HomeLatest Newsವಿಜಯ್ ಎಂಜಿಆರ್ ಥರ ಆಗೋಕೆ ಹೊರಟಿದ್ದಾನೆ ಆದ್ರೆ ಅದು ಆಗಲ್ಲ ಎಂದಿದ್ದ ಡಿಕೆಶಿ ಈಗ ಫುಲ್...

ವಿಜಯ್ ಎಂಜಿಆರ್ ಥರ ಆಗೋಕೆ ಹೊರಟಿದ್ದಾನೆ ಆದ್ರೆ ಅದು ಆಗಲ್ಲ ಎಂದಿದ್ದ ಡಿಕೆಶಿ ಈಗ ಫುಲ್ ಸೈಲೆಂಟ್; ವಿಡಿಯೊ

ನಿನ್ನೆ ( ಮೇ 4 ) ಹೊರಬಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಪೈಕಿ ತಮಿಳುನಾಡು ಫಲಿತಾಂಶ ಭಾರೀ ಸದ್ದನ್ನು ಮಾಡಿದೆ. ದೊಡ್ಡ ಇತಿಹಾಸ ಹೊಂದಿರುವ ಡಿಎಂಕೆಯನ್ನೇ ಬಗ್ಗುಬಡಿದ ಹೊಸ ಪಕ್ಷ ಟಿವಿಕೆ ಸರ್ಕಾರ ರಚಿಸುವ ಹಂತಕ್ಕೆ ಬಂದು ತಲುಪಿದೆ.

ಈ ಮೂಲಕ ಈ ಬಾರಿಯ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಅತಿಯಾದ ವಿಶ್ವಾಸ ಹೊಂದಿದ್ದ ಡಿಎಂಕೆಗೆ ಭಾರೀ ಮುಖಭಂಗ ಉಂಟಾಗಿದೆ. ಮುಖ್ಯಮಂತ್ರಿಯಾಗಿದ್ದ ಸ್ಟಾಲಿನ್ ಅವರಿಗೆ ಟಿವಿಕೆ ಅಭ್ಯರ್ಥಿ ಸೋಲುಣಿಸಿದ್ದು, ಟಿವಿಕೆ ಹೊಡೆತಕ್ಕೆ ಡಿಎಂಕೆಗೆ ನೆಲಕಚ್ಚಿದೆ. ಇತ್ತ ಡಿಎಂಕೆ ಬೆಂಬಲಿಸಿದ್ದ ಕಾಂಗ್ರೆಸ್‌ಗೂ ಸಹ ಇದರಿಂದ ಹಿನ್ನಡೆಯುಂಟಾಗಿದೆ.

ಇನ್ನು ಚುನಾವಣೆಗೂ ಮುನ್ನ ಡಿಎಂಕೆ ಪರ ಪ್ರಚಾರ ಮಾಡಲು ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎದುರಾಳಿ ಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದ ಡಿಕೆ ದಳಪತಿ ವಿಜಯ್ ಉಲ್ಲೇಖಿಸಿ ಒಬ್ಬರು ಹೊಸ ಪಕ್ಷ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಜಿಆರ್ ರೀತಿ ಆಗಲು ಹೊರಟಿದ್ದಾರೆ, ಆದರೆ ಅದು ಅಗದ ಕೆಲಸ, ಅವರೇನಿದ್ದರೂ ಸಿನಿಮಾದಲ್ಲಿ ಸಿಎಂ ಆಗಿ ಕೈ ಬೀಸಬೇಕಷ್ಟೆ ಎಂದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಇದೀಗ ವಿಜಯ್ ಅದೇ ರೀತಿ ಸಿಎಂ ಆಗಲು ಹೊರಟಿದ್ದಾರೆ. ಎಂಜಿಆರ್ ರೀತಿಯೇ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಹೀಗೆ ವಿಜಯ್ ಗೆಲುವು ಕಾಣುತ್ತಿದ್ದಂತೆ ಡಿಕೆಶಿ ಆಡಿದ್ದ ಮಾತುಗಳ ವಿಡಿಯೊ ವೈರಲ್ ಆಗಿದೆ.

ಅಂದು ವಿಜಯ್ ವಿರುದ್ಧ ಟೀಕೆ ಮಾಡಿದ್ದ ಡಿಕೆ ನಿನ್ನೆ ಫಲಿತಾಂಶ ಹೊರಬಿದ್ದಾಗ ಅಚ್ಚರಿಯ ಫಲಿತಾಂಶ ಎಂದಿದ್ದಾರೆ. ವಿಜಯ್ ಪಕ್ಷ 30 ಸ್ಥಾನಗಳನ್ನು ಗೆಲ್ಲಬಹುದು ಎಂದು ಊಹಿಸಿದ್ದೆ, ಆದರೆ ಇಷ್ಟರ ಮಟ್ಟಿಗೆ ಗೆಲ್ಲುತ್ತಾರೆ ಎಂದುಕೊಂಡಿರಲಿಲ್ಲ ಎಂದರು. ಈ ಮೂಲಕ ವಿಜಯ್ ಗೆಲುವು ಡಿಕೆ ಶಿವಕುಮಾರ್ ಅವರ ಟೀಕೆಯನ್ನು ಸೈಲೆಂಟ್ ಆಗಿಸಿಬಿಟ್ಟಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular