HomeKarnatakaರಸ್ತೆಯಲ್ಲಿ ರಾಗಿ ಒಣ ಹಾಕಿದ್ದ ರೈತರು: ಭೀಕರ ಅಪಘಾತದಲ್ಲಿ ತಾತ-ಮೊಮ್ಮಗಳು ಸ್ಥಳದಲ್ಲೇ ದುರ್ಮರಣ

ರಸ್ತೆಯಲ್ಲಿ ರಾಗಿ ಒಣ ಹಾಕಿದ್ದ ರೈತರು: ಭೀಕರ ಅಪಘಾತದಲ್ಲಿ ತಾತ-ಮೊಮ್ಮಗಳು ಸ್ಥಳದಲ್ಲೇ ದುರ್ಮರಣ

ವಿಜಯನಗರ: ರಸ್ತೆಯ ಮೇಲೆ ರಾಗಿ ಒಣ ಹಾಕಿದ್ದಕ್ಕೆ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಅಜ್ಜ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ಜಿಲ್ಲೆಯ ಕೂಡ್ಲಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ರೈತರು ರಾಗಿ ಒಣ ಹಾಕಿದ್ದರು. ಅದೇ ಮಾರ್ಗವಾಗಿ ಬೈಕ್ ನಲ್ಲಿ ಬರುತ್ತಿದ್ದ ತಾತ ಹಾಗೂ ಮೊಮ್ಮಗಳು ಇದ್ದ ಬೈಕ್ ನಿಯಂತ್ರಣ ತಪ್ಪಿ ರಾಗಿಯ ಮೇಲೆ ಬಿದ್ದಿದ್ದಾರೆ. ಇದೇ ವೇಳೆ ಅದೇ ಮಾರ್ಗದಲ್ಲಿ ವೇಗವಾಗಿ ಬಂದ ಲಾರಿ ಬಾಲಕಿಯ ತಲೆಯ ಮೇಲೆ ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತರು ಕೂಡ್ಲಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 8ನೇ ತರಗಿ ವಿದ್ಯಾರ್ಥಿನಿ ಸೃಷ್ಟಿ ಹಾಗೂ ಅವರ ತಾತ ಎಂದು ಗುರುತಿಸಲಾಗಿದೆ. ಸೃಷ್ಟಿ ತನ್ನ ತಾತನ ಜೊತೆ ಸ್ವಗ್ರಾಮ ಕರ್ನಾರಹಟ್ಟಿಗೆ ತೆರಳುತ್ತಿದ್ದಳು. ಈ ವೇಳೆ ಈ ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಕೂಡ್ಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular