HomeKarnatakaBIG NEWS: ಸಲೂನ್ ಶಾಪ್ ನಲ್ಲಿ ಬೆಂಕಿ ಅವಘಡ; ದೇವರ ಮುಂದೆ ಹಚ್ಚಿದ ದೀಪದಿಂದ ಅನಾಹುತ...!

BIG NEWS: ಸಲೂನ್ ಶಾಪ್ ನಲ್ಲಿ ಬೆಂಕಿ ಅವಘಡ; ದೇವರ ಮುಂದೆ ಹಚ್ಚಿದ ದೀಪದಿಂದ ಅನಾಹುತ…!

ವಿಜಯಪುರ: ಸಲೂಲ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ವಿಜಯಪುರದ ಮುದ್ದೆಬಿಹಾಳ ಪಟ್ಟಣದ ಮೈಹಿಬೂಬ ನಗರದಲ್ಲಿ ನಡೆದಿದೆ.

ಸರೂರು ಗ್ರಾಮದ ನಿವಾಸಿ ಬಸವರಾಜ್ ರಾಮಣ್ಣ ಹಡಪದ ಎಂಬುವವರಿಗೆ ಸೇರಿದ್ದ ಸಲೂನ್ ಶಾಪ್ ನಲ್ಲಿ ಈ ಅವಘಡ ಸಂಭವಿಸಿದೆ. ಬೆಳಿಗ್ಗೆ ಸಲೂನ್ ಅಂಗಡಿ ಓಪನ್ ಮಾಡಿದ ಮಾಲೀಕ ದೇವರ ಫೋಟೋಗಳಿಗೆ ಪೂಜೆ ಮಾಡಿ, ದೀಪ ಬೆಳಗಿದ್ದರು. ಬಳಿಕ ಅಂಗಡಿ ಬಾಗಿಲು ಹಾಕಿ ಹೊರಗೆ ಹೋಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವರ ಮುಂದೆ ಹಚ್ಚಿದ್ದ ದೀಪದಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೆಲವೆ ಹೊತ್ತಲ್ಲಿ ಇಡೀ ಅಂಗಡಿ, ಅಕ್ಕಪಕ್ಕದ ಅಂಗಡಿಗೂ ವ್ಯಾಪಿಸಿದೆ. ತಕ್ಷಣ ಸ್ಥಳೀಯರು ಅಂಗಡಿ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ.

ಸಲೂನ್ ಮಾಲೀಕ ಸ್ಥಳಕ್ಕೆ ಬರುವಷ್ಟರಲ್ಲಿ ಅಂಗಡಿ ಬೆಂಕಿಗಾಹುತಿಯಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅಕ್ಕಪಕ್ಕದ ಅಂಗಡಿಗೆ ಹೊತ್ತಿಕೊಳ್ಳುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.

ಮುದ್ದೆಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular