HomeKarnatakaBIG NEWS: ಆರ್ಮಿ ಸೆಲೆಕ್ಷನ್ ಗಾಗಿ ಓಪನ್ ರ್ಯಾಲಿ: ಹರಿದುಬಂದ ಅಭ್ಯರ್ಥಿಗಳು; ನೂಕಾಟ ತಳ್ಳಾಟಕ್ಕೆ ಇಬ್ಬರಿಗೆ...

BIG NEWS: ಆರ್ಮಿ ಸೆಲೆಕ್ಷನ್ ಗಾಗಿ ಓಪನ್ ರ್ಯಾಲಿ: ಹರಿದುಬಂದ ಅಭ್ಯರ್ಥಿಗಳು; ನೂಕಾಟ ತಳ್ಳಾಟಕ್ಕೆ ಇಬ್ಬರಿಗೆ ಗಾಯ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಆರ್ಮಿ ನೇಮಕಾತಿಗಾಗಿ ಓಪನ್ ರ್ಯಾಲಿ ಆಯೋಜಿಸಲಾಗಿದ್ದು, ರಾಜ್ಯ ಹೊರ ರಾಜ್ಯಗಳಿಂದ ಯುವಕರ ದಂದೇ ಹರಿದು ಬಂದಿದೆ.

ಮರಾಠಾ ರೆಜಿಮೆಂಟ್ ನಲ್ಲಿ ಆರ್ಮಿ ಸೆಲೆಕ್ಷನ್ ಗಾಗಿ 30,000ಕ್ಕೂ ಹೆಚ್ಚು ಯುವಕರು ಆಗಮಿಸಿದ್ದು, ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರದಿಂದಲೂ ಯುವಕರು ಆಗಮಿಸಿದ್ದು, ಬೆಳಿಗ್ಗೆಯಿಂದಲೂ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ನಡೆದು, ಕೆಲ ಯುವಕರು ಬಿದ್ದು ಗಾಯಗೊಂಡಿದ್ದಾರೆ.

ಹುಬ್ಬಳ್ಳಿಯ ಅಲ್ಲಾಭಕ್ಷ ಯರಗಟ್ಟಿ ಹಾಗೂ ಗೊಕಾಕ್ ತಾಲೂಕಿನ ಬೆಟಗೇರಿ ಗ್ರಾಮದ ಪ್ರವೀಣ್ ಮಕಾಳೆ ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನೂಕಾಟ-ತಳ್ಳಾಟದಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲಿಸರು ಲಾಠಿ ಬೀಸಿ ಯುವಕರ ಗುಂಪನ್ನು ಚದುರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular