HomeLatest News'ಸಮಗ್ರ ಶಿಶು ಅಭಿವೃದ್ಧಿ ಸೇವೆ'ಗಳಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳ ಪಾತ್ರವೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

‘ಸಮಗ್ರ ಶಿಶು ಅಭಿವೃದ್ಧಿ ಸೇವೆ’ಗಳಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳ ಪಾತ್ರವೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು :  ಭಾರತ ಸಂವಿಧಾನದ 253 ಜಿ ರನ್ವಯ ರಾಜ್ಯಗಳು ಪಂಚಾಯಿತಿಗಳಿಗೆ ಅಧಿಕಾರ ಮತ್ತು ಪ್ರಾಧಿಕಾರವನ್ನು ನೀಡಬೇಕೆಂದು ಆದೇಶಿಸುತ್ತದೆ. ಇದರಿಂದ, ಪಂಚಾಯಿತಿಗಳು ಸ್ವಯಂ ಆಡಳಿತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು ಮತ್ತು ಹನ್ನೊಂದನೆಯ ಪರಿವಿಡಿಯಲ್ಲಿರುವ ನಮೂದಿಸಿರುವ ಎಲ್ಲಾ 29 ವಿಷಯಗಳನ್ನು ಒಳಗೊಂಡಂತೆ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

1.ಸಂವಿಧಾನದ ಪ್ರಕಾರ ಪಂಚಾಯಿತಿಗಳ ಸಬಲೀಕರಣದಲ್ಲಿ ರಾಜ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಆದಾಗ್ಯೂ ವಿವಿಧ ಅಧ್ಯಯನಗಳು ಪಂಚಾಯಿತಿಗಳಿಗೆ ಹಂಚಿಕೆಯಾದ ಎಲ್ಲಾ 29 ವಿಷಯಗಳ ಕುರಿತು ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಆದೇಶಗಳಲ್ಲಿ ರಾಜ್ಯಗಳಾದ್ಯಂತ ಹೆಚ್ಚಿನ ವ್ಯತ್ಯಾಸವನ್ನು ಸೂಚಿಸಿವೆ.

2. ಕೇಂದ್ರ ಸರ್ಕಾರವು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಾಮುಖ್ಯತೆಯ ಹಲವಾರು ಅಭಿವೃದ್ಧಿ ಉಪಕ್ರಮಗಳನ್ನು ವಿವಿಧ ಕೇಂದ್ರ ಪ್ರಾಯೋಜಿತ ಮತ್ತು ಕೇಂದ್ರ ವಲಯ ಯೋಜನೆಗಳ ಮೂಲಕ ಬೆಂಬಲಿಸುತ್ತದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿಗಳಿಗೆ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆ ಇತ್ಯಾದಿಗಳಲ್ಲಿ ಗಣನೀಯ ಪ್ರಾತವನ್ನು ವಹಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3. ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐ.ಸಿ.ಡಿ.ಎಸ್) ಯೋಜನೆಯು ಆರು ವರ್ಷದೊಳಗಿನ ಮಕ್ಕಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಮತ್ತು ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಬರುವ ಸೇವೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನಿಸಲಾಗುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಪಂಚಾಯಿತಿಗಳಿಗೆ ನಿರ್ದಿಷ್ಟ ಹಂತದಲ್ಲಿ ನಿರ್ದಿಷ್ಟ ಪಾತ್ರಗಳನ್ನು ನಿಯೋಜಿಸಲಾಗಿದೆ.

3.1 ಪಂಚಾಯಿತಿಗಳ ಪಾತ್ರ:

1. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕಾಂಶ ಸಮಿತಿಗಳು ಗ್ರಾಮ ಮತ್ತು ಸ್ಥಳೀಯ ಮಟ್ಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ (ಐ.ಸಿ.ಡಿ.ಎಸ್) ಕಾರ್ಯಕ್ರಮದ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿವೆ.

2. ಸಮುದಾಯದ ಪ್ರತಿನಿಧಿಗಳು, ಚುನಾಯಿತ ಸದಸ್ಯರು ಮತ್ತು ಮಕ್ಕಳ ಪೌಷ್ಟಿಕಾಂಶ ಸಮಿತಿಯನ್ನು ಒಳಗೊಂಡ ಗ್ರಾಮ ಆರೋಗ್ಯ. ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿ (ತಾಯಿ ಮತ್ತು ಮಕ್ಕಳ ಪೌಷ್ಟಿಕಾಂಶ ಸಮಿತಿ)ಯ ಉಪಸಮಿತಿಯು ಸಮುದಾಯ ಪ್ರತಿನಿಧಿಗಳು, ಕಾರ್ಯಕರ್ತರನ್ನು ಒಳಗೊಂಡಂತೆ ಪ್ರತಿ ಗ್ರಾಮದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಗಾಗಿ ಸ್ಥಾಪಿಸಲಾಗಿದೆ.

3.2 ಗ್ರಾಮ ಪಂಚಾಯಿತಿಗಳ ಪಾತ್ರ:

1. ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಯು ಗ್ರಾಮ ಪಂಚಾಯಿತಿಯ ಉಪ ಸಮಿತಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಸದರಿ ಉಪಸಮಿತಿಯು ಗ್ರಾಮ ಪಂಚಾಯಿತಿಗಳ ಒಟ್ಟಾರೆ ಮೇಲ್ವಿಚಾರಣೆಯ ಕಾರ್ಯನಿರ್ವಹಿಸಬಹುದಾಗಿದೆ.

2. ಗ್ರಾಮ ಪಂಚಾಯಿತಿ/ವಾರ್ಡ್ ಸದಸ್ಯರ (ಮಹಿಳೆಯರಿಗೆ ಆದ್ಯತೆ) ನೇತೃತ್ವದಲ್ಲಿ ಅಂಗನವಾಡಿ ಮಟ್ಟದ ಸಮಿತಿಗಳು ಅಂಗನವಾಡಿ ಕೇಂದ್ರಗಳಲ್ಲಿ ಸೇವೆಗಳ ವಿತರಣೆಯನ್ನು ಸುಧಾರಿಸಲು ಅಗತ್ಯ ಕ್ರಮಕೈಗೊಳ್ಳುವುದನ್ನು ಪರಿಶೀಲಿಸಬಹುದಾಗಿದೆ ಮತ್ತು ಕ್ರಮ ತೆಗೆದುಕೊಳ್ಳಲು ಸೂಚಿಸಬಹುದಾಗಿದೆ. ಸದರಿ ಸಮಿತಿಯು ಅಧಿಕಾರ ಹೊಂದಿದ್ದು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

ಈ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಯ ಕ್ರಮಬದ್ಧತೆಯನ್ನು ಪರಿಶೀಲಿಸುವುದು.

# ಜನಸಂಖ್ಯೆ ವ್ಯಾಪ್ತಿಗನುಗುಣವಾಗಿ ಸಮೀಕ್ಷೆ ಮಾಡಿದ ಎಲ್ಲಾ ಅರ್ಹ ಫಲಾನುಭವಿಗಳನ್ನು ಖಚಿತಪಡಿಸಿಕೊಳ್ಳುವುದು.

# 0-3 ವರ್ಷ ಮತ್ತು 3-6 ವರ್ಷದ ಮಕ್ಕಳ ಪೌಷ್ಟಿಕಾಂಶದ ಸ್ಥಿತಿ, ತೂಕ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಯ ನೂತನ ಬೆಳವಣಿಗೆಯ ಚಾರ್ಟ್ ಹಾಗೂ ಜಂಟಿಯಾಗಿ ತಾಯಿ ಮತ್ತು ಮಕ್ಕಳ ಸಂರಕ್ಷಣಾ ಚೀಟಿಗಳ ಲಭ್ಯತೆ ಹಾಗು ಮಧ್ಯಮ/ ಪ್ರತ್ಯೇಕವಾಗಿ ಪೌಷ್ಟಿಕಾಂಶ ಕೊರತೆಯುಳ್ಳ ಮಕ್ಕಳ ಸಂಖ್ಯೆ ಬಗ್ಗೆ ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸುವುದು.

# ಔಪಚಾರಿಕವಲ್ಲದ ಪಿ.ಎಸ್.ಇ ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ – ಪ್ರತಿದಿನದ ಚಟುವಟಿಕೆಗಳು, ಸ್ಥಳೀಯ ಕಲಿಕೆ ಮತ್ತು ಆಟದ ಸಾಮಗ್ರಿಗಳ ಬಳಕೆ/ಅಭಿವೃದ್ಧಿ ಮತ್ತು ಪೋಷಕರ ಸಭೆ ಆಯೋಜನೆ ಇತ್ಯಾದಿಗಳು.

# ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳ ಸಭೆಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಕೆಲಸಗಾರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಮಾಹೆ ಜರುಗುವ ಆರೋಗ್ಯ ಮತ್ತು ಪೌಷ್ಠಿಕಾಂಶ ದಿನದಂದು ಕನಿಷ್ಠ ಒಬ್ಬ ಸದಸ್ಯರ (ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಎ.ಎನ್.ಎಂನ ಕಿರಿಯ ಆರೋಗ್ಯ ಸಹಾಯಕಿ) ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಅದು ಉತ್ತಮವಾಗಿ ಸಂಘಟಿತವಾಗಿ ಎಲ್ಲಾ ಸೂಕ್ತ ಸೇವೆಗಳನ್ನು ಒದಗಿಸಲಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು.

ಸ್ಥಾಪಿತ ಮಾನದಂಡಗಳ ಬೆಳಕಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಲಭ್ಯವಿರುವ ಪರಿಶೀಲನಾ ಸೌಲಭ್ಯಗಳು (ಶುದ್ಧ ಕುಡಿಯುವ ನೀರು, ಕಾರ್ಯನಿರ್ವಹಿಸುವ ಶೌಚಾಲಾಯ, ಆಟದ ಮೈದಾನ, ಪಿ.ಎಸ್.ಇ/ಔಷಧಿ ಕಿಟ್‌ಗಳು, ಅಡುಗೆ ಪಾತ್ರೆಗಳು) ಸೇರಿದಂತೆ ಮೂಲಭೂತಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದು.

ಅಂಗನವಾಡಿ ಕೇಂದ್ರಗಳು ಅಥವಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಯಾವುದೇ ವಿವಾದಗಳಿಗೆ ಸಂಬಂಧಿಸಿದಂತೆ ಹಾಜರಾಗುವುದು ಮತ್ತು ಅಂತಹ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸುವುದು. ಒಂದು ವೇಳೆ ಬಗೆಹರಿಸಲಾಗದ ವಿವಾದಗಳಿದ್ದಲ್ಲಿ ಗ್ರಾಮ ಪಂಚಾಯತ್ ಅಥವಾ ತಾಲ್ಲೂಕು ಮಟ್ಟದಲ್ಲಿನ ಮೇಲ್ವಿಚಾರಣಾ ಸಮಿತಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸುವುದು.

# ಅಂಗನವಾಡಿ ಕೇಂದ್ರಗಳಲ್ಲಿ ಒದಗಿಸಲಾಗುತ್ತಿರುವ ಸೇವೆಗಳಲ್ಲಿ ಕೊರತೆಯಾದಲ್ಲಿ ಅಥವಾ ಅಭಿವೃದ್ಧಿಯಲ್ಲಿ ಕುಂಠಿತವಾದಲ್ಲಿ ಅದಕ್ಕೆ ಕಾರಣವಾದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು/ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಮೇಲ್ವಿಚಾರಕರೊಂದಿಗೆ ಸಮಲೋಚನೆ ಮಾಡಿ ಸ್ಥಳೀಯವಾಗಿ ಸೇವೆಗಳನ್ನು ಬಲಪಡಿಸಲು ಅಥವಾ ನ್ಯೂನ್ಯತೆಗಳನ್ನು ಸರಿಪಡಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಹಾಗೂ ಔಪಚಾರಿಕವಾಗಿ ದಾಖಲಿಸುವುದು. ಪರಿಹರಿಸಲಾಗದ ಸಮಸ್ಯೆಗಳನ್ನು ತಾಲ್ಲೂಕು ಮಟ್ಟದ ಮೇಲ್ವಿಚಾರಣಾ ಸಮಿತಿಗೆ ಸಿ.ಡಿ.ಪಿ.ಒ ರವರ ಸೂಕ್ತ ಪ್ರತಿಯೊಂದಿಗೆ ಸಂಬಂಧಪಟ್ಟ ಮೇಲ್ವಿಚಾರಣಾಧಿಕಾರಿ/ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿಗೆ ಸಲ್ಲಿಸುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular