HomeKarnatakaBREAKING: ವೀಕ್ ಆಫ್ ಕೊಡದೇ ಲೇಡಿ ಸೂಪರ್ ವೈಸರ್ ಕಿರುಕುಳ: ಮನನೊಂದ ಮಹಿಳೆ ಆತ್ಮಹತ್ಯೆ

BREAKING: ವೀಕ್ ಆಫ್ ಕೊಡದೇ ಲೇಡಿ ಸೂಪರ್ ವೈಸರ್ ಕಿರುಕುಳ: ಮನನೊಂದ ಮಹಿಳೆ ಆತ್ಮಹತ್ಯೆ

ಮೈಸೂರು: ಲೇಡಿ ಸೂಪರ್ ವೈಸರ್ ಓರ್ವರು ವೀಕ್ ಆಫ್ ಕೊಡದೇ ಕಿರುಕುಳ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸೂಪರ್ ವೈಸರ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಕೆಲಸದ ವೇಳೆ ತಮಗೆ ನೀಡುತಿದ್ದ ತೊಂದರೆ ತುರ್ತು ಸಂದರ್ಭಗಳಲ್ಲಿಯೂ ನೀಡದ ವೀಕ್ ಆಫ್ ಬಗ್ಗೆ ವಿವರಿಸಿದ್ದಾರೆ. ನಾಗೇಶ್ವರಿ ಆತ್ಮಹತ್ಯೆಗೆ ಶರಣಾದ ಮಹಿಳೆ.

ನಾಗೇಶ್ವರಿ ಟಾಟಾ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದರು. ಲೇಡಿ ಸೂಪರ್ ವೈಸರ್ ಡಾಲಿ ಎಂಬುವವರು ವೀಕ್ ಆಫ್ ಕೂಡ ಕೊಡುತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳಿಂದ ವೀಕ್ ಆಫ್ ಕೊಡದೇ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ತುರ್ತು ರಜೆಗಳನ್ನು ಕೂಡ ಕೊಡದೇ ಸತಾಯಿಸುತ್ತಿದ್ದರು. ಅನಿವಾರ್ಯವಾಗಿ ವೀಕ್ ಆಫ್ ತೆಗೆದುಕೊಂಡಿದ್ದಕ್ಕೆ ಕೆಲಸದಿಂದಲೇ ತೆಗೆದುಹಾಕಿದ್ದರು ಎಂದು ನಾಗೇಶ್ವರಿ ಡೆತ್ ನೋಟ್ ನಲ್ಲಿ ಉಲೇಖಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular