HomeKarnatakaಜಲಜೀವನ್ ಮಿಷನ್ ‘ಕುಡಿಯುವ ನೀರು ಕಲುಷಿತ’ ವರದಿ, ಸ್ಪಷ್ಟನೆ

ಜಲಜೀವನ್ ಮಿಷನ್ ‘ಕುಡಿಯುವ ನೀರು ಕಲುಷಿತ’ ವರದಿ, ಸ್ಪಷ್ಟನೆ

ಕರ್ನಾಟಕದ ವಿವಿಧ ಕಡೆ ನಡೆದ ಜಲಜೀವನ್ ಪರೀಕ್ಷೆಯಲ್ಲಿ ದೃಢ ಬ್ಯಾಕ್ಟೀರಿಯಾ, ರಾಸಾಯನಿಕ ಮಿಶ್ರಣ, ಆತಂಕ  ಉಲ್ಬಣ ‘ಕುಡಿಯುವ ನೀರು ಕಲುಷಿತ’ ಎಂಬ ಮಾಧ್ಯಮ ವರದಿ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಪಷ್ಟನೆ ನೀಡಿದೆ.

ಇಲಾಖೆಯಡಿಯಲ್ಲಿ ಬರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದೆ.

ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿರುವ ವಿವರಗಳು ರಾಜ್ಯಾದ್ಯಂತ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಪರೀಕ್ಷಾ ಪ್ರಯೋಗಾಲಯಗಳಲ್ಲಿ 2023-24 ರಿಂದ 2025-26ನೇ ಸಾಲಿನಲ್ಲಿ ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿರುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು ಭಾರತ  ಸರ್ಕಾರದ  ಜಲಜೀವನ್ ಮಿಷನ್‌ನ ಇಂದೀಕರಿಸಿರುವ ಅಂಕಿಅಂಶಗಳಾಗಿದ್ದು, ಇದರಲ್ಲಿ ಇಲಾಖೆಯು ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೈಗೊಂಡಿರುವ ವಿಸ್ತ್ರುತ  ಮಾಹಿತಿಗಳು ಒಳಗೊಂಡಿರುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿಯಲ್ಲಿ 60000 ನೀರಿನ ಮಾದರಿಗಳಲ್ಲಿ  ಸಮಸ್ಯೆ ಎಂದು ಹೇಳಿದ್ದು, ಆದರೆ ಇಲ್ಲಿಯವರೆವಿಗೂ  ಯಾವುದೇ ಸಾಲಿನಲ್ಲಿ  ರಾಜ್ಯದಲ್ಲಿ ಅಷ್ಟು ನೀರಿನ ಮಾದರಿಗಳು ಕಲುಷಿತವೆಂದು ಕಂಡು ಬಂದಿರುವುದಿಲ್ಲ. ಪ್ರತಿವರ್ಷವೂ ಎಲ್ಲಾ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಮಳೆಗಾಲದ ಮುನ್ನ ಮತ್ತು ಮಳೆಗಾಲದ ನಂತರ ಕೈಗೊಳ್ಳುವುದರಿಂದ ಪ್ರತಿ ಸಾಲಿನಲ್ಲಿಯೂ  contaminations Numbers  ಬರುತ್ತವೆ. ಆದರೆ ಸದರಿ ವರದಿಯಲ್ಲಿ ಎಲ್ಲಾ ಮೂರು ವರ್ಷಗಳಲ್ಲಿ  ಕಲುಷಿತವೆಂದು ಕಂಡು ಬಂದಿರುವ ನೀರಿನ ಮಾದರಿಗಳ ಸಂಖ್ಯೆಗಳನ್ನು ಕ್ರೂಢೀಕರಿಸಿದ್ದಾಗಿರುತ್ತದೆ.  

ಇಲಾಖೆ ಕೈಗೊಂಡ ಕ್ರಮಗಳು: ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು  ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಬರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ  ಇಲಾಖೆಯು ಕಾರ್ಯನಿರ್ವಹಿಸುತ್ತಿದ್ದು ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ.

ರಾಜ್ಯದಲ್ಲಿ ಮೇಲ್ಮೈ ನೀರು ಲಭ್ಯವಿರುವ ಕಡೆಗಳಲ್ಲಿ ಇಲ್ಲಿಯವರೆವಿಗೂ  500 ಕ್ಕೂ ಹೆಚ್ಚಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದ್ದು, ಅಂರ್ತಜಲ ಆಧಾರಿತ ಕೊಳವೆ ಬಾವಿಗಳಿಂದ ನೀರನ್ನು ಸರಬರಾಜು ಮಾಡುತ್ತಿರುವ ಗ್ರಾಮಗಳಲ್ಲಿ ಮುಂಜಾಗ್ರತ ಕ್ರಮವಾಗಿ 16,000ಕ್ಕಿಂತ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಅಳವಡಿಸಲಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತವೆ.

ನೀರಿನ ಮಾದರಿಗಳನ್ನು ಹತ್ತಿರದ ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆಗೆ ಒಳಪಡಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಂಡು  ಕಲುಷಿತ ನೀರಿಗೆ ಪರ್ಯಾಯವಾಗಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸಲಾಗುವುದು. ಇಲಾಖೆಯು ಶುದ್ಧ ಕುಡಿಯುವ ನೀರನ್ನು ಒದಗಿಸಲು ತೆಗೆದುಕೊಂಡಿರುವ ಪರ್ಯಾಯ ಕ್ರಮಗಳ ವಿವರಗಳನ್ನು ವರದಿಯ ಪ್ರಕಟಿಸಿರುವುದಿಲ್ಲ.

ಪ್ರಥಮ ಆದ್ಯತೆಯಾಗಿ ಕುಡಿಯುವ ನೀರಿನ ಗುಣಮಟ್ಟಕ್ಕೆ ಪ್ರಾಮುಖ್ಯತೆಯನ್ನು ನೀಡುವ ಸಲುವಾಗಿ ರಾಜ್ಯಾದ್ಯಂತ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿರುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು  ಜಲಜೀವನ್ ಮಿಷನ್ ಮಾರ್ಗಸೂಚಿ ಪ್ರಕಾರ ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದೆ.

ಇದಲ್ಲದೆ ಭಾರತ ಸರ್ಕಾರದ ಜಲಜೀವನ್ ಮಿಷನ್  ಯೋಜನೆಯಡಿ 2024-25ನೇ ಸಾಲಿನಿಂದ   ಇಲ್ಲಿಯವರೆವಿಗೂ ಪ್ರಯೋಗಾಲಯಗಳ ನಿರ್ವಹಣೆಗೆ ಯಾವುದೇ ಅನುದಾನ  ಬಿಡುಗಡೆಗೊಳಿಸದಿದ್ದರೂ ಸಹಾ ಕರ್ನಾಟಕ ರಾಜ್ಯ ಸರ್ಕಾರದ  ಅನುದಾನದಡಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಮತ್ತು 47 ತಾಲ್ಲೂಕು ಕೇಂದ್ರಗಳಲ್ಲಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ರಾಸಾಯನಿಕ ವಿಶ್ಲೇಷಣೆಗಾರರು, ಸೂಕ್ಷ್ಮಜೀವಾಣು ವಿಶ್ಲೇಷಣೆಗಾರರು, ವಿಶ್ಲೇಷಣೆಗಾರರು ಮತ್ತು ಇತರೆ  ಸಿಬ್ಬಂದಿಗಳು ಒಳಗೊಂಡಂತೆ ಒಟ್ಟು 400 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಪ್ರಯೋಗಾಲಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಕೆಳಕಂಡಂತೆ ನೀರಿನ ಮಾದರಿಗಳ ಪರೀಕ್ಷೆಗಳನ್ನು ಕೈಗೊಳ್ಳಲಾಗಿದ್ದು, ಕಲುಷಿತವೆಂದು ಕಂಡು ಬಂದಂತಹ ನೀರಿನ ಮೂಲಗಳಿಗೆ ಪರ್ಯಾಯವಾಗಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸುವಲ್ಲಿ  ಇಲಾಖೆಯು ಕಾರ್ಯನಿರ್ವಹಿಸುತ್ತಿರುತ್ತದೆ.

ಪ್ರಾಥಮಿಕವಾಗಿ ಗ್ರಾಮ ಪಂಚಾಯತಿ/ ಗ್ರಾಮ/ ಜನವಸತಿ ಪ್ರದೇಶಗಳಲ್ಲಿ ಬರುವ  ಎಲ್ಲಾ ಕುಡಿಯುವ ನೀರಿನ ಮೂಲಗಳ ಸಂಭಾವ್ಯ ಗುಣಮಟ್ಟದ ಪರೀಕ್ಷೆಗಳ ಪ್ರಕಾರ ಮೂಲಕ ಕೈಗೊಳ್ಳಲಾಗುತ್ತಿದೆ.  ಇದಲ್ಲದೆ ಸರ್ಕಾರದ ನಿರ್ದೇಶನದಂತೆ ಇಲಾಖೆಯು ಮಳೆಗಾಲದ ಮುನ್ನ ಮತ್ತು ಮಳೆಗಾಲದ ನಂತರ ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯಾದ್ಯಂತ  ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ನಿಗಧಿತ ಗುರಿಗಿಂತ ಹೆಚ್ಚಿನ ಪ್ರಗತಿಯನ್ನು ಕೈಗೊಳ್ಳಲಾಗುತ್ತಿದೆ.

ಇದಲ್ಲದೆ ಕುಡಿಯುವ ನೀರಿನ ಗುಣಮಟ್ಟದ ಪರೀಕ್ಷೆಗೆ ಒತ್ತು ನೀಡುವ ಸಲುವಾಗಿ ಹೆಚ್ಚಿನ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಳ್ಳಲು  ಓಂಃಐ  ಮಾನ್ಯತೆ ಪಡೆದಿರುವ ಇತರೆ ಮೂರನೇ  ಸಂಸ್ಥೆ/ಖಾಸಗಿ ಪ್ರಯೋಗಾಲಯಗಳಲ್ಲಿ  2023-24 ಮತ್ತು 2024-25 ರಲ್ಲಿ 66811 ನೀರಿನ ಮಾದರಿಗಳ ಗುಣಮಟ್ಟದ ಪರೀಕ್ಷೆಗಳನ್ನು ಕೈಗೊಂಡು ಅಗತ್ಯ ಅನುದಾನವನ್ನು ಕರ್ನಾಟಕ ಸರ್ಕಾರದ ಅನುದಾನದಡಿ ಭರಿಸಲಾಗಿರುತ್ತದೆ.

ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಬರುವ  ನೀರಿನ ಮಾದರಿಗಳ ಗುಣಮಟ್ಟದ  ಪರೀಕ್ಷೆಗಳನ್ನು ಕೈಗೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯದೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಸದರಿ ವಿಶ್ವವಿದ್ಯಾಲಯದ ಸೂಕ್ಷ್ಮಜೀವಾಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ನೀರಿನ ಮಾದರಿಗಳ ಗುಣಮಟ್ಟದ  ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ.

ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್‍ ಸಮಿತಿಗಳನ್ನು ರಚಿಸಲಾಗಿರುತ್ತದೆ. ಸದರಿ ಸಮಿತಿಗಳು ಬೇಸಿಗೆ ಕಾಲದಲ್ಲಿ ನೀರಿನ ಸರಬರಾಜು ವ್ಯವಸ್ಥೆಯ ಕುರಿತು  ಪರಾಮರ್ಶಿಸಿ, ಶುದ್ಧ ಕುಡಿಯುವ ನೀರನ್ನು ವ್ಯವಸ್ಥೆಗೊಳಿಸಲು ಪ್ರತಿ ತಿಂಗಳು ಕಡ್ಡಾಯವಾಗಿ ಸಭೆಗಳನ್ನು ನಡೆಸಲು ಸರ್ಕಾರದಿಂದ ನಿರ್ದೇಶಿಸಲಾಗಿರುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular