HomeLatest News"ಫೀಮೇಲ್ ಫ್ರೆಂಡ್ಸ್ ನೋ ಎಂಟ್ರಿ, 6 ಅಡಿ ಎತ್ತರ ಬೇಕು": ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಯುವತಿಯ...

“ಫೀಮೇಲ್ ಫ್ರೆಂಡ್ಸ್ ನೋ ಎಂಟ್ರಿ, 6 ಅಡಿ ಎತ್ತರ ಬೇಕು”: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ ಯುವತಿಯ ‘ಪರ್ಫೆಕ್ಟ್ ಹಸ್ಬೆಂಡ್ ಲಿಸ್ಟ್’

ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ಸಂಗಾತಿಯ ಆಯ್ಕೆಯ ಕುರಿತಾದ ಚರ್ಚೆಗಳು ಹೊಸದೇನಲ್ಲ. ಆದರೆ, ಇತ್ತೀಚೆಗೆ @Crushtology_ ಎಂಬ ಹ್ಯಾಂಡಲ್ ಹೊಂದಿರುವ ವೇದಿಕಾ ಹೆಸರಿನ ಯುವತಿಯೊಬ್ಬಳು ಹಂಚಿಕೊಂಡಿರುವ ಪರ್ಫೆಕ್ಟ್ ಹಸ್ಬೆಂಡ್ ಚೆಕ್‌ಲಿಸ್ಟ್ ಇಡೀ ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ತನ್ನ ಮದುವೆಗೆ ಆಕೆ ಇಟ್ಟಿರುವ ಕಠಿಣ ಮತ್ತು ಅವಾಸ್ತವಿಕ ನಿಬಂಧನೆಗಳನ್ನು ಕಂಡು ನೆಟ್ಟಿಗರು ಆಕ್ರೋಶ ಮತ್ತು ಹಾಸ್ಯದ ಮಿಶ್ರಣದೊಂದಿಗೆ ತರಾಟೆಗೆ ತಗೆದುಕೊಂಡಿದ್ದಾರೆ.
ಇಷ್ಟೆಲ್ಲಾ ಗುಣಗಳಿರುವ ಹುಡುಗ ಎಲ್ಲಿ ಸಿಗುತ್ತಾನೆ? ಎಂದು ಆಕೆ ಕೇಳಿದ ಪ್ರಶ್ನೆಗೆ ಇಂಟರ್ನೆಟ್ ಜಗತ್ತಿನಲ್ಲಿ ಭಾರಿ ಪರ-ವಿರೋಧದ ಚರ್ಚೆ ಆರಂಭವಾಗಿದೆ.

ಯುವತಿಯ ಪರ್ಫೆಕ್ಟ್ ಹಸ್ಬೆಂಡ್ ಲಿಸ್ಟ್‌ನಲ್ಲಿ ಏನೇನಿದೆ?

ಆರ್ಥಿಕತೆ ಮತ್ತು ಹೈಟು: ಹುಡುಗನಿಗೆ ಕನಿಷ್ಠ 6 ಅಡಿ ಎತ್ತರ ಇರಬೇಕು, ನೋಡಲು ನೈಸರ್ಗಿಕವಾಗಿ ಹ್ಯಾಂಡ್ಸಮ್ ಆಗಿರಬೇಕು ಮತ್ತು ತಿಂಗಳಿಗೆ ಕನಿಷ್ಠ ₹2 ಲಕ್ಷ ಗಳಿಸುತ್ತಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಶಿಯಲ್ ಮೀಡಿಯಾ ಮತ್ತು ಫ್ರೆಂಡ್ಸ್ ನೋ ಎಂಟ್ರಿ: ಆತ ಯಾವುದೇ ಸೋಶಿಯಲ್ ಮೀಡಿಯಾ ಬಳಸಬಾರದು ಹಾಗೂ ಆತನಿಗೆ ಯಾವುದೇ ಹೆಣ್ಣು ಗೆಳತಿಯರು (Female Friends) ಇರಲೇಬಾರದು.

ಲೊಕೇಶನ್ ಟ್ರ್ಯಾಕಿಂಗ್ 24×7: ಎಲ್ಲೇ ಹೋದರೂ ಹೆಂಡತಿಯ ಅನುಮತಿ ಕೇಳಿಯೇ ಹೋಗಬೇಕು ಮತ್ತು ದಿನದ 24 ಗಂಟೆಯೂ ತನ್ನ ಲೈವ್ ಲೊಕೇಶನ್ (Live Location) ಅನ್ನು ಹೆಂಡತಿಯೊಂದಿಗೆ ಶೇರ್ ಮಾಡಿಕೊಳ್ಳಬೇಕು

ಮನೆಗೆಲಸ ಮತ್ತು ಪ್ರವಾಸ: ಆತನಿಗೆ ಅಡುಗೆ ಮಾಡಲು (Cooking) ಗೊತ್ತಿರಬೇಕು, ಮಹಿಳಾ ದ್ವೇಷಿಯಾಗಿರಬಾರದು (Non-misogynist) ಮತ್ತು ಹೆಂಡತಿಯನ್ನು ಆಗಾಗ ವಿದೇಶಿ ಪ್ರವಾಸಗಳಿಗೆ (Foreign Trips) ಕರೆದುಕೊಂಡು ಹೋಗಬೇಕು.

ಹುಡುಗ ವರ್ಜಿನ್ (Virgin) ಆಗಿರಬೇಕು.

ನೆಟ್ಟಿಗರ ಪ್ರತಿಕ್ರಿಯೆಗಳು

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಬಳಕೆದಾರರು ಕಮೆಂಟ್ ಬಾಕ್ಸ್‌ನಲ್ಲಿ ವೇದಿಕಾಗೆ ಕ್ಲಾಸ್ ತಗೆದುಕೊಂಡಿದ್ದಾರೆ. ಅದರಲ್ಲಿ ಕೆಲವು ಪ್ರಮುಖ ಮತ್ತು ವೈರಲ್ ಆದ ಕಮೆಂಟ್‌ಗಳು ಇಲ್ಲಿವೆ:

ಅನ್-ಪೇಯ್ಡ್ ಗುಲಾಮಗಿರಿ: ಒಬ್ಬ ಬಳಕೆದಾರರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ನಿಮಗೆ ಗಂಡ ಬೇಕಾಗಿಲ್ಲ. ನಿಮಗೊಬ್ಬ ವರ್ಜಿನ್ ಎಟಿಎಂ, 6 ಅಡಿ ಎತ್ತರದ ಬಾಡಿಗಾರ್ಡ್, ಪರ್ಸನಲ್ ಶೆಫ್, ಜಿಪಿಎಸ್ ಟ್ರ್ಯಾಕ್ ಇರುವ ನೌಕರ ಮತ್ತು ಫಾರಿನ್ ಟ್ರಿಪ್ ಸ್ಪಾನ್ಸರ್ ಬೇಕಾಗಿದ್ದಾರೆ. ಸ್ವಾಭಿಮಾನವಿರುವ ಯಾವ ಪುರುಷನೂ ಮದುವೆ ಹೆಸರಿನಲ್ಲಿ ಇಂತಹ ಗುಲಾಮಗಿರಿಗೆ ಒಪ್ಪುವುದಿಲ್ಲ. ಇದು ಮದುವೆಯಲ್ಲ, ಒಬ್ಬ ವ್ಯಕ್ತಿಯನ್ನು ಹೈಜಾಕ್ ಮಾಡಿ ಇಟ್ಟುಕೊಳ್ಳುವ ಜಿಪಿಎಸ್ ಜಾಬ್ ಪ್ರೊಫೈಲ್ ಎಂದು ಕಿಡಿಕಾರಿದ್ದಾರೆ.

ನಿಮ್ಮ ಯೋಗ್ಯತೆ ಏನು?: ಮತ್ತೊಬ್ಬ ನೆಟ್ಟಿಗರು, ಇಷ್ಟೆಲ್ಲಾ ಡಿಮ್ಯಾಂಡ್ ಮಾಡುವ ಮುನ್ನ ನಿಮ್ಮ ಅರ್ಹತೆ ಮತ್ತು ಯೋಗ್ಯತೆ ಏನೆಂದು ತೋರಿಸಿ. ಇಷ್ಟೆಲ್ಲಾ ಇರುವ ಹುಡುಗ ನಿಮ್ಮನ್ನು ಯಾಕೆ ಮದುವೆಯಾಗಬೇಕು? ಹೆಂಡತಿಯ ಮುಖವಾಡದ ಹಿಂದೆ ಅಡಗಿರುವ ರಕ್ತ ಹೀರುವ ಜಿಗಣೆಯಂತೆ ನಿಮ್ಮ ಆಸೆ ಕಾಣುತ್ತಿದೆ, ಪುರುಷರೇ ಎಚ್ಚರ ಎಂದು ಎಚ್ಚರಿಸಿದ್ದಾರೆ.

ರಿಯಲ್ ಲೈಫ್ ಪೋಪಟ್‌ಲಾಲ್: ಇನ್ನು ಕೆಲವರು ಪ್ರಸಿದ್ಧ ತಾರಕ್ ಮೆಹ್ತಾ ಕಾ ಉಲ್ಟಾ ಧಾರಾವಾಹಿಯ ಪಾತ್ರಕ್ಕೆ ಹೋಲಿಸಿ, ವೇದಿಕಾ ನಿಜ ಜೀವನದ ಪೋಪಟ್‌ಲಾಲ್ ಇದ್ದಂತೆ. ಆತನು ಹೀಗೆಯೇ ಪರ್ಫೆಕ್ಟ್ ಹುಡುಗಿ ಬೇಕೆಂದು 26 ಹುಡುಗಿಯರನ್ನು ರಿಜೆಕ್ಟ್ ಮಾಡಿ ಇಂದಿಗೂ ಒಂಟಿಯಾಗಿದ್ದಾನೆ, ಇವರ ಕಥೆಯೂ ಅಷ್ಟೇ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕಸ್ಟಮ್ ಮೇಡ್ AI ಆರ್ಡರ್ ಮಾಡಿ: ಇನ್ನು ಕೆಲವು ನೆಟ್ಟಿಗರು ಕಮೆಂಟ್ ಮಾಡಿ, ಇಷ್ಟೊಂದು ಉದ್ದದ ಚೆಕ್‌ಲಿಸ್ಟ್ ಇಟ್ಟುಕೊಂಡರೆ ಗಂಡ ಸಿಗಲ್ಲ, ನೀವು ನೇರವಾಗಿ ಕಸ್ಟಮ್ ಮೇಡ್ AI ರೋಬೋಟ್ ಆರ್ಡರ್ ಮಾಡುವುದು ಬೆಸ್ಟ್ ಎಂದು ಟ್ರೋಲ್ ಮಾಡಿದ್ದಾರೆ.

ಒಟ್ಟಾರೆಯಾಗಿ, ಸಂಬಂಧಗಳಲ್ಲಿ ಪರಸ್ಪರ ಗೌರವ ಮತ್ತು ಸಮಾನತೆ ಇರಬೇಕೇ ಹೊರತು, ಇಂತಹ ಏಕಪಕ್ಷೀಯ ಮತ್ತು ಅವಾಸ್ತವಿಕ ನಿರೀಕ್ಷೆಗಳು ವೈವಾಹಿಕ ಜೀವನವನ್ನು ಕೇವಲ ಒಂದು ಬಿಸಿನೆಸ್ ಒಪ್ಪಂದದಂತೆ ಬಿಂಬಿಸುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular