HomeEntertainmentಇತರ ನಟರಿಗೆ ಸಾಧ್ಯವಾಗದ್ದನ್ನು ವಿಜಯ್ ಸಾಧಿಸಿದ್ದು ಹೇಗೆ: ನಟ ವಿಶಾಲ್ ನೀಡಿದ ಆಸಕ್ತಿಕರ ವಿವರಣೆ

ಇತರ ನಟರಿಗೆ ಸಾಧ್ಯವಾಗದ್ದನ್ನು ವಿಜಯ್ ಸಾಧಿಸಿದ್ದು ಹೇಗೆ: ನಟ ವಿಶಾಲ್ ನೀಡಿದ ಆಸಕ್ತಿಕರ ವಿವರಣೆ

ತಮಿಳು ಚಿತ್ರರಂಗದ ಪ್ರಮುಖ ನಟ ವಿಶಾಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟ ವಿಜಯ್ ಅವರ ರಾಜಕೀಯ ಯಶಸ್ಸಿನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದ ಹಲವು ಹಿರಿಯ ನಟರು ರಾಜಕೀಯಕ್ಕೆ ಬಂದು ಯಶಸ್ಸು ಕಾಣಲು ಸಾಧ್ಯವಾಗದಿದ್ದರೂ, ವಿಜಯ್ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಹೇಗೆ ನೆಲೆ ಕಂಡುಕೊಂಡರು ಎಂಬುದನ್ನು ಅವರು ವಿಶ್ಲೇಷಿಸಿದ್ದಾರೆ.

ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರನ್ನು ಭೇಟಿಯಾದ ಅನುಭವವನ್ನು ವಿಶಾಲ್ ನೆನಪಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೂ ವಿಜಯ್ ಅವರ ಸರಳತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಹುದ್ದೆ ಮಾತ್ರ ಬದಲಾಗಿದೆ ಎಂದು ವಿಶಾಲ್ ತಿಳಿಸಿದ್ದಾರೆ.

ಈ ಹಿಂದೆ ಶಿವಾಜಿ ಗಣೇಶನ್, ಕೆ. ಭಾಗ್ಯರಾಜ್ ಮುಂತಾದ ಜನಪ್ರಿಯ ನಟರು ಹಾಗೂ ನಿರ್ದೇಶಕರು ಸ್ವಂತ ಪಕ್ಷ ಕಟ್ಟಿದರೂ ಸಫಲರಾಗಲಿಲ್ಲ. ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ, ದೇಶದ ಇತರ ಚಿತ್ರರಂಗಗಳ ನಟರಾದ ಅಮಿತಾಭ್ ಬಚ್ಚನ್ ಅಥವಾ ಮಿಥುನ್ ಚಕ್ರವರ್ತಿ ಅವರಂತಹ ದೊಡ್ಡ ತಾರೆಯರಿಗೂ ಇದು ಸಾಧ್ಯವಾಗಲಿಲ್ಲ. ಆದರೆ ವಿಜಯ್ ವಿಷಯದಲ್ಲಿ ಇದು ವಿಭಿನ್ನವಾಗಿ ಕೆಲಸ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಕೀಯ ಎಂಬುದು ಕೇವಲ ಗ್ಲಾಮರ್‌ನಿಂದ ಬರುವುದಿಲ್ಲ, ಅದಕ್ಕೆ ಜನರ ಕರೆ ಮತ್ತು ಬೆಂಬಲ ಮುಖ್ಯ. ಜನ ಬದಲಾವಣೆಯನ್ನು ತೀವ್ರವಾಗಿ ಬಯಸಿದ್ದರು ಮತ್ತು ವಿಜಯ್ ಅವರ ನೇರ ನಡೆ-ನುಡಿ ಸಾರ್ವಜನಿಕರೊಂದಿಗೆ ವಿಶೇಷ ಬಾಂಧವ್ಯ ಬೆಸೆಯಲು ನೆರವಾಯಿತು. ವಿಶೇಷವಾಗಿ ಹೊಸ ಮತದಾರರು ಈ ಬದಲಾವಣೆಯನ್ನು ಬೆಂಬಲಿಸಿದ್ದಾರೆ ಎಂದು ವಿಶಾಲ್ ವಿವರಿಸಿದ್ದಾರೆ.

ಚುನಾವಣಾ ಪ್ರಚಾರದ ಕೊನೆಯ ದಿನ ವಿಜಯ್ ಮಾಡಿದ ಭಾಷಣ ಅತ್ಯಂತ ಪ್ರಭಾವಶಾಲಿಯಾಗಿತ್ತು. ಪ್ರತಿಯೊಬ್ಬ ಯುವಕ-ಯುವತಿಯರು ತಮ್ಮ ಮನೆಯ ಹಿರಿಯರಿಗೆ ಹಾಗೂ ಪೋಷಕರಿಗೆ ಒಮ್ಮೆ ತಮಗೆ ಮತ ನೀಡುವಂತೆ ಮನವಿ ಮಾಡಲು ಕೋರಿದ್ದರು. ಈ ಮಾತುಗಳು ಜನರ ಮೇಲೆ ತೀವ್ರ ಪರಿಣಾಮ ಬೀರಿದವು. ಮೊಮ್ಮಗಳ ವಿನಂತಿಗೆ ಸ್ಪಂದಿಸಿ ನ್ಯಾಯಾಧೀಶರೊಬ್ಬರು ಟಿವಿ ಕೆ ಪಕ್ಷಕ್ಕೆ ಮತ ಹಾಕಿದ ಉದಾಹರಣೆಯನ್ನು ವಿಶಾಲ್ ಇಲ್ಲಿ ಪ್ರಸ್ತಾಪಿಸಿದ್ದಾರೆ.

ಇನ್ನು ಸಿನಿಮಾದ ವಿಷಯಕ್ಕೆ ಬರುವುದಾದರೆ, ವಿಶಾಲ್ ಅವರು ‘ಮಗುಡಂ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದು, ಈ ಸಿನಿಮಾ ಆಗಸ್ಟ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular