HomeLatest Newsಗಮನಿಸಿ : ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು ತಿಳಿಯಿರಿ

ಗಮನಿಸಿ : ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು ತಿಳಿಯಿರಿ

ಬೇಸಿಗೆಯಲ್ಲಿ ಹಾವು‍ಗಳ ಕಾಟ ಹೆಚ್ಚಿರುತ್ತದೆ. ಗದ್ದೆ, ತೋಟದ ಕೆಲಸಕ್ಕೆ ಹೋಗುವವರು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ . ಹಳ್ಳಿ ಕಡೆಗಳಲ್ಲಿ ಹಾವುಗಳ ಓಡಾಟ ಜಾಸ್ತಿ ಇರುತ್ತವೆ. ಎಷ್ಟೇ ಜಾಗರೂಕತೆ ವಹಿಸಿದರೂ ಹಾವು ಕಡಿತ ಪ್ರಕರಣಗಳು ಸಂಭವಿಸುತ್ತವೆ. ಈ ಸಮಯದಲ್ಲಿ ಸಮಾಧಾನದಿಂದಿರಿ ಮತ್ತು ಕಡಿತಕ್ಕೊಳಗಾದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು .

ವಿಷಕಾರಿ ಹಾವು ಕಚ್ಚಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ..!
• ಗಾಬರಿಯಾಗಬೇಡಿ
• ರಕ್ತ ಬಂಧಕ ಪಟ್ಟಿಯನ್ನು ಕಟ್ಟಬೇಡಿ
• ಗಾಯವನ್ನು ಕೊಯ್ಯಬೇಡಿ, ಮುಟ್ಟಬೇಡಿ
• ಗಾಯವನ್ನು ಸುಡಬೇಡಿ
• ಆಸ್ಪತ್ರೆಯಲ್ಲಿ ಕೊಡುವ ಔಷಧವನ್ನು ಬಿಟ್ಟು ಬೇರೆ ಯಾವುದೇ ಚಿಕಿತ್ಸೆಯನ್ನು ನೀಡಬೇಡಿ
ಹಾವು ಕಚ್ಚಿದಾಗ ಸಮಾಧಾನದಿಂದಿರಿ ಮತ್ತು ಕಡಿತಕ್ಕೊಳಗಾದ ವ್ಯಕ್ತಿಯನ್ನು
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿರಿ
• ನಾಟಿ ಮದ್ದು ನೀಡುವವರ ಬಳಿ ಹೋಗಬೇಡಿ
• ಸಮಯವನ್ನು ವ್ಯರ್ಥ ಮಾಡಬೇಡಿ

ಶತಮಾನಗಳಿಂದಲೂ ಹಾವುಗಳು ಮತ್ತು ಮನುಷ್ಯರ ನಡುವಿನ ಸಂಬಂಧ ಅಷ್ಟು ಉತ್ತಮವಾಗಿಲ್ಲ. ಎರಡೂ ಜೀವಿಗಳು ಒಬ್ಬರನ್ನೊಬ್ಬರು ನೋಡಿ ಭಯಪಡುತ್ತವೆ. ಮುಖಾಮುಖಿಯಾದಾಗ ಜೀವವನ್ನು ಉಳಿಸಿಕೊಳ್ಳಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಭಾರತದಲ್ಲಿ ಹಾವು ಕಡಿತದಿಂದ ಅನೇಕ ಜನರು ಸಾಯುತ್ತಾರೆ. ಹಾಗಾಗಿ ಹಾವುಗಳ ಬಗ್ಗೆ ಜಾಗರೂಕರಾಗಿರಬೇಕು. ಹಾವು ಕಡಿದಾಗ ಜೀವ ಉಳಿಸಲು ಏನು ಮಾಡಬೇಕು ಎಂಬುದನ್ನು ತಿಳಿದಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾವು ಕಚ್ಚಿದಾಗ ಏನು ಮಾಡಬೇಕು ?
ಅಂಕಿಅಂಶಗಳ ಪ್ರಕಾರ ಪ್ರಪಂಚದಲ್ಲಿ 3 ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಇದರಲ್ಲಿ ಕೇವಲ 10 ರಿಂದ 15 ಪ್ರತಿಶತದಷ್ಟು ಹಾವುಗಳು ವಿಷಪೂರಿತವಾಗಿವೆ. ಅವು ಮನುಷ್ಯರನ್ನು ಕೊಲ್ಲುವ ಶಕ್ತಿಯನ್ನು ಹೊಂದಿವೆ. ಅನೇಕ ಬಾರಿ ವಿಷರಹಿತ ಹಾವುಗಳ ಕಡಿತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಾರೆ, ಭಯದಿಂದಲೇ ಸತ್ತು ಹೋಗುತ್ತಾರೆ. ಹಾಗಾಗಿ ಹಾವು ಕಡಿದಾಗ ಭಯಪಡಬಾರದು.

ಹಾವು ಕಚ್ಚಿದಾಗ ಏನಾಗುತ್ತದೆ ?
ಹಾವು ಕಚ್ಚಿದಾಗ ವಾಂತಿ, ವಾಕರಿಕೆ, ಹೊಟ್ಟೆ ನೋವು, ತಲೆಸುತ್ತು, ತಲೆನೋವು, ಕಡಿಮೆ ರಕ್ತದೊತ್ತಡ, ತೀವ್ರವಾದ ಬಾಯಾರಿಕೆ ಮತ್ತು ಜ್ವರ ಮುಂತಾದ ಅನೇಕ ರೀತಿಯ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ. ಅನೇಕ ಹಾವುಗಳ ವಿಷವು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಆದರೆ ಕೆಲವು ಹಾವುಗಳ ವಿಷವು 3 ರಿಂದ 4 ಗಂಟೆಗಳಲ್ಲಿ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ ಜೀವವನ್ನು ಉಳಿಸಬಹುದು.

ತೊಗರಿ ಬೇಳೆ – ಹಾವು ಕಚ್ಚಿದಾಗ ತೊಗರಿಬೇಳೆಯನ್ನು ತಿನ್ನಬೇಕು. ಅಕಸ್ಮಾತ್ ತೊಗರಿ ಗಿಡವಿದ್ದರೆ ಹಾವು ಕಚ್ಚಿದವರಿಗೆ ಆ ಗಿಡದ ಬೇರನ್ನು ಅರೆದು ತಿನ್ನಿಸಿದರೆ ಬೇಗ ವಿಷದ ಪರಿಣಾಮ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ – ಬೆಳ್ಳುಳ್ಳಿ ಕೂಡ ಹಾವಿನ ವಿಷದ ಪರಿಣಾಮವನ್ನು ಕಡಿಮೆ ಮಾಡಬಲ್ಲದು. ಹಾವಿನ ಕಡಿತಕ್ಕೊಳಗಾದರೆ ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ನಂತರ ಅದಕ್ಕೆ ಜೇನುತುಪ್ಪ ಬೆರೆಸಿ ತಿನ್ನಿ. ಇಷ್ಟೆಲ್ಲಾ ಮನೆಮದ್ದುಗಳಿದ್ದರೂ ಹಾವು ಕಡಿತಕ್ಕೆ ನಿಜವಾದ ಚಿಕಿತ್ಸೆಯು ವೈದ್ಯರಿಂದ ಮಾತ್ರ ಸಾಧ್ಯ. ಮೊದಲು ಅವರನ್ನು ವೈದ್ಯರ ಬಳಿ ಕರೆದೊಯ್ಯಿರಿ. ಯಾವ ಹಾವು ಕಡಿದಿದೆ ಎಂಬುದನ್ನು ಪತ್ತೆ ಮಾಡಲು ಆ ಹಾವಿನ ಫೋಟೋವನ್ನು ತೆಗೆದಿಟ್ಟುಕೊಳ್ಳಿ ಅಥವಾ ಹಾವಿನ ವಿವರ ನೀಡಲು ಪ್ರಯತ್ನಿಸಿ. ಇದರಿಂದ ವೈದ್ಯರಿಗೆ ಸರಿಯಾದ ಔಷಧ ನೀಡಲು ಸುಲಭವಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular