HomeEntertainmentವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಫ್ಯಾಮಿಲಿ ಡ್ಯಾನ್ಸ್: ಅತ್ತಿಗೆಯ ಬಗ್ಗೆ ಭಾವುಕ ಪೋಸ್ಟ್ ಹಾಕಿದ...

ವೈರಲ್ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಫ್ಯಾಮಿಲಿ ಡ್ಯಾನ್ಸ್: ಅತ್ತಿಗೆಯ ಬಗ್ಗೆ ಭಾವುಕ ಪೋಸ್ಟ್ ಹಾಕಿದ ಆನಂದ್

ಟಾಲಿವುಡ್‌ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರ ತಮ್ಮ ಜೀವನದ ಪ್ರತಿ ಕ್ಷಣವನ್ನು ಸಂಭ್ರಮದಿಂದ ಕಳೆಯುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಸಹೋದರ ಆನಂದ್ ದೇವರಕೊಂಡ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸುಂದರವಾದ ಲಾನ್‌ನಲ್ಲಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಈ ದಂಪತಿ ಸಂಭ್ರಮದಿಂದ ಹೆಜ್ಜೆ ಹಾಕುತ್ತಿರುವುದು ವಿಡಿಯೋದಲ್ಲಿದೆ.

ಸಂಚಾರಮೇ ಹಾಡಿಗೆ ಭರ್ಜರಿ ಸ್ಟೆಪ್ಸ್

ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ ‘ಎಪಿಕ್’ನ ‘ಸಂಚಾರಮೇ’ ಹಾಡಿಗೆ ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಬಣ್ಣ ಬಣ್ಣದ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿ ಮಿಂಚುತ್ತಿದ್ದರೆ, ರಶ್ಮಿಕಾ ಮಂದಣ್ಣ ಅವರು ಕ್ಯಾಶುವಲ್ ಶರ್ಟ್ ಮತ್ತು ಶಾರ್ಟ್ಸ್‌ನಲ್ಲಿ ಅತಿ ಸರಳವಾಗಿ ಕಾಣಿಸಿಕೊಂಡಿದ್ದಾರೆ. “ನೋಡಲು ಇದು ಗೊಂದಲಮಯವಾಗಿ ಕಂಡರೂ, ನಮಗೆ ಪ್ರಿಯವಾದವರ ಜೊತೆ ಪ್ರಯಾಣ ಮಾಡುವುದು ಮತ್ತು ನೃತ್ಯ ಮಾಡುವುದಕ್ಕಿಂತ ಹೆಚ್ಚಿನ ಸಂತೋಷ ಯಾವುದೂ ಇಲ್ಲ” ಎಂದು ಆನಂದ್ ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅತ್ತಿಗೆಯ ಬಗ್ಗೆ ಆನಂದ್ ದೇವರಕೊಂಡ ಭಾವುಕ ಮಾತು

ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಅದ್ಧೂರಿ ವಿವಾಹದ ನಂತರ ಆನಂದ್ ತಮ್ಮ ಅಣ್ಣ-ಅತ್ತಿಗೆಗಾಗಿ ಒಂದು ಸುಂದರವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ನವಜೋಡಿಯನ್ನು ಅಪ್ಪಿಕೊಂಡಿರುವ ಫೋಟೋ ಹಾಕಿ “ಹಲವು ಬಾರಿ ಅಭಿಮಾನಿಗಳು ನನ್ನ ಬಳಿ ‘ವದಿನಾ (ಅತ್ತಿಗೆ) ಹೇಗಿದ್ದಾರೆ?’ ಎಂದು ಕೇಳಿದಾಗ ಏನು ಪ್ರತಿಕ್ರಿಯಿಸಬೇಕು ಎಂದು ನನಗೆ ತಿಳಿಯುತ್ತಿರಲಿಲ್ಲ. ಆದರೆ ಇಂದು ನನ್ನ ಅಣ್ಣನಿಗೆ ಮದುವೆಯಾಗಿದೆ. ನನಗೆ ಜಗತ್ತಿನ ಅತ್ಯಂತ ಸಕಾರಾತ್ಮಕ ಮತ್ತು ಕರುಣಾಮಯಿ ವ್ಯಕ್ತಿ ಅತ್ತಿಗೆಯಾಗಿ ಸಿಕ್ಕಿದ್ದಾರೆ. ಇವರ ನಗು ಹೀಗೆಯೇ ಇರಲಿ” ಎಂದು ಆನಂದ್ ಬರೆದುಕೊಂಡಿದ್ದಾರೆ.

ಅಭಿಮಾನಿಗಳು ಈ ವಿಡಿಯೋ ನೋಡಿ ‘ಲವ್ಲಿ ಕಪಲ್’ ಎಂದು ಕಾಮೆಂಟ್ ಮಾಡುತ್ತಿದ್ದು, ‘ಸಂಚಾರಮೇ’ ಹಾಡು ಕೂಡ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ವಿಜಯ್ ಮತ್ತು ರಶ್ಮಿಕಾ ಅವರ ಈ ಕ್ಯೂಟ್ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular