HomeEntertainmentವಿನಯ್, ನಿಮ್ಮ ತಾತನ ಹೆಸರು ಉಳಿಸಪ್ಪ… ಒಳ್ಳೊಳ್ಳೆಯ ಸಿನಿಮಾ ಮಾಡು” ; ಮಳವಳ್ಳಿ ಮಾದೇಸ್ವಾಮಿ

ವಿನಯ್, ನಿಮ್ಮ ತಾತನ ಹೆಸರು ಉಳಿಸಪ್ಪ… ಒಳ್ಳೊಳ್ಳೆಯ ಸಿನಿಮಾ ಮಾಡು” ; ಮಳವಳ್ಳಿ ಮಾದೇಸ್ವಾಮಿ

ಬೆಂಗಳೂರು: ನಟ ವಿನಯ್ ರಾಜ್ ಕುಮಾರ್ ಅವರ ಮುಂದಿನ ಸಿನಿಮಾಗಳಿಗೆ ಶುಭ ಹಾರೈಸಿರುವ ಮಳವಳ್ಳಿ ಮಾದೇಸ್ವಾಮಿ, ವಿನಯ್ ಅವರ ತಾತನ ಹೆಸರನ್ನು ಉಳಿಸುವಂತಹ ಉತ್ತಮ ಸಿನಿಮಾಗಳನ್ನು ಮಾಡಬೇಕು ಎಂದು ಆಶೀರ್ವಾದ ಮಾಡಿದ್ದಾರೆ.

ಸಿನಿಮಾವೊಂದರ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿ ಮಾತನಾಡಿದ ಮಳವಳ್ಳಿ ಮಾದೇಸ್ವಾಮಿ, ವಿನಯ್ ಅವರ ಸಿನಿಮಾ ಪಯಣ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದ ಅವರು, “ವಿನಯ್, ನಿಮ್ಮ ತಾತನ ಹೆಸರು ಉಳಿಸಪ್ಪ. ಒಳ್ಳೊಳ್ಳೆ ಸಿನಿಮಾ ಮಾಡಿ” ಎಂದು ಶುಭ ಹಾರೈಸಿದ್ದಾರೆ. ಮಾದೇಸ್ವಾಮಿ ಅವರ ಈ ಮಾತುಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿವೆ.

ಮಳವಳ್ಳಿ ಮಹಾದೇವಸ್ವಾಮಿ ಎಂದೇ ಖ್ಯಾತರಾಗಿರುವ ಕೃಷ್ಣಾಪುರ ಮಾದಯ್ಯ ಮಹಾದೇವಸ್ವಾಮಿ ಅವರು ಕನ್ನಡ ಜಾನಪದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹೆಸರಾಂತ ಗಾಯಕರು. ಮಂಟೇಸ್ವಾಮಿ, ಸಿದ್ದಪ್ಪಾಜಿ ಹಾಗೂ ಮಲೆ ಮಹದೇಶ್ವರರ ಕುರಿತಾದ ಜಾನಪದ ಮತ್ತು ಭಕ್ತಿಗೀತೆಗಳ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳವಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದ ಶೆಹನಾಯಿ ಮಾದಯ್ಯ ಹಾಗೂ ಸೋಬಾನೆ ಮಂಚಮ್ಮ ದಂಪತಿಯ ಪುತ್ರರಾಗಿರುವ ಮಹಾದೇವಸ್ವಾಮಿ ಅವರು ಎಸ್‌ಎಸ್‌ಎಲ್‌ಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನೀಲಗಾರರ ಪರಂಪರೆಗೆ ಸೇರಿದ ಅವರು ಮಂಟೇಸ್ವಾಮಿ, ಸಿದ್ದಪ್ಪಾಜಿ ಹಾಗೂ ಮಲೆ ಮಾದಪ್ಪನ ಕುರಿತಾದ ಹಾಡುಗಳನ್ನು ಹಾಡುವ ಮೂಲಕ ಜಾನಪದ ಲೋಕದಲ್ಲಿ ತಮ್ಮದೇ ಆದ ಸ್ಥಾನ ಪಡೆದರು.

ಅವರ ‘ಮಾದೇಶ್ವರ ದಯಾ ಬಾರದೆ’ ಹಾಡು ಅತ್ಯಂತ ಜನಪ್ರಿಯತೆ ಗಳಿಸಿತ್ತು. ಬಳಿಕ ಎಸ್‌. ಜಾನಕಿ, ವಾಣಿ ಜಯರಾಮ್, ಸಂಗೀತಾ ಕಟ್ಟಿ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್, ಬಿ.ಆರ್. ಛಾಯಾ ಸೇರಿದಂತೆ ಹಲವು ಖ್ಯಾತ ಗಾಯಕರೊಂದಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದರು.

ಗಾಯನದ ಜೊತೆಗೆ ‘ಸಿದ್ದಪ್ಪಜಿಯ ಪವಾಡಗಳು’ ಚಿತ್ರದಲ್ಲಿ ಶೀರ್ಷಿಕೆ ಪಾತ್ರದಲ್ಲಿ ನಟಿಸುವ ಮೂಲಕವೂ ಗಮನ ಸೆಳೆದರು. ಅವರ ಅಭಿನಯದ ಈ ಚಿತ್ರವು ಹಾಡುಗಳ ಕಾರಣದಿಂದಲೂ ಜನಪ್ರಿಯವಾಗಿತ್ತು.

 ವಿನಯ್’ಗೆ ಸಕ್ಸಸ್ ತಂದುಕೊಡದ ‘ಗ್ರಾಮಾಯಣ’

ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಅಭಿನಯದ ‘ಗ್ರಾಮಾಯಣ’ ಸಿನಿಮಾ ಅಷ್ಟೇನು ಸೌಂಡ್  ಮಾಡಲಿಲ್ಲ.  ದೇವನೂರು ಚಂದ್ರು ನಿರ್ದೇಶನದ ಈ ಚಿತ್ರವು 2000ರ ಆಸುಪಾಸಿನ ಗ್ರಾಮೀಣ ಕರ್ನಾಟಕದ ಬದುಕು, ಸಂಬಂಧಗಳು, ಪ್ರೀತಿ, ರಾಜಕೀಯ ಹಾಗೂ ರೈತರ ಸಮಸ್ಯೆಗಳನ್ನು ಕಥೆಯ ಮೂಲಕ ತೆರೆಗೆ ತಂದಿದೆ.

ಚಿತ್ರದ ನಾಯಕ ಸೀನಾ ಪಾತ್ರದಲ್ಲಿ ವಿನಯ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಗುರಿಯಿಲ್ಲದೆ ಜೀವನ ಸಾಗಿಸುವ ಸೀನಾ, ತನ್ನ ಸ್ನೇಹಿತರೊಂದಿಗೆ ಸೇರಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುತ್ತಾನೆ. ಆದರೆ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸೆ ಆತನಲ್ಲಿದೆ. ಇದೇ ವೇಳೆ ಮೇಘಾ ಶೆಟ್ಟಿ ಅಭಿನಯದ ಕುಸುಮಾ ಜೊತೆಗಿನ ಪ್ರೇಮಕಥೆಯೂ ಸಿನಿಮಾದ ಪ್ರಮುಖ ಭಾಗವಾಗಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular