HomeKarnatakaಸಮಾರಂಭದಲ್ಲಿ ಊಟಕ್ಕೆ ಕುಳಿತ ವೃದ್ಧರೆದುರು ಸಾಲುಸಾಲು ಸಿಹಿ ತಿಂಡಿ; ವಿಡಿಯೋ ಹಂಚಿಕೊಂಡು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು...

ಸಮಾರಂಭದಲ್ಲಿ ಊಟಕ್ಕೆ ಕುಳಿತ ವೃದ್ಧರೆದುರು ಸಾಲುಸಾಲು ಸಿಹಿ ತಿಂಡಿ; ವಿಡಿಯೋ ಹಂಚಿಕೊಂಡು ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು !

ಸಮಾರಂಭವೊಂದರಲ್ಲಿ ಊಟಕ್ಕೆ ಕುಳಿತ ವೃದ್ಧರ ಪಾಡು ನೋಡಿ….ಬಾಳೆಯ ತುಂಬೆಲ್ಲ ಬರಿ ಸಿಹಿ ತಿನಿಸುಗಳದ್ದೇ ರಾಶಿ… ಬಡಿಸಲು ಪಾತ್ರೆ ಹಿಡಿದು ಬಂದವರೆಲ್ಲ ಬರೀ ಸ್ವೀಟನ್ನೇ ಬಡಿಸಿ ಹೋಗುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಸಮಾರಂಭದಲ್ಲಿ ಊಟಕ್ಕೆಂದು ಹಿರಿಯರು ಸಾಲಾಗಿ ಕುಳಿತಿದ್ದಾರೆ. ಊಟ ಬಡಿಸಲು ಬಂದ ಯುವ ತಂಡ ಒಬ್ಬರಾದ ಮೇಲೊಬ್ಬರಂತೆ ಒಂದೊಂದೇ ಸ್ವೀಟುಗಳನ್ನು ಬಡಿಸುತ್ತಾ ಸಾಗಿದ್ದಾರೆ. ಬಾಳೆ ತುಂಬೆಲ್ಲ ಬರೀ ಸ್ವೀಟುಗಳದ್ದೇ ಕಾರುಬಾರು…. ಬರಿ ವಿವಿಧ ಬಗೆಯ ಸಿಹಿ ತಿಂಡಿಯನ್ನೇ ಬಡಿಸುತ್ತಿರುವುದನ್ನು ಕಂಡು ಊಟಕ್ಕೆ ಕುಳಿತ ವೃದ್ಧರ ಸಹನೆಯೂ ಮೀರುತ್ತಿದೆ. ಬಾಳೆಲೆ ತುಂಬ ಬರೀ ಸ್ವೀಟೇ ಆದರೆ ಶುಗರ್ ಇದ್ದವರ ಕಥೆ ಏನು? ಎಂದು ವಿಡಿಯೋ ನೋಡಿದರು ಕೇಳುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಪಿ, ಶುಗರ್ ನಂತ ಕಾಯಿಲಿಯಿದ್ದವರು ಪಾಪ ಏನು ಮಾಡಬೇಕು? ಅನ್ನ ಸಾಂಬಾರ್ ಆದ್ರೂ ಬಡಿಸಬಾರದೇ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular