HomeCrimeShocking Video: ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಮುಖ್ಯ ರಸ್ತೆ

Shocking Video: ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಮುಖ್ಯ ರಸ್ತೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವಿಕಾಸ್ ನಗರದಲ್ಲಿ ನೋಡ್ತಾ ನೋಡ್ತಾ ಇದ್ದಂತೆ ರಸ್ತೆ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಆ ಜಾಗದಲ್ಲಿ ಯಾವುದೇ ವಾಹನ ಸಂಚರಿಸದೆ ಇದ್ದ ಕಾರಣ ಯಾವುದೇ ಸಾವು – ನೋವು ಸಂಭವಿಸಿಲ್ಲ. ಲಕ್ನೋದಲ್ಲಿ ಇದೇ ಮೊದಲ ಪ್ರಕರಣವಲ್ಲ. ಕಳೆದ ವರ್ಷವೂ ಇಲ್ಲಿ ರಸ್ತೆ ಕುಸಿದು ಬಿದ್ದಿತ್ತು. ನಂತ್ರ ಅದನ್ನು ದುರಸ್ತಿ ಮಾಡಲಾಗಿತ್ತು.

ವಿಕಾಸ್ ನಗರದ ಸೆಕ್ಟರ್ 08 ಕುರ್ಸಿ ರಸ್ತೆಯಿಂದ ಶಿವಾಜಿ ಮೂರ್ತಿಗೆ ಹೋಗುವ ಮುಖ್ಯರಸ್ತೆ ಬಳಿ ಬೃಹತ್‌ ಹೊಂಡ ನಿರ್ಮಾಣವಾಗಿದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ ಅಡಿಯಲ್ಲಿ ಯುಪಿ ಜಲ ನಿಗಮ ಈ ರಸ್ತೆಯಲ್ಲಿ ಕೆಲ ಕೆಲಸ ಮಾಡಿತ್ತು. ಇದ್ರಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.

ಭದ್ರತಾ ವ್ಯವಸ್ಥೆಗಳ ದೃಷ್ಟಿಯಿಂದ, ಲಕ್ನೋ ಮಹಾನಗರ ಪಾಲಿಕೆಯು ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಈ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಕೋಪಯೋಗಿ ಇಲಾಖೆ, ಜಲಮಂಡಳಿ ಹಾಗೂ ಜಲ ನಿಗಮ ದುರಸ್ಥಿ ಕಾರ್ಯದ ಭರವಸೆ ನೀಡಿದೆ. ಎಕ್ಸ್‌ ಖಾತೆಯಲ್ಲಿ ರಸ್ತೆ ಕುಸಿತದ ವಿಡಿಯೋ ವೈರಲ್‌ ಆಗಿದ್ದು, ಜನರು ಕಾಮಗಾರಿ ವಿರುದ್ಧ ಹರಿಹಾಯ್ದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular