HomeInternationalನಾನು ವಂಚಕನಲ್ಲ, ವಂಚಕ ಎಂದು ಬಿಂಬಿಸಿದ್ರು: ವಿಜಯ್ ಮಲ್ಯ

ನಾನು ವಂಚಕನಲ್ಲ, ವಂಚಕ ಎಂದು ಬಿಂಬಿಸಿದ್ರು: ವಿಜಯ್ ಮಲ್ಯ

ಲಂಡನ್- ಕಿಂಗ್‌ಫಿಷರ್‌ ಏರ್‌ಲೈನ್‌್ಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ, ತಮ ವಿರುದ್ಧದ ವಂಚಕ ಮತ್ತು ಭಗೋಡಾ ಎಂಬ ಆರೋಪಗಳ ಕುರಿತು ಮತ್ತೆ ಪ್ರತಿಕ್ರಿಯಿಸಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಮಲ್ಯಾ, ತಮ ಪ್ರಕರಣದಲ್ಲಿ ಹಣಕಾಸಿನ ಲೆಕ್ಕಾಚಾರವನ್ನು ನ್ಯಾಯಸಮತವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನ್ಯಾಯಯುತ ಮತ್ತು ಸರಿಯಾದ ಲೆಕ್ಕಾಚಾರದಲ್ಲಿ ನಂಬಿಕೆ ಇರುವ ಎಲ್ಲರೂ ಈ ಪಟ್ಟಿಯನ್ನು ನೋಡಿ. ಆರಂಭದಿಂದಲೇ ನನ್ನನ್ನು ವಂಚಕ ಎಂದು ಬಿಂಬಿಸುವುದು ಇನ್ನೂ ನ್ಯಾಯವೇ? ನನಗೆ ಬರಬೇಕಾಗಿರುವ ಮರುಪಾವತಿ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಯನ್ನು ಏಕೆ ಕೇಳಬಾರದು? ಎಂದು ಮಲ್ಯ ಪ್ರಶ್ನಿಸಿದ್ದಾರೆ.

ಮಲ್ಯ ಹಂಚಿಕೊಂಡಿರುವ ದಾಖಲೆ ಪ್ರಕಾರ, 2017ರ ಜನವರಿ 19 ರಂದು 6,203 ಕೋಟಿ ರೂಪಾಯಿಗಳಷ್ಟಿದ್ದ ಯಾಗಿದ್ದ ಸಾಲಗಳ ವಸೂಲಿ ಮೇಲನವವಿ ನ್ಯಾಯಾಧಿಕರಣ ಡಿಆರ್‌ಟಿ ಆದೇಶದ ಮೊತ್ತವನ್ನು ವಾರ್ಷಿಕ ಶೇ.11ರಷ್ಟು ಬಡ್ಡಿ ಮತ್ತು ವಾರ್ಷಿಕ ವಿಶ್ರಾಂತಿ ಲೆಕ್ಕಾಚಾರದಲ್ಲಿ ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2017ರ ಜನವರಿ 19 ರಂದು ಹೊರಡಿಸಲಾದ ಆದೇಶದ ಪ್ರಕಾರ 6,203 ಕೋಟಿ ರೂ.ಗಳೆಂದು ಆದೇಶಿಸಲಾಗಿತ್ತು. ಬಡ್ಡಿ ಸೇರಿಸಿ ಅದು 2018ರ ಜ.18ಕ್ಕೆ 6,916.35 ಕೋಟಿ ರೂ., 2019ರ ಜ.17ಕ್ಕೆ 7,711.73 ಕೋಟಿ ರೂ., 2020ರ ಜ.16ಕ್ಕೆ 8,598.58 ಕೋಟಿ ರೂ., 2021ರ ಜ.15ಕ್ಕೆ 9,587.42 ಕೋಟಿ ರೂ., 2021ರ ಆಗಸ್ಟ್‌ 2ರ ವೇಳೆಗೆ ಅದು 10,230.58 ಕೋಟಿ ರೂ.ಗಳಾಗಿದೆ ಎಂದು ವಿವರಿಸಲಾಗಿದೆ.

ಇದೇ ದಾಖಲೆ ಪ್ರಕಾರ, 2 ಆಗಸ್ಟ್‌ 2021ರ ವೇಳೆ ಬ್ಯಾಂಕ್‌ ಕನ್ಸೋರ್ಟಿಯಂಗೆ ಮರಳಿ ನೀಡಲಾದ ಚರ ಮತ್ತು ಸ್ಥಿರ ಆಸ್ತಿಗಳ ಮೌಲ್ಯ 14,131.60 ಕೋಟಿ ರೂ.ಗಳು ಎಂದು ಜಾರಿ ನಿರ್ದೇಶನಾಲಯದ ಉತ್ತರದಲ್ಲೇ ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ 3,901.02 ಕೋಟಿ ರೂ. ಹೆಚ್ಚುವರಿ ಮೊತ್ತ ಮರುಪಾವತಿಯಾಗಬೇಕಿದೆ ಎಂದು ಮಲ್ಯ ಲೆಕ್ಕಾಚಾರದ ಪಟ್ಟಿ ನೀಡಿದ್ದಾರೆ.

6,722 ಕೋಟಿಗೆ ಏರಿಕೆ?

6,722 ಕೋಟಿಗೆ ಏರಿಕೆ?:

ಮಲ್ಯ ಹಂಚಿಕೊಂಡಿರುವ ಎರಡನೇ ಪಟ್ಟಿಯಲ್ಲಿ, 2021ರ ಆಗಸ್ಟ್‌ 2ರ ವೇಳೆಗೆ ಹೆಚ್ಚುವರಿಯಾಗಿದೆ ಎಂದು ಅಂದಾಜಿಸಲಾದ 3,901.02 ಕೋಟಿ ರೂ.ಗೆ ವಾರ್ಷಿಕ ಶೇ.11.5ರಷ್ಟು ಬಡ್ಡಿ ಲೆಕ್ಕ ಹಾಕಲಾಗಿದೆ. ಅದರ ಪ್ರಕಾರ 2021ರ ಆಗಸ್ಟ್‌ 2ರಲ್ಲಿ 3,901.02 ಕೋಟಿ ರೂ.ಗಳಿದ್ದ ಮೊತ್ತ ಮುಂದಿನ ವರ್ಷ 2022ರ ಆಗಸ್ಟ್‌ 1ಕ್ಕೆ ಶೇ.11.5ರ ಬಡ್ಡಿಯೊಂದಿಗೆ 4,349.64 ಕೋಟಿ ರೂ.ಗಳಾಗುತ್ತದೆ. 2023ರ ಜುಲೈ 31ಕ್ಕೆ 4,849.85 ಕೋಟಿ ರೂ., 2024ರ ಜುಲೈ 30ಕ್ಕೆ 5,407.59 ಕೋಟಿ ರೂ., 2025ರ ಜುಲೈ 29ಕ್ಕೆ 6,029.46 ಕೋಟಿ ರೂ., 2026ರ ಜುಲೈ 28ಕ್ಕೆ 6,722.86 ಕೋಟಿ ರೂ.ಗಳಾಗುತ್ತವೆ ಎಂದು ವಿವರಿಸಿದ್ದಾರೆ.

ಮಲ್ಯ ಹಂಚಿಕೊಂಡಿರುವ ಲೆಕ್ಕಾಚಾರದ ಪ್ರಕಾರ, ಬ್ಯಾಂಕ್‌ ಕನ್ಸೋರ್ಟಿಯಂನಿಂದ 6,722.86 ಕೋಟಿ ರೂ. ಮರುಪಾವತಿಯಾಗಬೇಕಿದೆ. ಈ ಹಣ ನನಗೆ ಯಾವಾಗ ಸಿಗಲಿದೆ ಎಂದು ಪ್ರಶ್ನಿಸಿದ್ದಾರೆ.

ಇಡಿ ಜಪ್ತಿ

ಇಡಿ ಜಪ್ತಿ:

ಮತ್ತೊಂದು ತಮ ಪ್ರಮುಖ ವಾದದಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ತನ್ನ ಆಸ್ತಿ ಮತ್ತು ಹಣವನ್ನು ಜಪ್ತಿ ಮಾಡಿದ್ದರಿಂದಲೇ ಕಿಂಗ್‌ಫಿಷರ್‌ ಸಿಬ್ಬಂದಿಗೆ ಬಾಕಿ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಮಲ್ಯ ಸ್ಪಷ್ಟನೆ ನೀಡಿದ್ದಾರೆ.

ಜಪ್ತಿ ಮಾಡಿದ್ದ ಹಣದಿಂದಲೇ ಜಾರಿ ನಿರ್ದೇಶನಾಲಯ ಕಿಂಗ್‌ಫಿಷರ್‌ಏರ್‌ ಲೈನ್‌್ಸ ಉದ್ಯೋಗಿಗಳಿಗೆ 350 ಕೋಟಿ ರೂ. ವೇತನ ಬಿಡುಗಡೆ ಮಾಡಿದೆ. ಇಡಿ ನನ್ನ ಆಸ್ತಿ ಮತ್ತು ಹಣ ಜಪ್ತಿ ಮಾಡಿದ್ದರಿಂದ ನಾನು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಪರಾರಿಯಾದವನಲ್ಲ

ನಾನು ಪರಾರಿಯಾದವನಲ್ಲ:

ತಮನ್ನು ದೇಶ ಬಿಟ್ಟು ಪರಾರಿಯಾದವನು ಭಗೋಡಾ ಎಂದು ಕರೆಯಬಾರದು ಎಂದು ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾನು 1992ರಿಂದಲೇ ಯುನೈಟೆಡ್‌ ಕಿಂಗ್‌ಡಮ್‌ನ ಶಾಶ್ವತ ನಿವಾಸಿಯಾಗಿದ್ದೇನೆ. ಪ್ರಸ್ತುತ ಕಾನೂನುಬದ್ಧ ನಿರ್ಬಂಧಗಳಿಂದಾಗಿ ನಾನು ಈ ದೇಶವನ್ನು ತೊರೆಯಲು ಸಾಧ್ಯವಿಲ್ಲ. ಭಾರತ ಸರ್ಕಾರ ಕೈಗೊಂಡ ಕ್ರಮಗಳಿಂದಲೇ ಈ ಸಂಪೂರ್ಣ ವಿಚಾರ ಪ್ರಾರಂಭವಾಯಿತು. ನನ್ನ ಪ್ರಕರಣದಲ್ಲಿ ಸರ್ಕಾರ ಅತ್ಯಂತ ಅನ್ಯಾಯವಾಗಿ ನಡೆದುಕೊಂಡಿದೆ ಎಂದು ಮಲ್ಯ ಆರೋಪಿಸಿದ್ದಾರೆ.

ಹಿನ್ನೆಲೆ

ಹಿನ್ನೆಲೆ:

ಕಿಂಗ್‌ಫಿಷರ್‌ ಏರ್‌ಲೈನ್‌್ಸಗೆ ಸಂಬಂಧಿಸಿದ ಬ್ಯಾಂಕ್‌ ಸಾಲ ಪ್ರಕರಣದಲ್ಲಿ ಮಲ್ಯ ವಿರುದ್ಧ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. 2021ರ ಲೆಕ್ಕಾಚಾರದಲ್ಲಿ ಡಿಆರ್‌ಟಿ ಆದೇಶದ ಮೊತ್ತ ಮತ್ತು ಆಸ್ತಿಗಳ ಮೌಲ್ಯವನ್ನು ಆಧರಿಸಿ ಮಲ್ಯ ಇದೀಗ ಬ್ಯಾಂಕ್‌ಗಳಿಗೆ ಪಾವತಿಸಬೇಕಾದ ಮೊತ್ತಕ್ಕಿಂತ ಹೆಚ್ಚಿನ ಆಸ್ತಿ ಮರುಪಡೆಯಲಾಗಿದೆ. ಹಾಗಿದ್ದರೆ ಹೆಚ್ಚುವರಿ ಹಣ ನನಗೆ ಯಾವಾಗ ವಾಪಸ್‌‍? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. 2026ರ ಆಗಸ್ಟ್‌ ನಲ್ಲಿಯೂ ಮಲ್ಯ ಸಂಬಂಧಿತ ಸಾಲ-ಆಸ್ತಿ ವಿವಾದದಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿದಿದೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular