HomeInternationalWAR BREAKING: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ತಿರುಗಿ ಬಿದ್ದ ಪರಮಾಪ್ತ; ರೋಸ್ತೋವ್ ನಗರ ವ್ಯಾಗ್ನರ್...

WAR BREAKING: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ತಿರುಗಿ ಬಿದ್ದ ಪರಮಾಪ್ತ; ರೋಸ್ತೋವ್ ನಗರ ವ್ಯಾಗ್ನರ್ ಪಡೆ ವಶಕ್ಕೆ; 3 ಹೆಲಿಕಾಪ್ಟರ್ ಪತನ; ಮಾಸ್ಕೋದತ್ತ ದಾಳಿ

ಮಾಸ್ಕೋ: ರಷ್ಯಾದಲ್ಲಿ ಭಯಾನಕ ವಾತಾವರಣ ನಿರ್ಮಾಣವಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಪ್ತ ವ್ಯಾಗ್ನರ್ ಪಡೆ ಮುಖ್ಯಸ್ಥ ಯವ್ಗೆನಿ, ಪುಟಿನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ವ್ಯಾಗ್ನರ್ ಪಡೆ ಪುಟಿನ್ ವಿರುದ್ಧ ಸಿಡಿದೆದ್ದು ಸಮರ ಸಾರಿದೆ.

ರಷ್ಯಾದ ರೊಸ್ತೊವ್ ನಗರನ್ನು ವಶಕ್ಕೆ ಪಡೆದಿರುವ ವ್ಯಾಗ್ನರ್ ಪಡೆ, ರಷ್ಯಾದ 3 ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಿದೆ. ರಾಜಧಾನಿ ಮಾಸ್ಕೋ ನಗರದತ್ತ ಮುನ್ನುಗ್ಗುತ್ತೇವೆ ಎಂದು ವ್ಯಾಗ್ನರ್ ಗ್ರೂಪ್ ಘೋಷಣೆ ಮಾಡಿದೆ.

ಈ ಮಧ್ಯೆ ತನ್ನ ಪರಮಾಪ್ತನೇ ತನ್ನ ವಿರುದ್ಧ ಸಿಡಿದೆದ್ದಿದ್ದು, ನಮ್ಮವರೇ ನಮ್ಮ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ರಷ್ಯಾ ದೇಶ ಸಧ್ಯ ಸಂಘರ್ಷದ ದಾರಿಯಲ್ಲಿದೆ. ನಮ್ಮವರ ರಕ್ಷಣೆಗಾಗಿ ಹೋರಾಟ ಅನಿವಾರ್ಯ ಎಂದು ದೇಶದ ಸೈನಿಕ ಪಡೆಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular