ಕಲಬುರಗಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಸಿಎಂ ಹಾಸ್ಟೆಲ್ ವಾರ್ಡನ್ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ.
ವಿದ್ಯಾರ್ಥಿನಿಗೆ ರಾತ್ರಿ ವೇಳೆ ಕರೆ ಮಾಡಿ ಬೆತ್ತಲೆ ಫೋಟೋಗಳನ್ನು ಕಳುಹಿಸುವಂತೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಕೇಳಿ ಬಂದಿದೆ. ಅಫಜಲಪುರ ಬಿಸಿಎಂ ಹಾಸ್ಟೆಲ್ ವೊಂದರ ವಾರ್ಡನ್ ಹಣಮಂತ ಬಿರಾದಾರ ವಿರುದ್ಧ ಕಲಬುರ್ಗಿಯ ಎಂ.ಬಿ. ನಗರ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್ ಮೂಲಕ ಕರೆ ಮಾಡಿದ್ದ ಆರೋಪಿ ಸ್ನಾನ ಮಾಡುವಾಗ ಫೋಟೋ ಕಳುಹಿಸು, ಕಾರ್ ನಲ್ಲಿ ಬೀದರ್ ಮತ್ತು ಮಂತ್ರಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಮೆಸೇಜ್ ಮಾಡಿದ್ದಾನೆ. ಮತ್ತೊಂದು ಘಟನೆಯಲ್ಲಿ ತನ್ನ ಪುತ್ರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಜರುಗಿಸಿದ್ದಾರೆ.

