಶಾ, ಶೂಟಿಂಗ್ ಸೆಟ್‌ನಲ್ಲಿ ಅವರು ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರಿಗೆ ಒಂದು ರೀತಿಯ ‘ಮೌನ ಮೋಡಿ’ ಮಾಡುವ ಶಕ್ತಿಯಿದೆ. ಅವರು ಏನನ್ನೂ ಹೇಳದಿದ್ದರೂ ಅವರ ವ್ಯಕ್ತಿತ್ವದಲ್ಲಿ ಒಂದು ನಿಗೂಢ ಆಕರ್ಷಣೆ ಇದೆ. ವೃತ್ತಿಜೀವನದಲ್ಲಿ ಅವರು ಅತ್ಯಂತ ವೃತ್ತಿಪರರಾಗಿದ್ದು, ಯಾವುದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದು ತ್ರಿಶಾ ಹೇಳಿದ್ದಾರೆ.

ಹಳೆಯ ಸಂದರ್ಶನವೊಂದರಲ್ಲಿ ವಿಜಯ್ ಅವರ ವಿಚಿತ್ರ ಅಭ್ಯಾಸದ ಬಗ್ಗೆ ಹೇಳಿದ್ದ ತ್ರಿಶಾ, ಶೂಟಿಂಗ್ ಸಮಯದಲ್ಲಿ ವಿಜಯ್ ಅವರು ಸೆಟ್‌ನ ಯಾವುದೋ ಒಂದು ಮೂಲೆಯಲ್ಲಿ ಗೋಡೆಯ ಕಡೆಗೆ ಮುಖ ಮಾಡಿ ಗಂಟೆಗಟ್ಟಲೆ ಸುಮ್ಮನೆ ಕುಳಿತುಬಿಡುತ್ತಿದ್ದರು. ಅಷ್ಟೊಂದು ಶಾಂತವಾಗಿರುತ್ತಿದ್ದ ಅವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯ್ ಮತ್ತು ತ್ರಿಶಾ ಸುಮಾರು 20 ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದಾರೆ. ‘ಲಿಯೋ’ ಚಿತ್ರದ ಸಮಯದಲ್ಲಿ ಮಾತನಾಡಿದ್ದ ತ್ರಿಶಾ, 19ನೇ ವಯಸ್ಸಿನಿಂದಲೂ ವಿಜಯ್ ಅವರ ಸ್ನೇಹವಿದ್ದು, ಅವರ ಜೊತೆ ಕೆಲಸ ಮಾಡುವುದು ಮನೆಗೆ ಬಂದಂತೆ ಭಾಸವಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ರಾಖಿ ಸಾವಂತ್ ಕೂಡ ಇವರಿಬ್ಬರ ಜೋಡಿ ಚೆನ್ನಾಗಿದೆ, ಇವರು ಮದುವೆಯಾಗಬೇಕು ಎಂದು ಹೇಳಿಕೆ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular