HomeEntertainmentBRERAKING: ದಳಪತಿ ವಿಜಯ್ ಗೆ ಮತ್ತೆ ಶಾಕ್: 'ಜನ ನಾಯಗನ್' ಬಿಡುಗಡೆ ತನ್ನದೇ ಆದೇಶಕ್ಕೆ ತಡೆ...

BRERAKING: ದಳಪತಿ ವಿಜಯ್ ಗೆ ಮತ್ತೆ ಶಾಕ್: ‘ಜನ ನಾಯಗನ್’ ಬಿಡುಗಡೆ ತನ್ನದೇ ಆದೇಶಕ್ಕೆ ತಡೆ ನೀಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ.

‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಅವಕಶ ನೀಡಬೇಕು. ಸಿನಿಮಾಗೆ U/A ಪ್ರಮಾಣಪತ್ರ ನೀಡಬೇಕು ಎಂದು ಸಿಬಿಎಫ್ ಸಿಗೆ ಸೂಚನೆ ನೀಡಿ ಬೆಳಿಗ್ಗೆಯಷ್ಟೇ ಆದೇಶ ಹೊರಡಿಸಿದ್ದ ಮದ್ರಾಸ್ ಹೈಕೋರ್ಟ್, ಸಂಜೆ ವೇಳೆಗೆ ತನ್ನದೇ ಆದೇಶಕ್ಕೆ ತಡೆ ನೀಡಿದೆ.

ಬೆಳಿಗ್ಗೆ ನೀಡಿದ್ದ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮದ್ರಾಸ್ ಹೈಕೋರ್ಟ್ ಮರು ಆದೇಶ ಹೊರಡಿಸಿದ್ದು, ಪ್ರಮಾಣಪತ್ರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಆದೇಶ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಜನ ನಾಯಗನ್’ ಸಿನಿಮಾದಲ್ಲಿ ಹಲವು ರಾಜಕೀಯ ಅಂಶಗಳು ಇದ್ದು, ಇದೇ ಕಾರಣಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತ್ತು. ಆದರೆ ಮಧ್ಯಪ್ರವೇಶ ಮಾಡಿದ್ದ ಮದ್ರಾಸ್ ಹೈಕೋರ್ಟ್ ಯುಎ ಸರ್ಟಿಫಿಕೇಟ್ ನೀಡುವಂತೆ ಸೂಚಿಸಿ ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಹೇಳಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಆದೇಶಕ್ಕೆ ಮತ್ತೆ ತಡೆ ನೀಡಿದೆ. ಈ ಬೆಳವಣಿಗೆ ವಿಜಯ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular