HomeKarnatakaBIG NEWS: ವಕ್ಫ್ ಬೋರ್ಡ್ ಆಧುನಿಕ ಭಸ್ಮಾಸುರ: ಎಲ್ಲರ ಜಾಗದ ಮೇಲೆ ಕೈ ಇಡುತ್ತಿದ್ದಾರೆ: ಸಿ.ಟಿ....

BIG NEWS: ವಕ್ಫ್ ಬೋರ್ಡ್ ಆಧುನಿಕ ಭಸ್ಮಾಸುರ: ಎಲ್ಲರ ಜಾಗದ ಮೇಲೆ ಕೈ ಇಡುತ್ತಿದ್ದಾರೆ: ಸಿ.ಟಿ. ರವಿ ವಾಗ್ದಾಳಿ

ಚಿಕ್ಕಮಗಳೂರು: ವಕ್ಫ್ ಬೋರ್ಡ್ ನಿಂದ ರೈತರ ಭೂಮಿ ಕಬಳಿಕೆ ವಿಚಾರವಾಗಿ ಕಿಡಿಕಾರಿರುವ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ವಕ್ಫ್ ಭೋರ್ಡ್ ಆಧುನಿಕ ಭಸ್ಮಾಸುರ ಇದ್ದಂತೆ. ಎಲ್ಲರ ಭೂಮಿ ಮೇಲೆ ಕೈ ಇಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಧರ್ಮ ಸಭೆಯಲ್ಲಿ ಮಾತನಾಡಿದ ಸಿ.ಟಿ,ರವಿ, ಹಿಂದೆ ಭಸ್ಮಾಸುರ ಇದ್ದ. ಆತ ಎಲ್ಲರ ತಲೆ ಮೇಲೆ ಕೈ ಇಟ್ಟು ನಾಶ ಮಾಡುತ್ತಿದ್ದ. ರಾಕ್ಷಸರು ದೇವರನ್ನೇ ನಾಶ ಮಾಡಲು ಮುಮ್ದಾಗಿದ್ದರು. ಈಗ ಕಾಂಗ್ರೆಸ್ ಸರ್ಕಾರ ವೋಟಿಗಾಗಿ ವಕ್ಫ್ ಬೋರ್ಡ್ ಎಂಬ ಭಸ್ಮಾಸುರನಿಗೆ ವರ ನೀಡಿದೆ. ಹಾಗಾಗಿ ವಕ್ಫ್ ಬೋರ್ಡ್ ಆಧುನಿಕ ಭಸ್ಮಾರನಂತೆ ಎಲ್ಲರ ಆಸ್ತಿಗಳ ಮೇಲೆ ಕೈ ಇಡುತ್ತಿದೆ ಎಂದು ಗುಡುಗಿದರು.

ರೈರ ಜಮೀನು, ಮಠ-ಮಂದಿರಗಳ ಭೂಮಿ ಸೇರಿ ಎಲ್ಲವೂ ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿದೆ. ಹಿಂದೆ ಭಸ್ಮಾಸುರನ ನಾಶಕ್ಕಾಗಿ ದೇವರು ಮೋಹಿನಿ ಅವತಾರ ತಾಳಿ ಬಂದಿದ್ದರು. ಈಗ ಆಧುನಿಕ ಭಸ್ಮಾಸುರನ ನಾಶ ಮಾಡಬೇಕಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular