HomeKarnatakaಸಿದ್ದಲಿಂಗ ಶ್ರೀ, ಸುಧಾಮೂರ್ತಿ, ಸುಧಾಕರ್, ನಟ ಗಣೇಶ್ ಮತದಾನ: ಪುತ್ರನ ಮದುವೆ ನಡುವೆಯೂ ಮತ ಹಾಕಿದ...

ಸಿದ್ದಲಿಂಗ ಶ್ರೀ, ಸುಧಾಮೂರ್ತಿ, ಸುಧಾಕರ್, ನಟ ಗಣೇಶ್ ಮತದಾನ: ಪುತ್ರನ ಮದುವೆ ನಡುವೆಯೂ ಮತ ಹಾಕಿದ ಗೋಪಾಲಯ್ಯ ದಂಪತಿ

ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ  ಲೋಕಸಭೆ ಚುನಾವಣೆಗೆ ಮತದಾನ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ, ತುಮಕೂರಿನಲ್ಲಿ ಸಿದ್ದಲಿಂಗ ಶ್ರೀಗಳು ಮತದಾನ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ದಂಪತಿ ಮತದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುಧಾ ಮೂರ್ತಿ, ಎಲ್ಲರೂ ಮತದಾನ ಮಾಡುವಂತೆ ಕರೆ ನೀಡಿದ್ದಾರೆ. ನಾರಾಯಣಮೂರ್ತಿ ಅವರಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಡಿಸ್ಚಾರ್ಜ್ ಮಾಡಿಸಿಕೊಂಡು ಬಂದು ಮತದಾನ ಮಾಡಲಾಗಿದೆ. ಮತದಾರರು ಹಿಂದೆ ನಿಂತು ಮಾತನಾಡದೆ ಮುಂದೆ ಬಂದು ಮತ ಹಾಕಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದ್ದಾರೆ.

ಶಾಸಕ ಕೆ. ಗೋಪಾಲಯ್ಯ ದಂಪತಿ ಮತ ಚಲಾಯಿಸಿದ್ದಾರೆ. ಪುತ್ರನ ಮದುವೆ ಸಂಭ್ರಮದ ನಡುವೆಯೂ ಕೆ. ಗೋಪಾಲಯ್ಯ ದಂಪತಿ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡಿ ಮದುವೆ ಮನೆಗೆ ತೆರಳಿದ್ದಾರೆ. ಮದುವೆ ಮುಗಿದ ನಂತರ ಮದುಮಕ್ಕಳು ಮತ ಚಲಾಯಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ರಾಜರಾಜೇಶ್ವರಿ ನಗರ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ. ಸುಧಾಕರ್, ತುಮಕೂರು ಕ್ಷೇತ್ರದ ಅಭ್ಯರ್ಥಿ ವಿ. ಸೋಮಣ್ಣ ಕೂಡ ಮತ ಚಲಾಯಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular