HomeKarnatakaಕುಖ್ಯಾತ ರೌಡಿ ವಿಶಾಲ್ ಮೇಸ್ತ್ರಿ ಗೂಂಡಾ ಕಾಯ್ದೆಯಡಿ ಅರೆಸ್ಟ್

ಕುಖ್ಯಾತ ರೌಡಿ ವಿಶಾಲ್ ಮೇಸ್ತ್ರಿ ಗೂಂಡಾ ಕಾಯ್ದೆಯಡಿ ಅರೆಸ್ಟ್

ಬೆಳಗಾವಿ: ಕುಖ್ಯಾತ ರೌಡಿ ವಿಶಾಲ್ ಮೇಸ್ತ್ರಿ (29) ನನ್ನು ಬೆಳಗಾವಿ ಜಿಲ್ಲೆಯ ಗೋಕಾಕ ಶಹರ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಆದಿಜಾಂಬವ ನಗರದ ನಿವಾಸಿಯಾದ ವಿಶಾಲ್ ಮೇಸ್ತ್ರಿ ವಿರುದ್ಧ ಗೋಕಾಕ್ ಶಹರ ಠಾಣೆಯಲ್ಲಿ 01-ಕೊಲೆ ಪ್ರಕರಣ, 03-ಕೊಲೆಗೆ ಯತ್ನ, 01-ಆಯುಧ ಕಾಯ್ದೆ, 01-ಸರ್ಕಾರಿ ನೌಕರರ ಮೇಲೆ ಹಲ್ಲೆ ಮತ್ತು 03-ಇತರೆ ಪ್ರಕರಣಗಳು ಹಾಗೂ ಗೋಕಾಕ ಗ್ರಾಮೀಣ ಠಾಣೆಯಲ್ಲಿ 01-ಆಯುಧ ಕಾಯ್ದೆ ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಈತನ ವಿರುದ್ಧ 2020 ರಲ್ಲಿಯೇ ರೌಡಿಶೀಟ್ ತೆರೆಯಲಾಗಿತ್ತು.

ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ರಾಮರಾಜನ್ ಹಾಗೂ ಗೋಕಾಕ್ ಉಪವಿಭಾಗದ ಡಿವೈಎಸ್ಪಿ ರಾಮಗೊಂಡ ಬಿ ಬಸರಗಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ರೌಡೊ ವಿಶಾಲ್ ಮೇಸ್ತ್ರಿಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಯ ವಿರುದ್ಧ ಸ್ಥಾನ ಭದ್ರತೆಯ ಆದೇಶ ಹೊರಡಿಸಿ, ಅತ್ಯಂತ ಯಶಸ್ವಿಯಾಗಿ ಬಂಧಿಸಲಾಗಿದೆ. ಪ್ರಸ್ತುತ ಆರೋಪಿಯನ್ನು ಒಂದು ವರ್ಷದ ಅವಧಿಯವರೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಅಬ್ದುಲ್ ರಹಿಮಾನ್ ಹತ್ಯೆ ಕೇಸ್: ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ಗೆ ನೊಟೀಸ್

ಮಂಗಳೂರು: ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ಗೆ ಪೊಲೀಸರು ನೊಟೀಸ್ ನೀಡಿರುವ ಘಟನೆ ನಡೆದುದೀ.

ಅಬ್ದುಲ್ ರಹಿಮಾನ್ ಹತ್ಯೆ ವೇಳೆ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ನಿರಂತರ ಫೋನ್ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯ ಸಹಾಯಕ ತನಿಖಾಧಿಕಾರಿ ಪಿ.ಕಲೈಮಾರ್​ ಅವರು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ ವಿಚಾರಣೆ ನಡೆಯಲಿದೆ.

ನಾಳೆ ಸೆ,26ರಂದು ಕಲ್ಲಡ್ಕದ ಮನೆಯಲ್ಲೇ ಪ್ರಭಾಕರ್​ ಭಟ್ ಅವರ ವಿಚಾರಣೆ ನಡೆಯಲಿದೆ. ತನಿಖಾಧಿಕಾರಿ ಪಿ.ಕಲೈಮಾರ್ ಅವರೇ ತನಿಖೆ ನಡೆಸಿವ ಸಾಧ್ಯತೆ ಇದೆ.

ಈ ನಡುವೆ ಕಲ್ಲಡ್ಕ ಪ್ರಭಾಕರ್ ಭಟ್ ಅವರುಗೆ ನೋಟಿಸ್ ನೀಡಿರುವ ಪೊಲೀಸರ ಕ್ರಮಕ್ಕೆ ಆರ್.ಎಸ್.ಎಸ್ ಮುಖಂಡ ಶರಣ್ ಪಂಪ್ ವೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಚಾರಣೆ ನೆಪದಲ್ಲಿ ಪ್ರಭಾಕರ್ ಭಟ್ ಅವರನ್ನು ಬಂಧಿಸುವ ಯತ್ನ ನಡೆದಿದೆ ಎಂದಿದ್ದಾರೆ.

ಚಾರ್ಜ್ ಶೀಟ್ ಆದ ಮೇಲೆ ಮತ್ತೆ ವಿಚಾರಣೆಗೆ ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡುವ ಅಗತ್ಯವೇನಿದೆ? ವಿಚಾರಣೆ ಎಂದು ಕರೆದಿ ಅವರನ್ನು ಬಂಧಿಸಲು ಈ ನೆಪ ಮಾಡಲಾಗುತ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಕೊಟ್ಟ ನೋಟಿಸ್ ನ್ನು ತನಿಖಾಧಿಕಾರಿಗಳು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಹಿಂದೂ ಕಾರ್ಯಕರ್ಯರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಮೇ ತಿಂಗಳಲ್ಲಿ ಅಬ್ದುಲ್ ರಹಿಮಾನ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ‘ಕೋಕಾ’ (KCOCA) ಕಾಯ್ದೆ ಹಾಗೂ ಭರತ್ ಕುಮ್ಡೇಲು ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ‘ಗೂಂಡಾ ಕಾಯ್ದೆ’ಯನ್ನು ಅಳವಡಿಸಲಾಗಿದೆ.

ಅಂದು ಅಬ್ದುಲ್ ರಹಿಮಾನ್ ಹತ್ಯೆ ವೇಳೆ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಅಕರ್ ಭಟ್, ಹತ್ಯೆಯ ಆರೋಪಿಗಳ ಜೊತೆ ಫೋನ್ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ವಿಚಾರಣೆಗೆ ನೋಟಿಸ್ ಜಾರಿ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular