HomeIndiaWatch: ಮೊಟ್ಟೆಯಿಡಲು ಒಡಿಶಾ ಕಡಲ ತೀರಕ್ಕೆ ಆಗಮಿಸಿದ ಆಲಿವ್​ ರಿಡ್ಲಿ ಆಮೆಗಳು

Watch: ಮೊಟ್ಟೆಯಿಡಲು ಒಡಿಶಾ ಕಡಲ ತೀರಕ್ಕೆ ಆಗಮಿಸಿದ ಆಲಿವ್​ ರಿಡ್ಲಿ ಆಮೆಗಳು

ಆಲಿವ್ ರಿಡ್ಲಿ ಜಾತಿಯ ಆಮೆಗಳು ಸಾಮೂಹಿಕವಾಗಿ ಮೊಟ್ಟೆಯಿಡಲು ಒಡಿಶಾದ ರುಶಿಕುಲ್ಯ ಕಡಲತೀರದಲ್ಲಿ ಬಂದು ಸೇರುವ ಸಮಯವಿದು. ಈ ಆಮೆಗಳ ವೈಶಿಷ್ಟ್ಯವೇನೆಂದರೆ ಇವು ಹಗಲು ಹೊತ್ತಿನಲ್ಲಿ ಕಡಲತೀರದಲ್ಲಿ ಮೊಟ್ಟೆಗಳನ್ನು ಇಡುತ್ತವೆ.

ಈ ಜಾತಿಯ ನೂರಾರು ಆಮೆಗಳು ಸಮುದ್ರದ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಅವುಗಳನ್ನು ಮರಳಿನಲ್ಲಿ ಹೂತುಹಾಕುವ ಪ್ರಕ್ರಿಯೆ ನಡೆಸುತ್ತವೆ. ನಂತರ ಅಲ್ಲಿಯೇ ಮರಿಗಳು ಹೊರಬರುತ್ತವೆ. ಪ್ರತಿ ಗೂಡಿನಿಂದ ಸರಾಸರಿ 80 ರಿಂದ 100 ಆಮೆಗಳು ಹೊರಬರುತ್ತವೆ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ್​ ನಂದಾ ಅವರು ಆಲಿವ್ ರಿಡ್ಲಿ ಆಮೆಗಳ ವಿಡಿಯೋ ಶೇರ್​ ಮಾಡಿದ್ದಾರೆ. ಒಡಿಶಾ ತನ್ನ ವಾರ್ಷಿಕ ಅತಿಥಿಯನ್ನು ಸ್ವಾಗತಿಸುತ್ತಿದೆ. ಆಲಿವ್ ರಿಡ್ಲಿ ಆಮೆಗಳ ಸಾಮೂಹಿಕ ಗೂಡುಕಟ್ಟುವಿಕೆ ಆರಂಭವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಕುತೂಹಲಭರಿತವಾಗಿರುವ ವಿಡಿಯೋ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular