ಮುಂಬೈ: ಭಾರತದ ಕುಬೇರ ಮುಕೇಶ್ ಅಂಬಾನಿ ಅವರ ಮನೆಯ ಐಷಾರಾಮಿ ಸೌಲಭ್ಯಗಳು ದೇಶದಾದ್ಯಂತ ಪ್ರಸಿದ್ಧ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ಶೆಹೆನ್‌ಶಾ ಅಮಿತಾಭ್ ಬಚ್ಚನ್ ಅವರ ಮನೆಯಲ್ಲಿರುವ ಒಂದು ಅಚ್ಚರಿಯ ವಸ್ತು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅದೇನಂದರೆ – ಬಿಗ್ ಬಿ ಮನೆಯೊಳಗಿನ ಚಿನ್ನದ ಟಾಯ್ಲೆಟ್ (Golden Toilet). ಈ ವಿಚಾರ ಇದೀಗ ನೆಟ್ಟಿಗರ ನಡುವೆ ಕುತೂಹಲ, ಅಚ್ಚರಿ ಮತ್ತು ವೈರಲ್ ಚರ್ಚೆಗೆ ಕಾರಣವಾಗಿದೆ.
ನಟ ವಿಜಯ್ ವರ್ಮಾ ಅವರು ಹಂಚಿಕೊಂಡಿರುವ ಹಳೆಯ ಫೋಟೋವೊಂದು ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘2026 ಈಸ್ ದಿ ನ್ಯೂ 2016 ಟ್ರೆಂಡ್‌ನ ಭಾಗವಾಗಿ ವಿಜಯ್ ವರ್ಮಾ ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್ ಅವರ ಮನೆಯ ಸ್ನಾನಗೃಹದಲ್ಲಿ (Bathroom) ವಿಜಯ್ ತೆಗೆದುಕೊಂಡ ಸೆಲ್ಫಿ ಎಲ್ಲರ ಕಣ್ಣು ಕುಕ್ಕುವಂತಿದೆ.
ಸೆಲ್ಫಿಯಲ್ಲಿ ಕಂಡ ಆ ಗೋಲ್ಡನ್ ಕಮೋಡ್
ವಿಜಯ್ ವರ್ಮಾ ಪೋಸ್ಟ್ ಮಾಡಿರುವ ಆ ವಿಶೇಷ ಸೆಲ್ಫಿಯ ಹಿನ್ನೆಲೆಯಲ್ಲಿ ಚಿನ್ನದ ಬಣ್ಣದ ಶೌಚಾಲಯ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವಾವ್ ಐಷಾರಾಮಿ ಎಂದರೆ ಹೀಗಿರಬೇಕು ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ವಿಜಯ್ ಅವರಿಗೆ ಇದು ಎಷ್ಟು ವಿಶೇಷ ಅನ್ನಿಸಿತೆಂದರೆ, ತಕ್ಷಣ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ತಮಾಷೆ ಮಾಡುತ್ತಿದ್ದಾರೆ.
https://www.instagram.com/p/DTpYkhxFTbX/?utm_source=ig_web_copy_link
ಭಾವನಾತ್ಮಕವಾಗಿ ನೆನಪಿಸಿಕೊಂಡ ವಿಜಯ್ ವರ್ಮಾ:
ಈ ಫೋಟೋಗಳ ಜೊತೆಗೆ ವಿಜಯ್ ವರ್ಮಾ ಸುದೀರ್ಘವಾದ ಶೀರ್ಷಿಕೆಯನ್ನೂ ಬರೆದುಕೊಂಡಿದ್ದಾರೆ. 2016 ನನ್ನ ವೃತ್ತಿಜೀವನದ ಮೈಲಿಗಲ್ಲಿನ ವರ್ಷ. ಪಿಂಕ್ ಅಂತಹ ಸಿನಿಮಾದಲ್ಲಿ ಬಿಗ್ ಬಿ ಮತ್ತು ಶೂಜಿತ್ ದಾ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅಷ್ಟೇ ಅಲ್ಲದೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದೆ. ನನ್ನ ನೆಚ್ಚಿನ ನಟ ಇರ್ಫಾನ್ ಖಾನ್ ಅವರನ್ನೂ ಇದೇ ವರ್ಷ ಭೇಟಿಯಾಗಿದ್ದು ನನಗೆ ವಿಶೇಷ ಎಂದು ಬರೆದಿದ್ದಾರೆ. ಇದೇ ವೇಳೆ ಬಚ್ಚನ್ ಮನೆಯ ಗೋಲ್ಡನ್ ಟಾಯ್ಲೆಟ್ ಬಗ್ಗೆಯೂ ಅವರು ತಮಾಷೆಯಾಗಿ ಉಲ್ಲೇಖಿಸಿದ್ದಾರೆ.
ವಿಜಯ್ ವರ್ಮಾ ಅವರ ಈ ಹಳೆಯ ಫೋಟೋಗಳಿಂದಾಗಿ ಅಮಿತಾಭ್ ಬಚ್ಚನ್ ಅವರ ರಾಜವೈಭವದ ಜೀವನದ ಒಂದು ಪುಟ್ಟ ಝಲಕ್ ಅಭಿಮಾನಿಗಳಿಗೆ ಸಿಕ್ಕಂತಾಗಿದೆ.

