HomeIndiaWATCH VIDEO : ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ ; ವಿಡಿಯೋ ವೈರಲ್

WATCH VIDEO : ಬಿಹಾರದಲ್ಲಿ ಕುಸಿದು ಬಿದ್ದ ಮತ್ತೊಂದು ಸೇತುವೆ ; ವಿಡಿಯೋ ವೈರಲ್

ಪಾಟ್ನಾ : ಒಂದು ವಾರದೊಳಗೆ ಬಿಹಾರದಲ್ಲಿ ಎರಡನೇ ಬಾರಿಗೆ ಸೇತುವೆ ಕುಸಿದಿದ್ದು, ಶನಿವಾರ ಮುಂಜಾನೆ ಸಿವಾನ್ ಜಿಲ್ಲೆಯ ಹಲವಾರು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಕುಸಿದಿದೆ.

ಅಧಿಕಾರಿಗಳ ಪ್ರಕಾರ, ದಾರೌಂಡಾ ಮತ್ತು ಮಹಾರಾಜ್ಗಂಜ್ ಬ್ಲಾಕ್ಗಳ ಗ್ರಾಮಗಳನ್ನು ಸಂಪರ್ಕಿಸುವ ಕಾಲುವೆಯ ಮೇಲೆ ನಿರ್ಮಿಸಲಾದ ಸಣ್ಣ ಸೇತುವೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕುಸಿದಿದೆ.ಸೇತುವೆ ಕುಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಎನ್ಡಿಎ ಆಡಳಿತದ ಬಿಹಾರದಲ್ಲಿ ಈ ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಅರಾರಿಯಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ 180 ಮೀಟರ್ ಉದ್ದದ ಸೇತುವೆ ಮಂಗಳವಾರ ಕುಸಿದಿತ್ತು.ಅದೃಷ್ಟವಶಾತ್, ಸೇತುವೆ ಕುಸಿದಾಗ ಯಾರೂ ಇರದ ಕಾರಣ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋ ನೋಡಿ..!

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular