HomeLatest News'ಸೋಶಿಯಲ್ ಮೀಡಿಯಾ' ವ್ಯಸನದಿಂದ ಹೊರಬರಲು ಬಯಸುವಿರಾ ? ಇಲ್ಲಿದೆ ಟಿಪ್ಸ್

‘ಸೋಶಿಯಲ್ ಮೀಡಿಯಾ’ ವ್ಯಸನದಿಂದ ಹೊರಬರಲು ಬಯಸುವಿರಾ ? ಇಲ್ಲಿದೆ ಟಿಪ್ಸ್

ತಾಂತ್ರಿಕ ಜಗತ್ತಿನಲ್ಲಿ ಸೌಲಭ್ಯಗಳು ಹೆಚ್ಚಾದಂತೆ, ಸಮಸ್ಯೆಗಳೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಮುಖ್ಯವಾಗಿ ಸೋಶಿಯಲ್ ಮೀಡಿಯಾ ವ್ಯಾಪಕವಾದ ನಂತರ, ನಮ್ಮ ಸುತ್ತಮುತ್ತ ಪಾಸಿಟಿವಿಟಿಗಿಂತ ನೆಗೆಟಿವಿಟಿಯೇ ಹೆಚ್ಚಾಗಿ ಕಾಣುತ್ತಿದೆ.

ಖಾಲಿ ಸಮಯ ಸಿಕ್ಕರೆ ಸಾಕು, ನಿಮ್ಮ ಬೆರಳುಗಳು ತಾವಾಗಿಯೇ ರೀಲ್ಸ್‌ಗಳನ್ನು ಸ್ಕ್ರೋಲ್ ಮಾಡುತ್ತಿವೆಯೇ? ನಿಮ್ಮ ಕಣ್ಣುಗಳು ಸ್ಕ್ರೀನ್‌ಗೆ ಅಂಟಿಕೊಂಡಿವೆಯೇ? ಸಾಹಿತ್ಯ, ಸಂಗೀತದಂತಹ ಮೌಲ್ಯಯುತ ವಿಷಯಗಳನ್ನು ಬದಿಗೊತ್ತಿ, ಅರ್ಥವಿಲ್ಲದ ವಿಡಿಯೋಗಳನ್ನು ನೋಡುತ್ತಾ ಗಂಟೆಗಟ್ಟಲೆ ಸಮಯ ಹೇಗೆ ಕಳೆದುಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲವೇ? ಈ ಅಭ್ಯಾಸವು ನಮ್ಮ ಉತ್ಸಾಹವನ್ನು, ಮನಶಾಂತಿಯನ್ನು ಹೇಗೆ ಕಸಿದುಕೊಳ್ಳುತ್ತಿದೆ ಎಂದು ಎಂದಾದರೂ ಗಮನಿಸಿದ್ದೀರಾ?

* ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಪ್ರತಿಯೊಂದು ವಿಷಯವನ್ನೂ ತಲೆಯಲ್ಲಿ ಹಾಕಿಕೊಳ್ಳುವ ಅಗತ್ಯವಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ನಿಮಗೆ ಇಷ್ಟವಿಲ್ಲದ ವ್ಯಕ್ತಿ ಎದುರಾದಾಗ ಹೇಗೆ ನಿರ್ಲಕ್ಷಿಸುತ್ತೀರೋ, ಇಂಟರ್ನೆಟ್‌ನಲ್ಲೂ ಅದೇ ಸೂತ್ರವನ್ನು ಪಾಲಿಸಬೇಕು.

* ಅನಗತ್ಯ ಗಾಸಿಪ್‌ಗಳು, ಟ್ರೋಲಿಂಗ್ ಮತ್ತು ಸೆಲೆಬ್ರಿಟಿಗಳ ವಿಷಯಗಳಲ್ಲಿ ಅನಗತ್ಯ ವಾದಗಳಿಗೆ ಇಳಿಯುವುದರಿಂದ ನಮ್ಮ ಶಕ್ತಿಯು ವ್ಯರ್ಥವಾಗುತ್ತದೆಯೇ ಹೊರತು, ಅದರಿಂದ ಯಾವುದೇ ಪ್ರಯೋಜನವಿಲ್ಲ.

‘ನಿರ್ಲಕ್ಷ್ಯ’ (Ignore) ಮಂತ್ರವನ್ನು ಪಾಲಿಸುವುದು ಹೇಗೆ?

  • ನಿಮಗೆ ಇಷ್ಟವಿಲ್ಲದ, ಮನಸ್ಸನ್ನು ಹಾಳುಮಾಡುವ ನೆಗೆಟಿವ್ ಕಂಟೆಂಟ್ ಕಂಡರೆ ತಕ್ಷಣವೇ ಸ್ಕಿಪ್ ಮಾಡಿ. ವಾದಗಳಿಗೆ ಇಳಿಯುವುದರಿಂದ ನೀವು ಸಮಯವನ್ನು ಕಳೆದುಕೊಳ್ಳುವುದಲ್ಲದೆ, ಅನಗತ್ಯ ಕೋಪಕ್ಕೆ ಗುರಿಯಾಗುತ್ತೀರಿ.
  • ಸೋಶಿಯಲ್ ಮೀಡಿಯಾದಲ್ಲಿ ಬರುವ ಮಾಹಿತಿಯೆಲ್ಲವೂ ನಿಜವಾಗಿರಬೇಕೆಂದಿಲ್ಲ. ಯಾವುದಾದರೂ ವಿಷಯದ ಬಗ್ಗೆ ತಿಳಿಯಬೇಕೆಂದರೆ, ಪತ್ರಿಕೆಗಳು ಅಥವಾ ಪುಸ್ತಕಗಳನ್ನು ಆಶ್ರಯಿಸಿ. ಇದರಿಂದ ವಿಷಯಗಳ ಬಗ್ಗೆ ನಿಮಗೆ ಸ್ವಂತ ಅಭಿಪ್ರಾಯ ಮೂಡುತ್ತದೆ. ಇತರರ ಅಭಿಪ್ರಾಯಗಳು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.
  • ನಿಮ್ಮ ಮೆದುಳು ಆರೋಗ್ಯವಾಗಿರಬೇಕೆಂದರೆ, ನಿಮ್ಮ ಸಮಯವನ್ನು ಮತ್ತು ಮಾನಸಿಕ ಶಕ್ತಿಯನ್ನು ಅರ್ಥಪೂರ್ಣ ಕೆಲಸಗಳಿಗೇ ಖರ್ಚು ಮಾಡಿ.

ಮಾಹಿತಿಯನ್ನು ತಿಳಿಯುವುದು ಮುಖ್ಯ, ಆದರೆ ಯಾವುದನ್ನು ತಿಳಿಯಬೇಕು, ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ನಿಮ್ಮದು. ಮನಶಾಂತಿ ಮತ್ತು ಮೆದುಳಿನ ಆರೋಗ್ಯ ಚೆನ್ನಾಗಿರಬೇಕೆಂದರೆ, ನೆಗೆಟಿವಿಟಿಯನ್ನು ನಿರ್ಲಕ್ಷಿಸಲು ಕಲಿಯಿರಿ. ನಿಮ್ಮ ಸೋಶಿಯಲ್ ಮೀಡಿಯಾ ಫೀಡ್ ಅನ್ನು ನಿಮ್ಮ ನಿಯಂತ್ರಣಕ್ಕೆ ತಂದುಕೊಳ್ಳಿ. ಯಾರ ಅಭಿಪ್ರಾಯವೂ ನಿಮ್ಮ ಮೇಲೆ ಪ್ರಭಾವ ಬೀರದಂತೆ, ಸ್ವಂತ ಆಲೋಚನೆಗಳೊಂದಿಗೆ ಬದುಕಲು ಪ್ರಾರಂಭಿಸಿ.

.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular