HomeKarnatakaBIG NEWS: ಜಾತ್ರೆ ವೇಳೆ ದುರಂತ: ರಥದ ಗಾಲಿಗೆ ಸಿಲುಕಿ ಮತ್ತೋರ್ವ ಭಕ್ತ ಸಾವು

BIG NEWS: ಜಾತ್ರೆ ವೇಳೆ ದುರಂತ: ರಥದ ಗಾಲಿಗೆ ಸಿಲುಕಿ ಮತ್ತೋರ್ವ ಭಕ್ತ ಸಾವು

ವಿಜಯಪುರ: ಜಾತ್ರೆ ವೇಳೆ ದುರಂತ ಸಂಭವಿಸಿದ್ದು, ರಥದ ಗಾಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೇರಿಕೆಯಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆಯಲ್ಲಿ ನೂಕುನುಗ್ಗಲು ಉಂಟಾಗಿ ರಥದ ಗಾಲಿಗೆ 7 ಜನರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಲ್ಲಿ ನಿನ್ನೆ ಅಭಿಷೇಕ್ ಮುಜಗೊಂಡ, ಸೋಬು ಶಿಂಧೆ ಎಂಬ ಇಬ್ಬರು ಮೃತಪಟ್ಟಿದ್ದರು.

ಇಂದು ಚಿಕಿತ್ಸೆ ಫಲಿಸದೇ ಸುರೇಶ್ ಕಟಕದೊಂದ(36) ಎಂಬುವವರು ಮೃತಪಟ್ಟಿದ್ದಾರೆ. ಇತರ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular