HomeAutoಅಪಾಯಕಾರಿ ಸ್ಟಂಟ್ ವಿಡಿಯೋ; ಕಾರ್ ಗೆ ಸ್ಪೀಡಾಗಿ ಗುದ್ದಿದ ಬೈಕ್

ಅಪಾಯಕಾರಿ ಸ್ಟಂಟ್ ವಿಡಿಯೋ; ಕಾರ್ ಗೆ ಸ್ಪೀಡಾಗಿ ಗುದ್ದಿದ ಬೈಕ್

ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡೋದು ಯುವಕರಿಗೆ ಇತ್ತೀಚಿನ ದಿನಗಳಲ್ಲಿ ಕ್ರೇಜ್ ಆಗಿದೆ. ಆದರೆ ಅಪಾಯಕಾರಿ ಸ್ಟಂಟ್ ಗಳು ಕೆಲವೊಮ್ಮೆ ಪ್ರಾಣಕ್ಕೇ ಕುತ್ತು ತರುತ್ತವೆ. ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ಇಬ್ಬರು ಬೈಕ್ ಸವಾರರು ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದು ಅದರಲ್ಲಿ ಓರ್ವ ಕಾರ್ ಗೆ ಗುದ್ದುವ ಎದೆನಡುಗಿಸುವ ವಿಡಿಯೋ ವೈರಲ್ ಆಗುತ್ತಿದೆ.

ವೀಲೀಫೀಡ್ ಹೆಸರಿನ ಇನ್‌ಸ್ಟಾಗ್ರಾಮ್ ಪುಟವು ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಇಬ್ಬರು ಹುಡುಗರು ತಮ್ಮ ಬೈಕ್‌ಗಳಲ್ಲಿ ಸಾಹಸ ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ. ಓರ್ವ್ ಕಾರ್ ಗೆ ಡಿಕ್ಕಿ ಹೊಡೆದು ವಿಡಿಯೋ ಫ್ರೇಮ್‌ನಿಂದ ಕಣ್ಮರೆಯಾಗುತ್ತಾನೆ. 5 ಸೆಕೆಂಡುಗಳ ವೀಡಿಯೊವನ್ನು ಬಹುಶಃ ಬೈಕ್ ಸ್ಟಂಟ್ ಮಾಡುತ್ತಿದ್ದ ಹುಡುಗರ ಸ್ನೇಹಿತರು ಕಾರ್ ನಲ್ಲಿ ಕೂತು ಸೆರೆಹಿಡಿದಿರುವಂತೆ ತೋರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೀಡಿಯೊವನ್ನು ಪೋಸ್ಟ್ ಮಾಡುವಾಗ ಬಳಕೆದಾರರು “ಬ್ರೋ ಫ್ಲ್ಯಾಷ್‌ನಂತೆ ಕಣ್ಮರೆಯಾಗುತ್ತಾರೆ” ಎಂದು ಬರೆದಿದ್ದಾರೆ. ಕೆಲವೇ ದಿನಗಳಲ್ಲಿ ವೀಡಿಯೊ 55 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ . ಅವನು ಸತ್ತಿದ್ದಾನೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular